ವೀರಾಜಪೇಟೆ ನ. 3: ವೀರಾಜಪೇಟೆ ಬಳಿಯ ಕಲ್ತೋಡು ಮಾದರಿ ಪ್ರಾಥಮಿಕ ಶಾಲೆಯಲ್ಲಿ ಹೊಸದಾಗಿ ನಿರ್ಮಿಸಿದ ಅಕ್ಷರ ದಾಸೋಹ ಅಡುಗೆ ಕೋಣೆಯನ್ನು ಈಚೆಗೆ ಬಿಟ್ಟಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಪುಚ್ಚಿಮಂಡ ಬೆಳ್ಯಪ್ಪ ಉದ್ಘಾಟಿಸಿದರು.
ಉದ್ಘಾಟನಾ ಸಮಾರಂಭದಲ್ಲಿ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರು, ಸದಸ್ಯರುಗಳು, ಶಿಕ್ಷಕರು, ವಿದ್ಯಾರ್ಥಿ ವೃಂದ ಶಾಲೆಯ ಉಸ್ತುವಾರಿ ಕುಪ್ಪಂಡ ಬೋಪಯ್ಯ ಹಾಜರಿದ್ದರು. ಈ ಸಂದರ್ಭದಲ್ಲಿ ಬಲ್ಲಚಂಡ ಗೀತಾ ಪೊನ್ನಪ್ಪ ಅವರು ಶಾಲೆಗೆ ಅಗತ್ಯವಿರುವ ಕುರ್ಚಿಗಳನ್ನು ಉದಾರವಾಗಿ ನೀಡಿದರು.