ಮಡಿಕೇರಿ, ನ. 3: ಇಪ್ಪತ್ತೆಂಟು ವರ್ಷಗಳ ಹಿಂದೆ ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಜರುಗಿದ ಐತಿಹಾಸಿಕ ಕರಸೇವಕರೊಂದಿಗೆ, ಬಲಿದಾನಗೈದವರ ಸಂಸ್ಮರಣೆ ಕಾರ್ಯಕ್ರಮ ವಿ.ಹಿಂ.ಪ.- ಬಜರಂಗದಳ ವತಿಯಿಂದ ಇಲ್ಲಿನ ಭಾರತೀಯ ವಿದ್ಯಾಭವನ ಸಭಾಂಗಣದಲ್ಲಿ ಜರುಗಿತು. ರಾಷ್ಟ್ರೀಯ ಮಡಿಕೇರಿ, ನ. 3: ಇಪ್ಪತ್ತೆಂಟು ವರ್ಷಗಳ ಹಿಂದೆ ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಜರುಗಿದ ಐತಿಹಾಸಿಕ ಕರಸೇವಕರೊಂದಿಗೆ, ಬಲಿದಾನಗೈದವರ ಸಂಸ್ಮರಣೆ ಕಾರ್ಯಕ್ರಮ ವಿ.ಹಿಂ.ಪ.- ಬಜರಂಗದಳ ವತಿಯಿಂದ ಇಲ್ಲಿನ ಭಾರತೀಯ ವಿದ್ಯಾಭವನ ಸಭಾಂಗಣದಲ್ಲಿ ಜರುಗಿತು. ರಾಷ್ಟ್ರೀಯ ಬದಲಾಯಿತು ಎಂದರಲ್ಲದೆ, ಹಿಂದೂ ಅಸ್ಮಿತೆಗೆ ದೊರೆತ ಮೊದಲ ಜಯ ಇದೆಂದು ಅಭಿಪ್ರಾಯಪಟ್ಟರು.
ಕಳೆದ 65 ವರ್ಷಗಳ ಬಳಿಕ ರಾಮಜನ್ಮಭೂಮಿ ಕುರಿತು ನ್ಯಾಯಾಲಯದ ತೀರ್ಪು ಹೊರ ಬೀಳುತ್ತದೆ ಎಂದು ಹಿಂದೂಗಳೆಲ್ಲ ಒಂದಾಗಿ ಕಾಯುತ್ತಿದ್ದರೂ ವಿಳಂಬದಿಂದ ಅಯೋಧ್ಯೆ ಮಂದಿರ ನಿರ್ಮಾಣ ಕಾರ್ಯದಲ್ಲಿ ತೊಡಕಾಗಿದೆ ಎಂದು ಚಕ್ಕೇರ ಮನು ಅಭಿಪ್ರಾಯಪಟ್ಟರು.
ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ನಡೆದ ಐತಿಹಾಸಿಕ ಕರಸೇವೆಯಲ್ಲಿ ವಿಜಯ ಸಾಧಿಸುವದರೊಂದಿಗೆ, ಬಲಿದಾನಗೈದವರನ್ನು ಸ್ಮರಿಸುತ್ತಾ, ಬ್ರಿಟಿಷರ ಆಳ್ವಿಕೆಯ ನಂತರ 1990ರಲ್ಲಿ ಮುಲಾಯಮ್ ಸಿಂಗ್ ಯಾದವ್ ಸರ್ಕಾರವು ಮೊಘಲರ ಆಳ್ವಿಕೆಯಂತೆ ವರ್ತಿಸಿದ್ದಾಗಿ ಬೊಟ್ಟು ಮಾಡುತ್ತಾ, ಹಿಂದು ವಿರೋಧಿ ನೀತಿಗೆ ಸಾಕ್ಷಿಯಾಗಿದೆ ಎಂದು ಟೀಕಿಸಿದರು. ಹಿಂದುತ್ವ ನಾಶಮಾಡಲು ವಿಚಾರ ವಾದಿಗಳು ಸಂಚು ರೂಪಿಸುತ್ತಿದ್ದಾರೆ. ನಾವು ಅದರ ನೈಜಚರಿತ್ರೆ ಅರಿತು ದೇಶವನ್ನು ಕಟ್ಟಬೇಕು. ಅಲ್ಲದೆ, 65 ವರ್ಷಗಳ ನಂತರ ಅಯೋಧ್ಯೆ ತೀರ್ಪು ಹೊರ ಬೀಳುವ ನಿರೀಕ್ಷೆ ಯಿದ್ದು, ಮತ್ತೊಂದು ಆಂದೋಲನಕ್ಕೆ ಸನ್ನದ್ಧರಾಗಲು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕರಸೇವೆಯಲ್ಲಿ ಭಾಗವಹಿಸಿದ್ದ ಅನೇಕ ಕಾರ್ಯಕರ್ತ ರಿಗೆ ಶಾಲು ಹೊದಿಸಿ ಸನ್ಮಾನಿಸ ಲಾಯಿತು. ವೇದಿಕೆಯಲ್ಲಿ ವಿ.ಹಿಂ.ಪ. ಮುಖಂಡರಾದ ಕೆ.ಎಸ್. ದೇವಯ್ಯ, ಟಾಟ ಬೋಪಯ್ಯ, ಜಿಲ್ಲಾ ಕಾರ್ಯವಾಹ ಕೆ.ಕೆ. ದಿನೇಶ್ ಉಪಸ್ಥಿತರಿದ್ದರು. ಬಜರಂಗದಳ ಸಂಚಾಲಕ ಕೆ.ಹೆಚ್. ಚೇತನ್, ಶಾಸಕ ಕೆ.ಜಿ. ಬೋಪಯ್ಯ ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು. ಡಿ. ನರಸಿಂಹ ಸ್ವಾಗತಿಸಿ, ಚಿ.ನಾ. ಸೋಮೇಶ್ ದಿಕ್ಸೂಚಿ ಭಾಷಣದೊಂದಿಗೆ ವಿನಯ್ ನಿರೂಪಿಸಿದರು.