ಸೋಮವಾರಪೇಟೆ, ನ. 3: ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ಅಭಿಮಾನಿಗಳ ಸಂಘದ ವತಿಯಿಂದ ಇಲ್ಲಿನ ಬಸ್ ನಿಲ್ದಾಣದ ಪುಟ್ಟಪ್ಪ ವೃತ್ತದಲ್ಲಿ ಇಂದಿರಾ ಗಾಂಧಿ ಪುಣ್ಯಸ್ಮರಣೆ ನಡೆಯಿತು.
ಸಂಘದ ಅಧ್ಯಕ್ಷ ಹೆಚ್.ಎ. ನಾಗರಾಜ್ ಇಂದಿರಾ ಗಾಂಧಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಪಟ್ಟಣ ಪಂಚಾಯಿತಿಗೆ ನೂತನವಾಗಿ ಆಯ್ಕೆಯಾದ ಶೀಲಾ ಡಿಸೋಜ, ಡಿ.ವಿ. ಉದಯಶಂಕರ್, ಜಯಂತಿ ಶಿವಕುಮಾರ್, ಬಿ.ಸಂಜೀವ, ನಾಗರತ್ನ, ಪ್ರಮುಖರಾದ ಹೆಚ್.ಆರ್. ಸುರೇಶ್, ಕೆ.ಎಂ. ಲೋಕೇಶ್, ಕೆ.ಎ. ಯಾಕೂಬ್ ಮೊದಲಾದವರು ಭಾಗವಹಿಸಿದ್ದರು.