ಕುಶಾಲನಗರ, ನ. 3: ಮಂಗಳೂರು ವಿಶ್ವವಿದ್ಯಾನಿಲಯದ ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರದ ಜೀವರಸಾಯನ ಶಾಸ್ತ್ರ ಅಧ್ಯಯನ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಎಸ್ ಅಶ್ವಿನಿ ಅವರ 'ಕಡಲ ಕಳೆಗಳ ಜೀವರಾಸಾಯನಿಕ ಸಂಯೋಜನೆಯ ಅಧ್ಯಯನ ಮತ್ತು ಮಾನವನ ಗರ್ಭಕಂಠದ ಕ್ಯಾನ್ಸರ್ ಜೀವಕೋಶದ ರೇಖೆಗಳ ಮೇಲಿನ ಪ್ರನಾಳ ಕ್ಯಾನ್ಸರ್ ನಿರೋಧಕ ಚಟುವಟಿಕೆ' ಎಂಬ ಸಂಶೋಧನಾ ಪ್ರಬಂಧಕ್ಕೆ ಪಿಎಚ್‍ಡಿ ಲಭಿಸಿದೆ. ಕೇಂದ್ರದ ಹಿರಿಯ ಪ್ರಾಧ್ಯಾಪಕರಾದ ಪ್ರೊ.ಮಂಜುಳಾ ಶಾಂತರಾಮ್ ಮಾರ್ಗದರ್ಶನದಲ್ಲಿ ಮಂಡಿಸಿದ ಪ್ರಬಂಧ ಇದಾಗಿದ್ದು, ಪ್ರಸ್ತುತ ಬೆಂಗಳೂರಿನ ಸ್ವಾಮೀ ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಉಪಸಂಶೋಧನಾ ವಿದ್ಯಾರ್ಥಿನಿಯಾಗಿದ್ದಾರೆ. ಉದ್ದೇಶ, ವ್ಯಾಪ್ತಿ ಮತ್ತು ಅದರ ಸ್ವರೂಪದ ಕುರಿತು ಮಾಹಿತಿ ನೀಡಿದ್ದಾರೆ.