ಸಿದ್ದಾಪುರ, ನ. 3: ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಗ್ಗಿಲ್ಲದೆ ವ್ಯಾಪಾರದೊಂದಿಗೆ ಗಾಂಜಾ ವ್ಯಸನಿಗಳು ಹೆಚ್ಚಾಗಿದ್ದರೂ ಸಿದ್ದಾಪುರ ಪೊಲೀಸರು ಯಾವದೇ ಕ್ರಮ ಕೈಗೊಳ್ಳದೇ ಗಾಂಜಾ ಮಾರಾಟಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಗ್ರಾಮ ಪಂಚಾಯಿತಿಯ ಸದಸ್ಯರು ಹಾಗೂ ಗ್ರಾಮಸ್ಥರು ಪೋಲಿಸರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತ ಪಡಿಸಿದರು. ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಪದ್ಮಾವತಿ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಗ್ರಾಮ ಸಭೆಯಲ್ಲಿ ಗ್ರಾಮ ಪಂಚಾಯಿತಿಯ ಸದಸ್ಯ ಎ.ಕೆ. ಹಕ್ಕಿಂ ಮಾತನಾಡಿ, ಕೆಲವು ಯುವಕರು ಬ್ಯಾಗಿನಲ್ಲಿ ಹಾಗೂ ಮೊಬೈಲ್‍ನೊಳಗೆ ಗಾಂಜಾ ಇಟ್ಟು ಕೊಂಡು ಮಾರಾಟ ಮಾಡುತ್ತಿದ್ದಾರೆ. ಇತ್ತೀಚೆಗೆ ಯುವಕರಿಬ್ಬರು ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಸಿದ್ದಾಪುರ ಪೊಲೀಸರಿಗೆ ದೂರು ನೀಡಿದ ಸಂದರ್ಭ ಪೊಲೀಸರು ಯುವಕರ ವಿರುದ್ಧ ಯಾವದೇ ಕ್ರಮ ಸಿದ್ದಾಪುರ, ನ. 3: ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಗ್ಗಿಲ್ಲದೆ ವ್ಯಾಪಾರದೊಂದಿಗೆ ಗಾಂಜಾ ವ್ಯಸನಿಗಳು ಹೆಚ್ಚಾಗಿದ್ದರೂ ಸಿದ್ದಾಪುರ ಪೊಲೀಸರು ಯಾವದೇ ಕ್ರಮ ಕೈಗೊಳ್ಳದೇ ಗಾಂಜಾ ಮಾರಾಟಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಗ್ರಾಮ ಪಂಚಾಯಿತಿಯ ಸದಸ್ಯರು ಹಾಗೂ ಗ್ರಾಮಸ್ಥರು ಪೋಲಿಸರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತ ಪಡಿಸಿದರು. ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಪದ್ಮಾವತಿ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಗ್ರಾಮ ಸಭೆಯಲ್ಲಿ ಗ್ರಾಮ ಪಂಚಾಯಿತಿಯ ಸದಸ್ಯ ಎ.ಕೆ. ಹಕ್ಕಿಂ ಮಾತನಾಡಿ, ಕೆಲವು ಯುವಕರು ಬ್ಯಾಗಿನಲ್ಲಿ ಹಾಗೂ ಮೊಬೈಲ್‍ನೊಳಗೆ ಗಾಂಜಾ ಇಟ್ಟು ಕೊಂಡು ಮಾರಾಟ ಮಾಡುತ್ತಿದ್ದಾರೆ. ಇತ್ತೀಚೆಗೆ ಯುವಕರಿಬ್ಬರು ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಸಿದ್ದಾಪುರ ಪೊಲೀಸರಿಗೆ ದೂರು ನೀಡಿದ ಸಂದರ್ಭ ಪೊಲೀಸರು ಯುವಕರ ವಿರುದ್ಧ ಯಾವದೇ ಕ್ರಮ ಕಾಲೇಜುಗಳು ಬಿಡುವ ಸಮಯದಲ್ಲಿ ಕೆಲವು ಪಡ್ಡೆ ಯುವಕರು ಕಾಲು ದಾರಿಗಳಲ್ಲಿ ನಿಂತುಕೊಂಡು ವಿದ್ಯಾರ್ಥಿಗಳನ್ನು ಚುಡಾಯಿ ಸುತ್ತಿದ್ದಾರೆ. ಈ ಬಗ್ಗೆ ಪೋಲಿಸ್ ಇಲಾಖೆಯು ಸೂಕ್ತ ರೀತಿಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.É.
ಕಾರ್ಮಿಕ ಮುಖಂಡ ಪಿ.ಆರ್.ಭರತ್ ಮಾತನಾಡಿ, ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬರಡಿ ಹಾಗೂ ಬೆಟ್ಟದಕಾಡು ನದಿ ದಡದ ಇತ್ತೀಚೆಗೆ ಪ್ರವಾಹಕ್ಕೆ ಸಿಲುಕಿ ಮನೆಗಳು ಹಾನಿಯಾಗಿದ್ದು, ಹಾನಿಯಾಗಿದ್ದ ಮನೆಗಳಲ್ಲಿ ವಾಸಿಸಲು ಅವಕಾಶ ನೀಡಿರುವ ಕಂದಾಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿzರು. ಅಪಾಯದಲ್ಲಿರುವ ಕುಟುಂಬಗಳಿಗೆ ಪರ್ಯಾಯ ವ್ಯವಸ್ಥೆ ಮಾಡಿ ಶಾಶ್ವತ ಸೂರನ್ನು ಒದಗಿಸಿಕೊಡಬೇಕೆಂದು ಒತ್ತಾಯಿಸಿದರು.
ಗ್ರಾಮಸ್ಥ ಓ.ಎಂ. ಮುಸ್ತಫ ಮಾತಾನಾಡಿ. ನೆಲ್ಯಹುದಿಕೇರಿ ವ್ಯಾಪ್ತಿಯಲ್ಲಿ
(ಮೊದಲ ಪುಟದಿಂದ) ಹಗಲಿರುಳು ನದಿ ದಡದಿಂದ ಅಕ್ರಮ ವಾಗಿ ಮರಳು ಸಾಗಾಟವಾಗುತ್ತಿದ್ದರೂ ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಯಾವದೇ ಕ್ರಮ ಕೈಗೊಳ್ಳದೇ ನಿರ್ಲಕ್ಷ ವಹಿಸುತ್ತಿದ್ದಾರೆ ಎಂದು ಆರೋಪಿಸಿದರು. ನೆಲ್ಯಹುದಿಕೇರಿ ವ್ಯಾಪ್ತಿಯಲ್ಲಿ ಪೈಸಾರಿ ಜಾಗಗಳ ಬಗ್ಗೆ ಕಂದಾಯ ಇಲಾಖೆಯು ಸರ್ವೆ ನಡೆಸಿ ಜಾಗ ಪತ್ತೆ ಹಚ್ಚಿದೆಯಾ ಎಂದು ಪ್ರಶ್ನಿಸಿದರು.
ಜೋಸೆಫ್ ಶ್ಯಾಂ ಹಾಗೂ ವಿಶ್ವ ಮಾತನಾಡಿ, ನೆಲ್ಯಹುದಿಕೇರಿ ವ್ಯಾಪ್ತಿಯಲ್ಲಿ ಹಲವಾರು ಅಪಾಯಕಾರಿ ಮರಗಳು ಮನೆಯ ಮೇಲ್ಭಾಗಕ್ಕೆ ಬೀಳುವ ಸ್ಥಿತಿಯಲ್ಲಿದ್ದು, ಈ ಬಗ್ಗೆ ಸಾಕಷ್ಟು ಬಾರಿ ಅರಣ್ಯ ಇಲಾಖೆಗೆ ಅರ್ಜಿಯನ್ನು ನೀಡಿದ್ದರೂ, ಇಲಾಖಾಧಿಕಾರಿಗಳು ಸ್ಪಂಧಿಸದೇ ನಿರ್ಲಕ್ಷ್ಯದಿಂದ ವರ್ತಿಸುತ್ತಿದ್ದಾರೆ, ಅಲ್ಲದೇ ನೆಲ್ಯಹುದಿಕೇರಿ ಗ್ರಾಮದ ಬೆಟ್ಟದಕಾಡು, ನಲವತ್ತೇಕರೆ ಭಾಗದಲ್ಲಿ ಕಾಡಾನೆಗಳ ಹಾವಳಿ ತೀವ್ರವಾಗಿದ್ದು ಈ ಬಗ್ಗೆ ಶಾಶ್ವತ ಯೋಜನೆಯನ್ನು ರೂಪಿಸಬೇಕೆಂದು ಒತ್ತಾಯಿಸಿದರು.
ನೆಲ್ಯಹುದಿಕೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ತಾರಾಮಣಿ ಮಾತನಾಡಿ, ಪ್ರತಿನಿತ್ಯ ಶಾಲೆಯ ಕೊಠಡಿಗಳಿಗೆ ಹಾಕುವ ಬೀಗಗಳನ್ನು ಹೊಡೆದು ಹಾನಿಗೊಳಿಸುತ್ತಿದ್ದಾರೆ. ಇತ್ತೀಚೆಗೆ ಶೌಚಾಲಯದ ಬೀಗವನ್ನು ಒಡೆದು ಹಾಕಿ ಹಳೆಯ ಟಿ.ವಿ.ಯ ಬಿಡಿ ಭಾಗಗಳನ್ನು ಶೌಚಾಲಯಕ್ಕೆ ಹಾಕಿದ್ದಾರೆ ಎಂದು ಬೇಸರ ವ್ಯಕ್ತ ಪಡಿಸಿದರು. ರಾತ್ರಿಯ ಸಮಯದಲ್ಲಿ ಯುವಕರು ಗ್ರಾಮ ಪಂಚಾಯಿತಿಯ ವೈ-ಪೈಯನ್ನು ಬಳಸಿಕೊಂಡು ಮೈದಾನದಲ್ಲಿ ಸುತ್ತಾಡುತ್ತಿದ್ದಾರೆ ಎಂದು ತಿಳಿಸಿದರು. ಇದಕ್ಕೆ ಧ್ವನಿಗೂಡಿಸಿದ ಗ್ರಾಮಸ್ಥರು ರಾತ್ರಿ 7 ಗಂಟೆಯ ಬಳಿಕ ಶಾಲಾ ಆವರಣದಲ್ಲಿ ಅನಗತ್ಯವಾಗಿ ಸುತ್ತಾಡುತ್ತ ಗಾಂಜಾ ವ್ಯಸನಿಗಳು ಶಾಲೆಯ ಕಟ್ಟಡಕ್ಕೆ ಹಾನಿಗೊಳಿಸುತ್ತಿ ದ್ದಾರೆ ಎಂದು ದೂರಿದರು. ಈ ಬಗ್ಗೆ ಪೋಲಿಸ್ ಇಲಾಖೆಯು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಎಂ.ಎ. ಅಜೀಜ್ ಮಾತನಾಡಿ ನೆಲ್ಯಹುದಿಕೇರಿ ಕಾರ್ಪೊರೇಷನ್ ಬ್ಯಾಂಕಿನ ಕ್ಯಾಷಿಯರ್ ಗ್ರಾಹಕರೊಂದಿಗೆ ಗದರಿಸುತ್ತಿದ್ದಾರೆ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ತಾರಾಮಣಿ ಮಾತನಾಡಿ, ಪ್ರತಿನಿತ್ಯ ಶಾಲೆಯ ಕೊಠಡಿಗಳಿಗೆ ಹಾಕುವ ಬೀಗಗಳನ್ನು ಹೊಡೆದು ಹಾನಿಗೊಳಿಸುತ್ತಿದ್ದಾರೆ. ಇತ್ತೀಚೆಗೆ ಶೌಚಾಲಯದ ಬೀಗವನ್ನು ಒಡೆದು ಹಾಕಿ ಹಳೆಯ ಟಿ.ವಿ.ಯ ಬಿಡಿ ಭಾಗಗಳನ್ನು ಶೌಚಾಲಯಕ್ಕೆ ಹಾಕಿದ್ದಾರೆ ಎಂದು ಬೇಸರ ವ್ಯಕ್ತ ಪಡಿಸಿದರು. ರಾತ್ರಿಯ ಸಮಯದಲ್ಲಿ ಯುವಕರು ಗ್ರಾಮ ಪಂಚಾಯಿತಿಯ ವೈ-ಪೈಯನ್ನು ಬಳಸಿಕೊಂಡು ಮೈದಾನದಲ್ಲಿ ಸುತ್ತಾಡುತ್ತಿದ್ದಾರೆ ಎಂದು ತಿಳಿಸಿದರು. ಇದಕ್ಕೆ ಧ್ವನಿಗೂಡಿಸಿದ ಗ್ರಾಮಸ್ಥರು ರಾತ್ರಿ 7 ಗಂಟೆಯ ಬಳಿಕ ಶಾಲಾ ಆವರಣದಲ್ಲಿ ಅನಗತ್ಯವಾಗಿ ಸುತ್ತಾಡುತ್ತ ಗಾಂಜಾ ವ್ಯಸನಿಗಳು ಶಾಲೆಯ ಕಟ್ಟಡಕ್ಕೆ ಹಾನಿಗೊಳಿಸುತ್ತಿ ದ್ದಾರೆ ಎಂದು ದೂರಿದರು. ಈ ಬಗ್ಗೆ ಪೋಲಿಸ್ ಇಲಾಖೆಯು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಎಂ.ಎ. ಅಜೀಜ್ ಮಾತನಾಡಿ ನೆಲ್ಯಹುದಿಕೇರಿ ಕಾರ್ಪೊರೇಷನ್ ಬ್ಯಾಂಕಿನ ಕ್ಯಾಷಿಯರ್ ಗ್ರಾಹಕರೊಂದಿಗೆ ಗದರಿಸುತ್ತಿದ್ದಾರೆ ಸಹಕಾರದೊಂದಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವದೆಂದರು.
ಗ್ರಾಮ ಸಭೆಯಲ್ಲಿ ನೋಡೆಲ್ ಅಧಿಕಾರಿ ರಾಜಶೇಖರ್, ಜಿ.ಪಂ ಸದಸ್ಯೆ ಸುನಿತಾ ಮಂಜುನಾಥ್, ತಾ.ಪಂ. ಸದಸ್ಯೆ ಸುಹಾದ ಹಾಗೂ ಗ್ರಾ.ಪಂ. ಉಪಾದ್ಯಕ್ಷೆ ಸೆಫೀಯಾ ಹಾಗೂ ಪಿ.ಡಿ.ಓ.ನಂಜುಂಡಸ್ವಾಮಿ, ಗ್ರಾ.ಪಂ. ಸದಸ್ಯರುಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು. ಇದೇ ಸಂದರ್ಭ ವಸತಿ ರಹಿತರ ಹಾಗೂ ವಸತಿ ಯೋಜನೆಗಳ ಫಲಾನುಭವಿಗಳ ಪಟ್ಟಿಯನ್ನು ಅಂಗೀಕರಿಸಲಾಯಿತು.
- ಚಿತ್ರ ವರದಿ ವಾಸು