ಮಡಿಕೇರಿ, ನ. 3: ಹಾಕತ್ತೂರು ಬಳಿ ತೊಂಬತ್ತುಮನೆಯಿಂದ ಕೊಂಡಂಗೇರಿಗೆ ಅಕ್ರಮವಾಗಿ ನಾಲ್ಕು ದನಗಳನ್ನು ಸಾಗಿಸುತ್ತಿದ್ದ ಬಗ್ಗೆ ನಿಖರ ಮಾಹಿತಿಯ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಮೂವರು ಆರೋಪಿಗಳ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.ಈ ಸಂಬಂಧ ಪಿಕಪ್ ವಾಹನದೊಂದಿಗೆ 4 ಹಸುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದು, ಜಾನುವಾರುಗಳನ್ನು ಮೈಸೂರಿನ ಪಿಂಜರ್‍ಪೋಲ್ ಗೋ ಶಾಲೆಗೆ ಒಪ್ಪಿಸಲಾಗಿದೆ. ಕೃತ್ಯದ ಸಂಬಂಧ ಠಾಣಾಧಿಕಾರಿ ಚೇತನ್ ಹಾಗೂ ಸಿಬ್ಬಂದಿ, ಆರೋಪಿಗಳಾದ ರಹೀಂ, ಮುನೀರ್ ಹಾಗೂ ಶಂಷು ಎಂಬವರ ವಿರುದ್ಧ ಕ್ರಮಕೈಗೊಂಡಿದ್ದಾರೆ.