ಮಡಿಕೇರಿ, ನ. 3: ಕಳೆದ ಎರಡು ವರ್ಷಗಳ ಹಿಂದೆ ರಾಜ್ಯ ಸರಕಾರದ ನಿರ್ಧಾರದಂತೆ ನವೆಂಬರ್ 10ರಂದು ಆಚರಿಸಲ್ಪಡುತ್ತಿರುವ ಟಿಪ್ಪು ಜಯಂತಿಯ ದಿನ ಸಮೀಪಿಸುತ್ತಿದೆ. ಕೊಡಗು ಸೇರಿದಂತೆ ರಾಜ್ಯದ ಇತರೆಡೆಗಳಲ್ಲಿ ಟಿಪ್ಪು ಜಯಂತಿಗೆ ವಿರೋಧ ವ್ಯಕ್ತಗೊಳ್ಳುತ್ತಿರುವದು ಆರಂಭದ ವರ್ಷದಿಂದಲೇ ನಡೆಯುತ್ತಿರುವದರಿಂದ ಇದೊಂದು ವಿವಾದಾತ್ಮಕ ರೀತಿಯ ಜಯಂತಿಯಾಗುತ್ತಿದೆ. 2016ರಲ್ಲಿ ಜಿಲ್ಲೆಯಲ್ಲಿ ಟಿಪ್ಪು ಜಯಂತಿಯ ದಿನದಂದು ಭಾರೀ ಸಂಘರ್ಷವೇ ಏರ್ಪಟ್ಟು, ಲಾಠಿ ಚಾರ್ಜ್‍ನಂತಹ ಪ್ರಕರಣದೊಂದಿಗೆ ಕೊಡಗಿನಲ್ಲಿ ಇಬ್ಬರು ಸಾವಿಗೀಡಾಗಿರುವ ಘಟನೆಯೂ ನಡೆದಿತ್ತು. ಕಳೆದ ವರ್ಷವೂ ವಿರೋಧದ ನಡುವೆ ಸರಕಾರಿ ಕಾರ್ಯಕ್ರಮವಾಗಿ ಟಿಪ್ಪು ಜಯಂತಿ ಆಚರಿಸಲ್ಪಟ್ಟಿತ್ತು. ಆ ಎರಡು ವರ್ಷಗಳಲ್ಲಿ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರಕಾರ ಆಡಳಿತದಲ್ಲಿತ್ತು. ಮಡಿಕೇರಿ, ನ. 3: ಕಳೆದ ಎರಡು ವರ್ಷಗಳ ಹಿಂದೆ ರಾಜ್ಯ ಸರಕಾರದ ನಿರ್ಧಾರದಂತೆ ನವೆಂಬರ್ 10ರಂದು ಆಚರಿಸಲ್ಪಡುತ್ತಿರುವ ಟಿಪ್ಪು ಜಯಂತಿಯ ದಿನ ಸಮೀಪಿಸುತ್ತಿದೆ. ಕೊಡಗು ಸೇರಿದಂತೆ ರಾಜ್ಯದ ಇತರೆಡೆಗಳಲ್ಲಿ ಟಿಪ್ಪು ಜಯಂತಿಗೆ ವಿರೋಧ ವ್ಯಕ್ತಗೊಳ್ಳುತ್ತಿರುವದು ಆರಂಭದ ವರ್ಷದಿಂದಲೇ ನಡೆಯುತ್ತಿರುವದರಿಂದ ಇದೊಂದು ವಿವಾದಾತ್ಮಕ ರೀತಿಯ ಜಯಂತಿಯಾಗುತ್ತಿದೆ. 2016ರಲ್ಲಿ ಜಿಲ್ಲೆಯಲ್ಲಿ ಟಿಪ್ಪು ಜಯಂತಿಯ ದಿನದಂದು ಭಾರೀ ಸಂಘರ್ಷವೇ ಏರ್ಪಟ್ಟು, ಲಾಠಿ ಚಾರ್ಜ್‍ನಂತಹ ಪ್ರಕರಣದೊಂದಿಗೆ ಕೊಡಗಿನಲ್ಲಿ ಇಬ್ಬರು ಸಾವಿಗೀಡಾಗಿರುವ ಘಟನೆಯೂ ನಡೆದಿತ್ತು. ಕಳೆದ ವರ್ಷವೂ ವಿರೋಧದ ನಡುವೆ ಸರಕಾರಿ ಕಾರ್ಯಕ್ರಮವಾಗಿ ಟಿಪ್ಪು ಜಯಂತಿ ಆಚರಿಸಲ್ಪಟ್ಟಿತ್ತು. ಆ ಎರಡು ವರ್ಷಗಳಲ್ಲಿ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರಕಾರ ಆಡಳಿತದಲ್ಲಿತ್ತು.

ಹಿನ್ನೆಲೆಯಲ್ಲಿ ಈ ಬಾರಿ ಟಿಪ್ಪು ಜಯಂತಿ ಆಚರಣೆ ನಡೆಯಲಿದೆಯೇ ಇಲ್ಲವೇ ಎಂಬದು ಪ್ರಶ್ನಾರ್ಹವಾಗಿಯೇ ಉಳಿದಿತ್ತು. ಈ ನಡುವೆ ಜಿಲ್ಲೆಯ ಹೈಸೊಡ್ಲೂರುವಿನ ಕೆ.ಪಿ. ಮಂಜುನಾಥ್ (ಮಂಜು ಚಿಣ್ಣಪ್ಪ) ಕಳೆದ ವರ್ಷ ರಾಜ್ಯ ಉಚ್ಛ ನ್ಯಾಯಾಲ ಯದಲ್ಲಿ ಟಿಪ್ಪು ಜಯಂತಿ ಆಚರಣೆ ಯನ್ನು ರದ್ದುಪಡಿಸಬೇಕೆಂದು ಕೋರಿ ಸಲ್ಲಿಸಿದ್ದ

(ಮೊದಲ ಪುಟದಿಂದ) ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯ ವಿಚಾರವೂ ಇನ್ನೂ ಅಂತಿಮ ಗೊಂಡಿಲ್ಲ. ಈ ಬಗ್ಗೆ ರಾಜ್ಯ ಸರಕಾರ ನ್ಯಾಯಾಲಯಕ್ಕೆ ಈ ತನಕವೂ ಆಕ್ಷೇಪಣೆ ಸಲ್ಲಿಸದೆ ಇರುವ ಬಗ್ಗೆ ಆಕ್ಷೇಪಿಸಿರುವ ನ್ಯಾಯಾಲಯ ಅಕ್ಟೋಬರ್ 31ರಂದು ನಡೆಸಿದ ವಿಚಾರಣೆಯ ಸಂದರ್ಭ ರಾಜ್ಯ ಸರಕಾರಕ್ಕೆ ರೂ. ಒಂದು ಸಾವಿರ ದಂಡ ವಿಧಿಸಿದ್ದಲ್ಲದೆ, ಪ್ರಕರಣದ ವಿಚಾರಣೆಯನ್ನು ನವೆಂಬರ್ 9ಕ್ಕೆ ಮುಂದೂಡಿದೆ.

ಇದರ ಬೆನ್ನಲ್ಲೇ ನವೆಂಬರ್ 1ರಂದು ಬೆಂಗಳೂರಿನಲ್ಲಿ ಟಿಪ್ಪು ಜಯಂತಿ ಕುರಿತಂತೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಹಿಂದಿನ ಸರಕಾರದ ತೀರ್ಮಾನವನ್ನು ಸರಕಾರ ಮುಂದುವರಿಸಲಿದೆ ಎಂಬ ಸಂದೇಶ ನೀಡಿದ್ದರು.

ಪೂರ್ವಸಿದ್ಧತೆಗೆ ಸೂಚನೆ

ಮುಖ್ಯಮಂತ್ರಿಗಳ ಈ ಹೇಳಿಕೆಯ ಮರುದಿನವೇ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಮೂಲಕ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರುಗಳಿಗೆ ಸರಕಾರದಿಂದ ಆದೇಶ ಜಾರಿಯಾಗಿದೆ.

ಪ್ರತಿವರ್ಷ ಹಜರತ್ ಟಿಪ್ಪು ಸುಲ್ತಾನ್ ಜಯಂತಿಯನ್ನು ರಾಜ್ಯ, ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಆಚರಿಸಲು 20.9.2016ರ ಸರಕಾರಿ ಆದೇಶವಿದೆ. ಈ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷದ ನವೆಂಬರ್ 10ರಂದು ಟಿಪ್ಪು ಜಯಂತಿ ಆಚರಣೆಗೆ ಅಗತ್ಯ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ನಿರ್ದೇಶಕರು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಟಿಪ್ಪು ಜಯಂತಿ ತಡೆಯಲು ಸಾಧ್ಯವಿಲ್ಲ : ಜಯಮಾಲ

ಸಿದ್ದರಾಮಯ್ಯ ಸರ್ಕಾರ ಜಾರಿಗೆ ತಂದಿದ್ದ ಟಿಪ್ಪು ಜಯಂತಿಯನ್ನು ಆಚರಿಸಲು ಸಮ್ಮಿಶ್ರ ಸರ್ಕಾರ ಮುಂದಾಗಿದೆ. ಸರ್ಕಾರದ ಸೂಚನೆ ಮೇರೆಗೆ ಟಿಪ್ಪು ಜಯಂತಿ ಕಾರ್ಯಕ್ರಮ ನಡೆಸುವ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಚರ್ಚೆ ನಡೆಸಿದೆ. ಜಯಂತಿ ಆಚರಣೆ ಸಂಬಂಧಪಟ್ಟಂತೆ ಸಿಎಂ ಸೂಚನೆಯ ಮೇರೆಗೆ ಸಭೆ ನಡೆಸಲಾಗಿದೆ ಎಂದು ಸಚಿವೆ ಜಯಮಾಲಾ ಸ್ಪಷ್ಟಪಡಿಸಿದ್ದಾರೆ. ಸಭೆ ಬಳಿಕ ಮಾತನಾಡಿದ ಸಚಿವೆ ಜಯಮಾಲಾ ಅವರು, ಸದ್ಯ ವಿರೋಧ ಪಕ್ಷದಲ್ಲಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಅವರು ಟಿಪ್ಪು ಜಯಂತಿ ಆಚರಣೆ ಮಾಡಿದ ಫೆÇೀಟೋಗಳು ಇವೆÉ. ಅವರೇ ಆಚರಣೆ ಮಾಡಿದ್ದ ಜಯಂತಿಗೆ ಅವರೇ ಏಕೆ ವಿರೋಧ ವ್ಯಕ್ತಪಡಿಸುತ್ತಾರೆ. ಸರ್ಕಾರದಲ್ಲಿ ಈ ಕುರಿತು ನಿಯಮ ಜಾರಿ ಮಾಡಲಾಗಿದೆ. ಆದ್ದರಿಂದ ಜಯಂತಿ ಆಚರಣೆ ನಡೆಯುತ್ತದೆ. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ವಿರೋಧಿ ಚಟುವಟಿಕೆ ನಡೆಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಆದರೆ ಜನರ ರಕ್ಷಣೆ ಅವರ ಕರ್ತವ್ಯವೂ ಆಗಿದೆ. ಇದಕ್ಕೆ ಏನೇ ಆದರೂ ಅವರೇ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಹೇಳಿದರು. ತಾ. 10ರ ಆಚರಣೆಗೆ ಸಿದ್ಧತೆ ನಡೆಸಲು ಅಧಿಕೃತವಾಗಿ ಸಭೆ ನಡೆಸುವ ಮೂಲಕ ಖಚಿತ ಮಾಹಿತಿ ನೀಡಿದೆ. ಕನ್ನಡ ಸಂಸ್ಕೃತಿ ಇಲಾಖೆ ಮೂಲಕ ಆಚರಣೆ ಮಾಡುವ ಕುರಿತು ಸಿದ್ಧತೆ ನಡೆಸಲಾಗಿದೆ.

ಸಭೆಯಲ್ಲಿ ಸಚಿವೆ ಜಯಮಾಲಾ ಅವರೊಂದಿಗೆ ಸಚಿವ ಜಮೀರ್ ಅಹ್ಮದ್ ಭಾಗವಹಿಸಿದ್ದರು. ಇದಕ್ಕೆ ಸಮ್ಮಿಶ್ರ ಸರ್ಕಾರದÀ ಬೆಂಬಲವೂ ಇದೆ ಎಂಬ ಸೂಚನೆಯನ್ನು ಈ ಸಭೆಯ ಮೂಲಕ ನೀಡಲಾಗಿದೆ. ಅಲ್ಲದೇ ಕಳೆದ 2 ದಿನಗಳ ಟಿಪ್ಪು ಜಯಂತಿ ಆಚರಣೆ ಕುರಿತ ಪ್ರಶ್ನೆಗೆ ಉತ್ತರಿಸಿದ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು, ಈ ಹಿಂದಿನ ಸರ್ಕಾರದ ಎಲ್ಲಾ ಯೋಜನೆಗಳನ್ನೂ ಮುಂದುವರೆಸಲಾಗುತ್ತದೆ ಎಂದು ತಿಳಿಸಿದರು.