ಕುಶಾಲನಗರ, ನ. 3: ಕುಶಾಲನಗರ ಪಟ್ಟಣ ಪಂಚಾಯಿತಿಯ ಚುನಾವಣೆಯಲ್ಲಿ ಮೂರನೇ ವಾರ್ಡ್ನಲ್ಲಿ ವಿಜೇತರಾದ ಪ್ರಮೋದ್ ಮುತ್ತಪ್ಪ ಅವರನ್ನು ಸ್ಥಳೀಯ ಸಿಂಗಾರಮ್ಮ ಬಡಾವಣೆಯ ನಿವಾಸಿಗಳು ಅಭಿನಂದಿಸಿ ಗೌರವಿಸಿದರು. ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಮೋದ್ ಮುತ್ತಪ್ಪ, ತನ್ನ ಗೆಲುವಿಗೆ ಕಾರಣರಾದ ಜನತೆಯ ಸೇವೆ ಮಾಡುವದು ಮುಖ್ಯ ಗುರಿಯಾಗಿದ್ದು ಮೂರನೇ ವಾರ್ಡ್ನ ಸರ್ವತೋಮುಖ ಅಭಿವೃದ್ಧಿಗೆ ಅವಿರತವಾಗಿ ಶ್ರಮವಹಿಸುವದಾಗಿ ಭರವಸೆ ನೀಡಿದರು. ಬಡಾವಣೆಗಳ ಮೂಲಭೂತ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವದಾಗಿ ಹೇಳಿದರು.
ಪ್ರಮೋದ್ ಮುತ್ತಪ್ಪ ಅವರಿಗೆ ನಿವಾಸಿಗಳು ಶಾಲು ಹೊದಿಸಿ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿದರು. ನಿವಾಸಿಗಳಾದ ಪಳಂಗಪ್ಪ, ರಮೇಶ್, ರಾಜು, ಪ್ರವೀಣ್, ಜಮೀರ್, ಜಗದೀಶ್, ಉಲ್ಲಾಸ್, ವಸಿಮ್, ಕಿಶೋರ್, ಬಾನು, ಕಮಲಾಕ್ಷಿ ಮತ್ತಿತರರು ಇದ್ದರು.