ಮಡಿಕೇರಿ, ನ. 3: ಮಡಿಕೇರಿ ಜೂನಿಯರ್ ಕಾಲೇಜಿನಲ್ಲಿ ನಡೆದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಸಂಪಾಜೆ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ವಿಶ್ವಾಸ್ ಕೆ.ಎಲ್. ಹ್ಯಾಮರ್ ಥ್ರೋ ಎಸೆತದಲ್ಲಿ ಪ್ರಥಮ, ಆದರ್ಶ ಎ.ವೈ. ತಟ್ಟೆ ಎಸೆತದಲ್ಲಿ ದ್ವಿತೀಯ, ಪ್ರವೀಣ್ ಡಿ.ಎಸ್. ಎತ್ತರ ಜಿಗಿತದಲ್ಲಿ ದ್ವಿತೀಯ, ದೀಕ್ಷಿತ್ ಕೆ.ಎಂ. ರಿಲೆಯಲ್ಲಿ ದ್ವಿತೀಯ, ದಯಾನ್ ಕೆ.ಯು. ರಿಲೆಯಲ್ಲಿ ದ್ವಿತೀಯ, ಮಹಮ್ಮದ್ ಶಾಕೀರ್ 100 ಮೀ ಓಟದಲ್ಲಿ ಪ್ರಥಮ, 200 ಮೀ. ಓಟದಲ್ಲಿ ದ್ವಿತೀಯ, ರಿಲೆಯಲ್ಲಿ ದ್ವಿತೀಯ, ಗೌತಮಿ ಎಂ.ಎನ್. ಎತ್ತರ ಜಿಗಿತದಲ್ಲಿ ಪ್ರಥಮ, ಆಯಿಶತುಲ್ ಅರ್ಷಾನ ಹ್ಯಾಮರ್ ಥ್ರೋ ಎಸೆತದಲ್ಲಿ ಪ್ರಥಮ, ನಾಫಿಯ ಎ.ಎ. ಹ್ಯಾಮರ್ ಥ್ರೊ ಎಸೆತದಲ್ಲಿ ದ್ವಿತೀಯ, ಅಝ್ಮೀನ ಜಾವಲಿನ್ ಎಸೆತದಲ್ಲಿ ದ್ವಿತೀಯ, ತೇಜಸ್ವಿನಿ ವೇಗದ ನಡಿಗೆಯಲ್ಲಿ ದ್ವಿತೀಯ, ಸುಮಿತ್ರ ಪಿ.ಆರ್. ರಿಲೆಯಲ್ಲಿ ದ್ವಿತೀಯ, ಲಿಖಿತ ಎಸ್.ಜೆ. ರಿಲೆಯಲ್ಲಿ ದ್ವಿತೀಯ, ಜಸ್ಮಿತಾ ರಿಲೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ. ಇವರಿಗೆ ದೈಹಿಕ ಶಿಕ್ಷಣ ಶಿಕ್ಷಕರಾದ ಕುಶಾಲಪ್ಪ ಕೆ. ಮಾರ್ಗದರ್ಶನ ನೀಡಿದ್ದರು.