*ಶ್ರೀಮಂಗಲ, ನ. 4: ಇಲ್ಲಿನ ಪದವಿಪೂರ್ವ ಕಾಲೇಜು ಶ್ರೀಮಂಗಲದ ವಿದ್ಯಾರ್ಥಿಗಳು ವಿವಿಧ ಕ್ರೀಡೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗು ವದರ ಮೂಲಕ ಸಾಧನೆಗೈದಿದ್ದಾರೆ.

ತಾ. 10 ಮತ್ತು 11 ರಂದು ತುಮಕೂರಿನಲ್ಲಿ ನಡೆಯಲಿರುವ ರಾಜ್ಯಮಟ್ಟದ ಪದವಿಪೂರ್ವ ಕಾಲೇಜುಗಳ ಕಬ್ಬಡಿ ತಂಡಕ್ಕೆ ಈ ಕಾಲೇಜಿನ ಮೂವರು ವಿದ್ಯಾರ್ಥಿನಿ ಯರಾದ ಪಿ.ಜೆ. ಜೋಹ್ನ, ಸಿ.ಯು. ಪ್ರೀತು ಮತ್ತು ಹೆಚ್.ಆರ್. ಮೋನಿಷ ಆಯ್ಕೆಯಾಗಿದ್ದಾರೆ. ಮಂಡ್ಯದಲ್ಲಿ ನಡೆಯಲಿರುವ ರಾಜ್ಯಮಟ್ಟದ ಪದವಿಪೂರ್ವ ಕಾಲೇಜು ಪುಟ್ಬಾಲ್ ತಂಡಕ್ಕೆ ಕಾಲೇಜಿನ ವಿದ್ಯಾರ್ಥಿನಿ ಸುಕನ್ಯ ಎನ್‍ಎಂ. ಆಯ್ಕೆ ಆಗಿದ್ದಾರೆ. ತಾ. 23 ಮತ್ತು 26 ರಂದು ಮೈಸೂರಿನಲ್ಲಿ ನಡೆಯುವ ರಾಜ್ಯಮಟ್ಟದ ಪದವಿ ಪೂರ್ವ ಕಾಲೇಜು ಅಥ್ಲೆಟಿಕ್ಸ್ ಪಂದ್ಯಕ್ಕೆ ಕಾಲೇಜಿನ ಮೂವರು ವಿದ್ಯಾರ್ಥಿಗಳಾದ ಪಿ.ಜೆ. ಜೋಹ್ನ (ಡಿಸ್ಕಸ್ ಥ್ರೋದಲ್ಲಿ ಪ್ರಥಮ), ಅನ್ವಿತ ಕಾವೇರಮ್ಮ (ಜಾವಲಿನ್ ಥ್ರೊದಲ್ಲಿ ಪ್ರಥಮ) ಹಾಗೂ ಕಾರ್ತಿಕ ಜಿ. (300 ಮೀ ವೇಗದ ನಡಿಗೆ) ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆಯುವದರೊಂದಿಗೆ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.