ಸೋಮವಾರಪೇಟೆ, ನ. 4: ಸೋಮವಾರಪೇಟೆ ತಾಲೂಕು ಪತ್ರಕರ್ತರ ಸಂಘದ ವಿದ್ಯಾನಿಧಿಗೆ ಉದ್ಯಮಿ ಹಾಗೂ ದಾನಿಗಳಾದ ಹರಪಳ್ಳಿ ರವೀಂದ್ರ ಅವರು ರೂ. 1 ಲಕ್ಷ ದೇಣಿಗೆ ನೀಡಿದ್ದಾರೆ.
ಇತ್ತೀಚೆಗೆ ನಡೆದ ತಾಲೂಕು ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ್ದ ರವೀಂದ್ರ ಅವರು, ತಾಲೂಕಿನ ಪತ್ರಕರ್ತರ ಮಕ್ಕಳ ವಿದ್ಯಾಭ್ಯಾಸಕ್ಕೆ ರೂ. 1 ಲಕ್ಷ ನೆರವು ಒದಗಿಸುವದಾಗಿ ಭರವಸೆ ನೀಡಿದ್ದರು.
ಅದರಂತೆ ತಾಲೂಕು ಸಂಘಕ್ಕೆ ದೇಣಿಗೆ ನೀಡಿದ್ದು, ಸಂಘದ ಪ್ರಧಾನ ಕಾರ್ಯದರ್ಶಿ ವಿಜಯ್ ಹಾನಗಲ್ ಅವರು ಸಂಘದ ಪರವಾಗಿ ದೇಣಿಗೆ ಸ್ವೀಕರಿಸಿದರು. ವಿದ್ಯೆಗಿಂತ ಮಿಗಿಲಾದ ಸಂಪತ್ತು ಬೇರೊಂದಿಲ್ಲ. ಈ ನಿಟ್ಟಿನಲ್ಲಿ ತಾನು ವಿದ್ಯಾನಿಧಿಗೆ ಕೈಜೋಡಿಸಿರುವದಾಗಿ ರವೀಂದ್ರ ಅವರು ಅಭಿಪ್ರಾಯಿಸಿದರು.