*ಗೋಣಿಕೊಪ್ಪಲು, ನ. 4: ಪೊಲೀಸ್ ಇಲಾಖೆ ವಿರುದ್ಧ ತಾ. 7 ರಂದು ಬಿಜೆಪಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಹಿಂಪಡೆಯಲಾಗಿದೆ ಎಂದು ವೀರಾಜಪೇಟೆ ತಾಲೂಕು ಬಿಜೆಪಿ ಅಧ್ಯಕ್ಷ ಅರುಣ್ ಭೀಮಯ್ಯ ತಿಳಿಸಿದ್ದಾರೆ.
ವೀರಾಜಪೇಟೆ ಪಟ್ಟಣ ಪಂಚಾಯಿತಿ ಚುನಾವಣೆ ಸಂದರ್ಭದಲ್ಲಿ ಡಿ.ವೈ.ಎಸ್ಪಿ. ಮತ್ತು ನಗರ ಪೊಲೀಸ್ ಠಾಣಾಧಿಕಾರಿಯವರು ಪಕ್ಷಪಾತ ದೋರಣೆ ತಳೆದಿರುವದನ್ನು ಖಂಡಿಸಿ ತಾ. 7 ರಂದು ಬಿ.ಜೆ.ಪಿ. ವತಿಯಿಂದ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿತ್ತು.
ಆದರೆ ನಿನ್ನೆ ಡಿ.ವೈ.ಎಸ್ಪಿ. ಮತ್ತು ನಗರ ಠಾಣಾಧಿಕಾರಿ ಈ ಬಗ್ಗೆ ಮಾತುಕತೆ ನಡೆಸಿದ್ದು, ಯಾವದೇ ಪಕ್ಷಪಾತವಿಲ್ಲದೆ ವೈದ್ಯಕೀಯ ವರದಿಯನ್ನಾಧರಿಸಿ ಕ್ರಮ ಕೈಗೊಳ್ಳುವದಾಗಿ ಭರವಸೆ ನೀಡಿರುವದರಿಂದ ಪ್ರತಿಭಟನೆಯನ್ನು ಕೈಬಿಟ್ಟಿರುವದಾಗಿ ತಿಳಿಸಿದ್ದಾರೆ.