ಗೋಣಿಕೊಪ್ಪ ವರದಿ, ನ. 4: ಕೃಷಿ ಲಾಭಾಂಶದಲ್ಲಿ ಮದ್ಯವರ್ತಿಗಳ ಪಾಲಾಗುತ್ತಿದ್ದ, ಲಾಭವನ್ನು ನೇರವಾಗಿ ರೈತರಿಗೆ ತಲುಪಿಸುವ ಉದ್ದೇಶದಿಂದ ಆರಂಭಗೊಂಡ ಪುತ್ತರಿ ರೈತ ಉತ್ಪಾದಕರ ಸಂಘದ ಕಾರ್ಯ ಜನಮೆಚ್ಚುಗೆಗೆ ಪಾತ್ರವಾಗಿದೆ. ರೈತರಿಗೆ ಸೇರಬೇಕಾಗಿದ್ದ ಶೇ. 25-30 ರಷ್ಟು ಲಾಭಾಂಶವನ್ನು ರೈತರಿಗೆ ಸಿಗುತ್ತಿರುವದರಿಂದ ಪ್ರಧಾನಿ ನರೇಂದ್ರ ಮೋದಿ ಅವರ ಕೃಷಿಯಲ್ಲಿನ ಆದಾಯ ದ್ವಿಗುಣ ಯೋಜನೆ ಇಲ್ಲಿ ಸಂಘದ ಮೂಲಕ ಫಲ ಕಾಣುವಂತಾಗಿದೆ.
ಆದಾಯ ದ್ವಿಗುಣಕ್ಕೆ ಮೂಲ
ರೈತರಿಗೆ ನೇರವಾಗಿ ಕಂಪೆನಿಯಿಂದ ಕೃಷಿ ಪರಿಕರಗಳು ದೊರೆಯುತ್ತಿದೆ. ಬೆಳೆಗಳು ಕೂಡ ಇಲ್ಲಿ ಹೆಚ್ಚಿನ ದರದಲ್ಲಿ ಮಾರಾಟವಾಗುತ್ತಿದೆ. ತನ್ನದೇ ಆದ ಬ್ರ್ಯಾಂಡ್ ಮೂಲಕ ಮಾರುಕಟ್ಟೆ ಗೋಣಿಕೊಪ್ಪ ವರದಿ, ನ. 4: ಕೃಷಿ ಲಾಭಾಂಶದಲ್ಲಿ ಮದ್ಯವರ್ತಿಗಳ ಪಾಲಾಗುತ್ತಿದ್ದ, ಲಾಭವನ್ನು ನೇರವಾಗಿ ರೈತರಿಗೆ ತಲುಪಿಸುವ ಉದ್ದೇಶದಿಂದ ಆರಂಭಗೊಂಡ ಪುತ್ತರಿ ರೈತ ಉತ್ಪಾದಕರ ಸಂಘದ ಕಾರ್ಯ ಜನಮೆಚ್ಚುಗೆಗೆ ಪಾತ್ರವಾಗಿದೆ. ರೈತರಿಗೆ ಸೇರಬೇಕಾಗಿದ್ದ ಶೇ. 25-30 ರಷ್ಟು ಲಾಭಾಂಶವನ್ನು ರೈತರಿಗೆ ಸಿಗುತ್ತಿರುವದರಿಂದ ಪ್ರಧಾನಿ ನರೇಂದ್ರ ಮೋದಿ ಅವರ ಕೃಷಿಯಲ್ಲಿನ ಆದಾಯ ದ್ವಿಗುಣ ಯೋಜನೆ ಇಲ್ಲಿ ಸಂಘದ ಮೂಲಕ ಫಲ ಕಾಣುವಂತಾಗಿದೆ.
ಆದಾಯ ದ್ವಿಗುಣಕ್ಕೆ ಮೂಲ
ರೈತರಿಗೆ ನೇರವಾಗಿ ಕಂಪೆನಿಯಿಂದ ಕೃಷಿ ಪರಿಕರಗಳು ದೊರೆಯುತ್ತಿದೆ. ಬೆಳೆಗಳು ಕೂಡ ಇಲ್ಲಿ ಹೆಚ್ಚಿನ ದರದಲ್ಲಿ ಮಾರಾಟವಾಗುತ್ತಿದೆ. ತನ್ನದೇ ಆದ ಬ್ರ್ಯಾಂಡ್ ಮೂಲಕ ಮಾರುಕಟ್ಟೆ ಕೃಷಿ ಉಪಕರಣ, ವಸ್ತುಗಳನ್ನು ನೇರವಾಗಿ ಕಂಪೆನಿಯಿಂದ ಖರೀದಿಸಿ ನೀಡುತ್ತಿದೆ. ಇದರಿಂದಾಗಿ ಹೆಚ್ಚಿನ ಲಾಭದಲ್ಲಿ ರೈತರಿಗೆ ಕೃಷಿ ವಸ್ತುಗಳು ಲಭ್ಯವಾಗುತ್ತಿದೆ.
ರೈತರಿಗೆ ಬೇಕಾದ ಕೃಷಿ ವಸ್ತುಗಳನ್ನು ನೇರವಾಗಿ ರೈತರಿಗೆ ಒದಗಿಸುವದು, ರೈತರು ಬೆಳೆದ ಬೆಳೆಗಳನ್ನು ಖರೀದಿಸಿ ನೇರವಾಗಿ ಮಾರುಕಟ್ಟೆ ಒದಗಿಸುವ ಯೋಜನೆ ರೈತರ ಆದಾಯ ಹೆಚ್ಚಾಗಲು ಕಾರಣವಾಗುತ್ತಿದೆ. ಮದ್ಯವರ್ತಿಗಳಿಗೆ ಹೋಗುತ್ತಿದ್ದ ಶೇ. 25-30 ಲಾಭಾಂಶ ನೇರವಾಗಿ ರೈತರಿಗೆ ಸಿಗುವಂತಾಗಿದೆ. ಸಂಘದಲ್ಲಿ ಮದ್ಯವರ್ತಿಗಳಿಗೆ ಅವಕಾಶ ನೀಡದೆ ರೈತರಿಗೆ ನಷ್ಟವಾಗದಂತೆ ಕಾರ್ಯನಿರ್ವಹಿಸುತ್ತಿದೆ. 2 ವರ್ಷಗಳ ಅವಧಿಯಲ್ಲಿ ಸುಮಾರು 65 ಲಕ್ಷದ ವ್ಯವಹಾರ ನಡೆಸಿದೆ.
ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರ ತಾಂತ್ರಿಕ ಸಲಹೆ ನಿರ್ವಹಣೆ ಜವಾಬ್ದಾರಿ ಹೊತ್ತು ಕೊಂಡಿದೆ. ಇದರಂತೆ ಸದಸ್ಯತ್ವ, ಸಂಘದ ನೋಂದಣಿ, ಕಚೇರಿ ಸಿಬ್ಬಂದಿ ನೇಮಕ ಹಾಗೂ ಮಾರುಕಟ್ಟೆ ಅಭಿವೃದ್ಧಿ ಬಗ್ಗೆ ಸಲಹೆಗಳನ್ನು ನೀಡಿ ಸುಸ್ಥಿರ ಅಭಿವೃದ್ಧಿಗೆ ಸಹಕರಿಸುತ್ತಿದೆ. ಕೇಂದ್ರದ ಆವÀರಣದಲ್ಲಿಯೇ ಮಾರುಕಟ್ಟೆ ಅಭಿವೃದ್ಧಿಗೆ ಸ್ಥಳಾವಕಾಶ ನೀಡಲಾಗಿದೆ. ಅಲ್ಲಿಯೇ ವಿಜ್ಞಾನಿಗಳು ಕೂಡ ಲಭ್ಯವಿರುವದರಿಂದ ರೈತರಿಗೆ ಕೃಷಿ ಪೂರಕ ಚಟುವಟಿಕೆಗಳಿಗೆ ಸಹಕಾರವಾಗುತ್ತಿದೆ. ಡಾ. ಪ್ರಭಾಕರ್ ತಾಂತ್ರಿಕ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ನಬಾರ್ಡ್ ಸಂಸ್ಥೆಯು ಸಂಘದ ಆರಂಭಕ್ಕೆ 7.5 ಲಕ್ಷ ರೂ. ಕಚೇರಿ ನಿರ್ವಹಣೆ ವೆಚ್ಚವಾಗಿ ನೀಡಿ ಪ್ರೋತ್ಸಾಹಿಸಿದೆ. ಅಲ್ಲದೆ, ಸಂಘದ ನಿರ್ವಹಣೆಯ 3 ಉದ್ಯೋಗಿಗಳಿಗೆ ನಬಾರ್ಡ್ ಮಾಸಿಕ ಭತ್ಯೆ ನೀಡುತ್ತಿದೆ. 2 ವರ್ಷದವರೆಗೆ ನಬಾರ್ಡ್ ಪ್ರಾರಂಭಿಕ ಯೋಜನೆಯಾಗಿ ಸಹಕಾರ ನೀಡಲಿದೆ. ನಂತರ ಸಂಘವೇ ಯೋಜನೆ ರೂಪಿಸಿಕೊಂಡು ಮುನ್ನಡೆಯಬೇಕಿದೆ. 2017 ರಲ್ಲಿ ಆರಂಭಗೊಂಡ ಪುತ್ತರಿ ಸಂಘದಲ್ಲಿ ಒಟ್ಟು 260 ಸದಸ್ಯರಿದ್ದು, 1,54 ಲಕ್ಷ ಮೂಲ ಬಂಡವಾಳ ಹೊಂದಿದೆ. ಕಳೆದೊಂದು ವರ್ಷದಿಂದ 65 ಲಕ್ಷ ಲಕ್ಷದಷ್ಟು ವ್ಯವಹಾರ ನಡೆಸಿದೆ. ಕೇಂದ್ರ ಸರ್ಕಾರ 8 ಲಕ್ಷ ಆರ್ಥಿಕ ಸಹಕಾರ ನೀಡುತ್ತಿದೆ.
ಕೃಷಿಯಲ್ಲಿ ಹೆಚ್ಚು ವೈವಿಧ್ಯ ಸಾಧಿಸಲು ಪುತ್ತರಿ ರೈತ ಉತ್ಪಾದಕರ ಸಂಸ್ಥೆ ಮುಂದಾಗಿದೆ. ಕೊಡಗಿನಲ್ಲಿ ಹೆಚ್ಚು ವಿಸ್ತಾರವಾದ ಬೆಳೆ ಪ್ರದೇಶವಿಲ್ಲದ ಕಾರಣ, ಉತ್ಪಾದನೆ ಕಡಿಮೆ ಇದೆ. ಸಂಘದ ರೂಪದಲ್ಲಿ ಬೆಳೆಗಾರರು ತಮ್ಮ ಭೂಪ್ರದೇಶವನ್ನು ಕಂಪೆನಿ ಮೂಲಕ ಹೆಚ್ಚಿಸಿಕೊಂಡು ಲಾಭಗಳಿಸಲು ಸಾಧ್ಯವಾಗಿದೆ.
ಸುಣ್ಣ, ಗೊಬ್ಬರ, ಕೀಟನಾಶಕ, ಕಳೆನಾಶಕ, ಶಿಲೀಂದ್ರ ನಾಶಕ, ಚೀಲ, ಕಾಫಿ ತಾಟ್, ನರ್ಸರಿ ನೆಟ್, ನೀರಾವರಿ ಯಂತ್ರಗಳು ಇಂತಹವಗಳು ಹೆಚ್ಚಾಗಿ ಮಾರಾಟವಾಗುತ್ತಿದೆ. ಗುಣಮಟ್ಟ ಹಾಗೂ ಕಡಿಮೆ ದರ ಎಂಬ ಕಾರಣಕ್ಕೆ ಸುಣ್ಣ ವ್ಯಾಪಾರ ಹೆಚ್ಚಾಗಿ ನಡೆಯುತ್ತಿದೆ. ಇಲ್ಲಿವರೆಗೆ ಸುಮಾರು 600 ಟನ್ ಸುಣ್ಣ ರೈತರಿಗೆ ಮಾರಾಟ ಮಾಡಲಾಗಿದೆ.
ಕಾಫಿ, ಕಾಳುಮೆಣಸು ಖರೀದಿಗೆ ಯೋಜನೆ
ಪ್ರಸ್ತುತ ರೈತರಿಂದ, ಕಾಫಿ, ಕಾಳುಮೆಣಸು ಖರೀದಿಸಲು ಯೋಜನೆ ರೂಪಿಸಿಕೊಳ್ಳಲಾಗಿದೆ. ತನ್ನದೇ ಆದ ಬ್ರ್ಯಾಂಡ್ ಮೂಲಕ ವಿವಿಧ ಕಂಪೆನಿಗಳಿಗೆ ನೇರವಾಗಿ ಒದಗಿಸುವ ಮೂಲಕ ಹೆಚ್ಚು ಮೌಲ್ಯ ಆಧಾರಿತ ಮಾರುಕಟ್ಟೆ ಅಭಿವೃದ್ಧಿಗೆ ಮುಂದಾಗಿದೆ. ಕಂಪೆನಿಗಳು ನೇರವಾಗಿ ಖರೀದಿ ಮಾಡುವದರಿಂದ ಕೃಷಿಕರಿಗೆ ಹೆಚ್ಚಿನ ಆದಾಯ ಲಭಿಸಲಿದೆ.
ಸಂಘದ ಮಾರುಕಟ್ಟೆ ವ್ಯವಸ್ಥೆ ಬಲ ಪಡಿಸಿಕೊಂಡು ರೈತರಿಗೆ ಹೆಚ್ಚು ಉಪಯೋಗವಾಗುವಂತೆ ಸಂಘ ನಿರ್ವಹಣೆಗೆ 4 ಉದ್ಯೋಗ ಸೃಷ್ಟಿಸಲಾಗಿದೆ. 1 ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹುದ್ದೆ, 1 ಚೀಫ್ ಆಪರೇಟರ್, 1 ಅಕೌಟೆಂಟ್, 1 ರೆಟೈಲ್ ಸ್ಟೋರ್ ಮ್ಯಾನೇಜರ್ ಹುದ್ದೆ ಮೂಲಕ ಉದ್ಯೋಗ ಸೃಷ್ಟಿಸಿ ಸ್ಥಳೀಯರಿಗೆ ಉದ್ಯೋಗ ನೀಡಲಾಗಿದೆ.
ಸ್ಥಾಪಕ ಅಧ್ಯಕ್ಷರಾಗಿ ಮನೆಯಪಂಡ ದೇವಯ್ಯ, ಎಂ.ಡಿ. ಆಗಿ ಕಳ್ಳಂಗಡ ಸುಬ್ಬಯ್ಯ, ಉಪಾಧ್ಯಕ್ಷರಾಗಿ ಪೊನ್ನಿಮಾಡ ಸುಬ್ರಮಣಿ, ಕಾರ್ಯದರ್ಶಿಯಾಗಿ ಮಚ್ಚಮಾಡ ನವೀನ್, ನಿರ್ದೇಶಕರು ಗಳಾಗಿ ರಾಣಾ ನಂಜಪ್ಪ, ಮಾಣಿಪಂಡ ನಿರಂತ್, ಅಲ್ಲುಮಾಡ ಡೇಜಿ ತಿಮ್ಮಯ್ಯ, ಸೋಮೇಂಗಡ ತಿಮ್ಮಯ್ಯ, ಸ್ಮರಣ್ ಶುಭಾಶ್, ವರುಣ್ ಅಯ್ಯಣ್ಣ, ಗಗನ್ ಗಣಪತಿ, ಗೀತಾ ಚೆಂಗಪ್ಪ, ಮಾಳೇಟೀರ ಚಿಣ್ಣಪ್ಪ ಕಾರ್ಯನಿರ್ವ ಹಿಸಿದ್ದರು. ಪ್ರಸ್ತುತ ಅಧ್ಯಕ್ಷರಾಗಿ ಮನೆಯಪಂಡ ಸೋಮಯ್ಯ, ಉಪಾಧ್ಯಕ್ಷರಾಗಿ ಮುಕ್ಕಾಟೀರ ಕಾರ್ಯಪ್ಪ, ನಿರ್ದೇಶಕರುಗಳಾಗಿ ಉದ್ದಪಂಡ ಕಾರ್ಯಪ್ಪ, ವಿಜು ಕರುಂಬಯ್ಯ, ಮಾಚಂಗಡ ಪೆಮ್ಮಯ್ಯ, ರಶ್ಮಿ ಭಾನುಪ್ರಕಾಶ್, ಅರುಣ್ ಅಪ್ಪಣ್ಣ, ವರುಣ್ ಅಯ್ಯಣ್ಣ, ಗಗನ್ ಗಣಪತಿ, ಎನ್. ಎಂ. ಪೂಣಚ್ಚ, ಡೇಜಿ ತಿಮ್ಮಯ್ಯ, ಸಿಇಒ ಆಗಿ ಹೊಟ್ಟೇಂಗಡ ಪೊನ್ನಣ್ಣ ಕಾರ್ಯನಿರ್ವ ಹಿಸುತ್ತಿದ್ದಾರೆ.
ಪ್ರಧಾನಮಂತ್ರಿ ಅವರ ದ್ವಿಗುಣ ಆದಾಯ ಯೋಜನೆಯಂತೆ ಇಲ್ಲಿ ಲಾಭದ ಅಂಶ ಕೃಷಿಕರಿಗೆ ಸಿಗುವಂತಾ ಗಿದೆ ಎಂದು ತಾಂತ್ರಿಕ ಸಲಹೆಗಾರ ಡಾ. ಪ್ರಭಾಕರ್ ಹೇಳುತ್ತಾರೆ.ರಿಟೈಲ್ ಮಾರುಕಟ್ಟೆ ಮೂಲಕ ಮಳಿಗೆಗಳಲ್ಲೂ ಸ್ಥಳೀಯ ಹಣ್ಣುಗಳ ಪಾನೀಯ ಮಾರಾಟಕ್ಕೆ ಯೋಜನೆ ರೂಪಿಸಿಕೊಳ್ಳಲಾಗಿದೆ ಎಂದು ಸಂಘದ ಎಂ.ಡಿ. ಕಳ್ಳಂಗಡ ಸುಬ್ಬಯ್ಯ ಹೇಳುತ್ತಾರೆ.
ವರದಿ - ಸುದ್ದಿಪುತ್ರ