ಮಡಿಕೇರಿ, ನ. 4: ಜೇನುಗಾರಿಕೆ ತೋಟಗಾರಿಕೆ ಇಲಾಖೆಯ ಮಹತ್ವದ ಕಾರ್ಯಕ್ರಮಗಳಲ್ಲಿ ಒಂದು. ಆಧುನಿಕ ಕೃಷಿ ಪದ್ಧ್ದತಿಯಲ್ಲಿ ಅಂತರಾಷ್ಟೀಯ ಮಾರುಕಟ್ಟೆಗೆ ಅನುಗುಣವಾಗಿ, ಗುಣಮಟ್ಟದ ಇಳುವರಿಯೊಂದಿಗೆ ಅತಿ ಹೆಚ್ಚು ಆದಾಯ ಪಡೆದು ಲಾಭಗಳಿಸಲು ಪರಾಗಸ್ಪರ್ಶ ಕ್ರಿಯೆ ಅತಿ ಮುಖ್ಯ. ಪ್ರಪಂಚದಲ್ಲಿ ನಡೆಯುವ ಪರಾಗಸ್ಪರ್ಶ ಕ್ರಿಯೆಗಳಲ್ಲಿ ಜೇನು ನೊಣಗಳ ಪಾತ್ರ ಅತಿ ಮುಖ್ಯ. ಶೇ. 30 ರಿಂದ 90 ಅಧಿಕ ಇಳುವರಿ ಪರಾಗಸ್ಪರ್ಶದಿಂದಲೇ ಜೇನು ನೊಣಗಳ ಅಭಿವೃದ್ದಿ ಹಾಗೂ ಸಂರಕ್ಷಣೆ ಅತಿ ಮುಖ್ಯ.
ಈ ನಿಟ್ಟಿನಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ಹಲವು ಜೇನು ಕೃಷಿ ಅಭಿವೃದ್ಧಿ ಕಾರ್ಯಕ್ರಮಗಳು ನಡೆಯುತಿದ್ದು, ಜೇನು ಸಂತತಿ ಹಾಗೂ ಇಳುವರಿ ಗಣನೀಯ ಏರಿಕೆಯಗುತ್ತಿದೆ. ಇತ್ತೀಚೆಗೆ ಬಾರಿ ಮಳೆ ಹಾಗೂ ಪ್ರಕೃತಿ ವಿಕೋಪದ ಪರಿಣಾಮವಾಗಿ ಜೇನು ನೊಣಗಳಿಗೆ ನೈಸರ್ಗಿಕ ಅಹಾರದ ಕೊರತೆ ಹಾಗೂ ಹೆಚ್ಚಾದ ಚಳಿಯಿಂದ ಕೊಡಗು ಜಿಲ್ಲೆಯಲ್ಲಿ ಜೇನು ಹುಳ ಕುಟುಂಬಗಳಲ್ಲಿ ಥಾಯಿ ಶ್ಯಾಕ್ ಬ್ರೂಡ್ ಕಾಯಿಲೆ ಕಾಣಿಸಿಕೊಂಡಿದ್ದು, ಜಿಲ್ಲೆಯ ಕೃಷಿ ಸಮಸ್ಯೆಗಳಿಗೆ ಹೊಸದೊಂದು ಸಮಸ್ಯೆ ಸೇರಿಕೊಂಡಂತಾಗಿದೆ.
ಜಿಲ್ಲೆಯ ಭಾಗಮಂಡಲ, ತಲಕಾವೇರಿ, ಚೇರಂಗಾಲ, ಕೋರಂಗಾಲ, ಸಣ್ಣಪುಲಿಕೋಟು, ಅಯ್ಯಂಗೇರಿ, ಕಡಗದಾಳು ಮತ್ತಿತರ ಪ್ರದೇಶದಲ್ಲಿ ಅತಿ ಹೆಚ್ಚು ಪ್ರಮಾಣದ ಈ ಮಾರಕ ರೊಗ ಕಾಣಿಸಿಕೊಂಡಿದ್ದು, ನಿಯಂತ್ರಣ ಕಾರ್ಯಕ್ರಮ ಮಾಡದಿದ್ದಲ್ಲಿ ಶೇ. 90 ರಷ್ಟು ಜೇನು ಕುಟುಂಬಗಳು ನಶಿಸಿಹೊಗುವ ಸಂಭವವಿದೆ ಎಂಬುದು ತಜÐರ ಅಭಿಪ್ರಾಯವಾಗಿದೆ.
ಕೊಡಗು ಜಿಲ್ಲೆಯಲ್ಲಿ 1991ರಲ್ಲಿ 60 ಸಾವಿರ ಜೇನು ಕುಟುಂಬಗಳಿದ್ದು, 13 ಸಾವಿರ ಮಂದಿ ಜೇನು ಕೃಷಿಯಲ್ಲಿ ತೊಡಗಿಸಿಕೊಂಡಿದ್ದು 4 ಲಕ್ಷ ಕೆ.ಜಿ. ಇಳುವರಿ ಬರುತ್ತಿತ್ತು.
ಕಾಡಿಲ್ಲದೆ ಜೇನಿಲ್ಲ- ಜೇನಿಲ್ಲದೆ ಕಾಡಿಲ್ಲ ಎಂಬ ಮಾತಿದೆ. ಎಂದರೆ ಕಾಡು ಹಾಗೂ ಜೇನು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಇತ್ತೀಚಿನ ಪ್ರಕೃತಿ ವಿಕೋಪದಿಂದ ಉಂಟಾದ ಹಲವು ಕೆಟ್ಟ ಪರಿಣಾಮಗಳಲ್ಲಿನ ಪರೋಕ್ಷ/ ನೇರ ಪರಿಣಾಮವಾಗಿ ಥಾಯಿ ಶ್ಯಾಕ್ ಬ್ರೂಡ್ ಕಾಣಿಸಿಕೊಂಡಿದೆ.
ಥಾಯಿ ಶ್ಯಾಕ್ ಬ್ರೂಡ್ ರೋಗ ಎಂಬುದು ವಿದೇಶಿ ಮಾರಕ ರೋಗ. ಇದು ವೈರಸ್‍ನಿಂದ ಹರಡುವ ಕಾಯಿಲೆ. ನಿಯಂತ್ರಣ ಕಷ್ಟ. ಹುಳದ ಅವಸ್ಥೆಯಲ್ಲಿರುವ ಜೇನು ನೊಣದ ಹುಳಗಳಿಗೆ ಬರುವ ರೋಗ. ರೋಗಕ್ಕೆ ತುತ್ತಾದ ಹುಳವು ತಲೆ ಕೆಳಗಾಗಿ ಕಂಡು ಬರುತ್ತದೆ. ಕೊಳೆತು ಕೆಟ್ಟ ವಾಸನೆ ಬರುತ್ತದೆ. ರೋಗ ತೀವ್ರಗೊಂಡಲ್ಲಿ ವಾಸನೆ ಹೆಚ್ಚಾಗುತ್ತದೆ. ಇದರಿಂದ ಜೇನು ನೊಣಗಳ ಕೆಲಸ ಕಾರ್ಯಕ್ಕೆ ಅಡಚಣೆ ಉಂಟಾಗಿ ಜೇನು ಕುಟುಂಬಗಳು ಗೂಡನ್ನು ಬಿಟ್ಟು ಹೋಗುತ್ತವೆ.
ಕೊಡಗು ಜಿಲ್ಲೆಯಲ್ಲಿ 1991ರಲ್ಲಿ ಪ್ರಥಮ ಬಾರಿಗೆ ಈ ರೋಗ ಕಾಣಿಸಿಕೊಂಡಿತ್ತು. ಇದೀಗ ಮತ್ತೆ ಪ್ರಕೃತಿ ವಿಕೋಪದ ಕೆಂಗಣ್ಣಿಗೆ ಗುರಿಯಾಗಿರುವದು ಅತಂಕ ಪಡುವ ವಿಚಾರ. ಆಧುನಿಕ ಕೃಷಿ ಸಂಶೋಧನೆಗಳ ಮುಖಾಂತರ ಹಲವು ಪರಿಹಾರ ಕ್ರಮಗಳು ಇರುವದರಿಂದ ಅತಂಕ ಪಡುವ ಅಗತ್ಯವಿಲ್ಲ.
ರೋಗ ನಿಯಂತ್ರಣ ಕ್ರಮಗಳು: ಥಾಯಿ ಶ್ಯಾಕ್ ಬ್ರೂಡ್ ರೋಗ ವೈರಸ್‍ನಿಂದ ಬರುವ ರೋಗವಾಗಿರುವದರಿಂದ ನಿಯಂತ್ರಣ ಸ್ವಲ್ಪ ಕಷ.್ಟ ಆದರೂ ಸಂಶೋಧಕರು ಹಾಗೂ ರೈತರ ಸತತ ಪ್ರಯತ್ನ ಹಾಗೂ ಸಹಕಾರದಿಂದ ಕೃಷಿ ಪದ್ಧತಿ ಅಳವಡಿಕೆಯಲ್ಲಿ ಬದಲಾವಣೆ ಮಾಡಿಕೊಂಡು ವೈಜ್ಞಾನಿಕ ಪದ್ಧ್ದತಿ ಅಳವಡಿಸುವದರೊಂದಿಗೆ ನಿಯಂತ್ರಿಸಬಹುದು ಎಂದು ಹೇಳಲಾಗುತ್ತಿದೆ.
ಸಾಮಾನ್ಯವಾಗಿ ಯಾವದೇ ರೀತಿಯ ರೋಗ, ಅದರಲ್ಲಿಯೂ ವೈರಸ್ ನಿಂದ ಬರುವ ರೋಗ ನಿಯಂತ್ರಿಸಲು ಶುದ್ಧ್ದತೆ ಅತೀ ಮುಖ್ಯ. ಆದ್ದರಿಂದ ಜೇನು ಗೂಡಿನ ಹಾಗೂ ಸುತ್ತಲ್ಲಿನ ವಾತಾವರಣದ ಶುದ್ಧತೆ ಕಾಪಾಡುವದು, ಕಾಯಿಲೆ ಬಂದಿರುವ ಭಾಗವನ್ನು ಕತ್ತರಿಸಿ ಬೇರ್ಪಡಿಸಿ ಸುಡುವದು, ಕಾಯಿಲೆ ಬಂದ ಎರಿ ಇರುವ ಪೆಟ್ಟಿಗೆಯಿಂದ ಜೇನು ಕುಟುಂಬವನ್ನು ಬೇರೆ ಪೆಟ್ಟಿಗೆಗೆ ವರ್ಗಾಯಿಸಿ ಅದನ್ನು ಶುದ್ಧ್ದ/ ಪ್ರಶಾಂತ ವಾತಾವರಣದಲ್ಲಿ ಇಡುವದು, ಜೇನು ಕುಟುಂಬಕ್ಕೆ ಅಹಾರದ ಕೊರತೆ ಉಂಟಾಗದಂತೆ ನೋಡಿಕೊಳ್ಳುವದು. ಹೂ ಕಡಿಮೆಯಾಗಿ ಮಕರಂದ ಕೊರತೆ ಇದ್ದಲ್ಲಿ ಕೃತಕ ಅಹಾರ ಕೊಡುವದು, ಕಾಯಿಲೆ ಬಂದ ಜೇನು ಪೆಟ್ಟಿಗೆಯಲ್ಲಿನ ಕುಟುಂಬ ಹಾಗೂ ಭಾಗವನ್ನು ಬೇರೆ ಕಡೆ ಬದಲಾಯಿಸಿದ ನಂತರ ಖಾಲಿಯಾದ ಪೆಟ್ಟಗೆಯನ್ನು ಬಿಸಿ ನೀರಿನಿಂದ ತೊಳೆದು ಸಂರಕ್ಷಿಸಬೇಕು. ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಇಲಾಖೆ ಮಡಿಕೇರಿಯ ಹಾರ್ಟಿ ಕ್ಲಿನಿಕ್ 9448401087 ಹಾಗೂ ಜೇನು ಕೃಷಿ ಪ್ರದರ್ಶಕರು 9449075077 ರವರನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.