ಮಡಿಕೇರಿ, ನ. 4: ಇತ್ತೀಚೆಗೆ ಜಿಲ್ಲೆಯಲ್ಲಿ ಸಂಭವಿಸಿದ ಪ್ರಾಕೃತಿಕ ದುರಂತಕ್ಕೆ ಸಂಬಂಧಿಸಿದಂತೆ ಸಂತ್ರಸ್ತರಾದವರಿಗೆ ಅಗತ್ಯ ನೆರವು ನೀಡುವ ನಿಟ್ಟಿನಲ್ಲಿ ನೈಜ ಸಂತ್ರಸ್ತರ ಮಾಹಿತಿ ಸಂಗ್ರಹಿಸುವ ಕೆಲಸ ನಿರ್ವಹಿಸುತ್ತಿರುವ ಬೆಂಗಳೂರು ಕೊಡವ ಸಮಾಜದಿಂದ ನಿಯೋಜಿತವಾಗಿರುವ ತಂಡ ಇಂದು ಹಲವೆಡೆಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಿತು.

ತಂಡದ ಸದಸ್ಯರು ತಾ. 3 ರಂದು ಗರ್ವಾಲೆ ವ್ಯಾಪ್ತಿ, ಸೂರ್ಲಬ್ಬಿ, ಕುಂಬಾರಗಡಿಗೆ, ಮಂಕ್ಯ, ಶಿರಂಗಳ್ಳಿ, ಕಾಂಡನಕೊಲ್ಲಿ ವಿಭಾಗದಲ್ಲಿ ಪರಿಶೀಲನೆ ನಡೆಸಿತು. ತಾ. 4 ರಂದು ಮುಕ್ಕೋಡ್ಲು, ಹಟ್ಟಿಹೊಳೆ ಭಾಗದಲ್ಲಿ ಸಮೀಕ್ಷೆ ನಡೆಸಿ ಮಾಹಿತಿ ಸಂಗ್ರಹಿಸಿದೆ. ನಿಯೋಜಿತ ತಂಡದ ಸಮೀಕ್ಷೆ ಸಂದಭಘ ಮಾಹಿತಿ ಲಭಿಸದೆ ಬಿಟ್ಟು ಹೋಗಿದ್ದಲ್ಲಿ ಅಂತಹವರು ವಿವರದೊಂದಿಗೆ ನೇರವಾಗಿ ಕೊಡವ ಸಮಾಜವನ್ನು ಸಂಪರ್ಕಿಸಬಹುದಾಗಿದೆ ಎಂದು ತಂಡ ಸದಸ್ಯರು ತಿಳಿಸಿದ್ದಾರೆ.

ತಂಡದಲ್ಲಿ ಅಂಜಪರವಂಡ ರಂಜು, ಮುತ್ತಪ್ಪ, ಚಿರಿಯಪಂಡ ಸುರೇಶ್ ನಂಜಪ್ಪ, ಮೋರ್ಕಂಡ ಸುರೇಶ್, ಮೂಡೆರ ಅರುಣ್ ತಮ್ಮಯ್ಯ, ಮುಕ್ಕಾಟಿರ ರತ್ನ ಸೋಮಯ್ಯ, ಕೊಪ್ಪಿರ ವಿನು ಅಯ್ಯಪ್ಪ ಪಾಲ್ಗೊಂಡಿದ್ದಾರೆ.