ವೀರಾಜಪೇಟೆ, ನ. 4: ವೀರಾಜಪೇಟೆಯಲ್ಲಿರುವ ಕೊಡಗು ಮಹಿಳಾ ಸಹಕಾರ ಸಂಘದ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಪಟ್ರಪಂಡ ಗೀತಾ ಬೆಳ್ಳಿಯಪ್ಪ, ಉಪಾಧ್ಯಕ್ಷರಾಗಿ ಉದಿಯಂಡ ಪೊನ್ನಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ನಿರ್ದೇಶಕರುಗಳಾಗಿ ಜಯಲೀಲಾ ಸತೀಶ್, ಬಿ.ಆರ್.ಸಬಿತ, ಕುಸುಮ ಸೋಮಣ್ಣ, ಮೆಟಿಲ್ಡಾ ಲೋಬೋ, ಬಿ.ಎನ್. ಭಾರತಿ, ಎನ್.ಸಿ.ಆಶಾ ಚಿಣ್ಣಪ್ಪಐ.ಕೆ.ನೀಲಮ್ಮ, ಎಚ್.ಆರ್.ಪುಷ್ಪ, ಬಿ.ಯಶೋಧ ಬಾಬು, ಪುಷ್ಪ ಐತಪ್ಪ, ಪ್ರೇಮ ಮಂಜುನಾಥ್ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ಸಿ.ಜೆ. ಪೂಣಚ್ಚ ಕಾರ್ಯ ನಿರ್ವಹಿಸಿದರು. ಸಂಘದ ಕಾರ್ಯದರ್ಶಿ ಬಿ.ಜಿ. ಪುಷ್ಪಲತಾ ಹಾಜರಿದ್ದರು.