ಸೋಮವಾರಪೇಟೆ, ನ. 4: ಇಲ್ಲಿನ ರೋಟರಿ ಸಂಸ್ಥೆಯ 20ನೇ ವರ್ಷದ ಸ್ಥಾಪನಾ ದಿನಾಚರಣೆ ಕೋವರ್‍ಕೊಲ್ಲಿಯ ಖಾಸಗಿ ರೆಸಾರ್ಟ್‍ನಲ್ಲಿ ನಡೆಯಿತು.

ಕಾರ್ಯಕ್ರಮವನ್ನು ರೋಟರಿ ಜಿಲ್ಲಾ ಸಹಾಯಕ ರಾಜ್ಯಪಾಲ ಧರ್ಮಪುರ ನಾರಾಯಣ ಉದ್ಘಾ ಟಿಸಿದರು. ನಂತರ ಅವರು ಮಾತನಾಡಿ, ಎರಡು ದಶಕಗಳಿಂದ ಅತ್ಯುತ್ತಮ ಸಮಾಜ ಮುಖಿ ಕಾರ್ಯ ಗಳನ್ನು ಮಾಡುತ್ತಿದ್ದು, ಅನೇಕ ಪ್ರಶಸ್ತಿಯನ್ನು ಗಳಿಸಿದೆ. ಹಾಲಿ ಹಾಗೂ ಮಾಜಿ ಅಧ್ಯಕ್ಷರುಗಳು, ರೋಟರಿ ಪದಾಧಿಕಾರಿಗಳು ಅತ್ಯುತ್ತಮ ಕೆಲಸ ಮಾಡುತ್ತಿರುವ ಕಾರಣ ಸಂಸ್ಥೆ ಉತ್ತುಂಗದಲ್ಲಿದೆ ಎಂದು ಶ್ಲಾಘಿಸಿದರು.

ರೋಟರಿ ಸದಸ್ಯರಿಗೆ ಆಯೋಜಿಸಿದ್ದ ವಿವಿಧ ರಾಜ್ಯಗಳ ಸಾಂಪ್ರದಾಯಿಕ ಉಡುಗೆ ಸ್ಪರ್ಧೆ ಮನಸೂರೆಗೊಂಡಿತು. ಎಂ.ಎಂ. ಪ್ರಕಾಶ, ಸವಿತ ದಂಪತಿ ಪ್ರಥಮ ಹಾಗೂ ಮಲ್ಲೇಶ್, ನೇತ್ರ ದಂಪತಿ ದ್ವಿತೀಯ ಸ್ಥಾನ ಗಳಿಸಿದರು.

ಹಾಕಿ ಚೆಂಡು ದೂಡುವ ಸ್ಪರ್ಧೆಯಲ್ಲಿ ಪಿ. ನಾಗೇಶ್ ಪ್ರಥಮ, ಎ.ಡಿ. ಶುಭಕರ್ ದ್ವಿತೀಯ, ಕ್ರಿಕೆಟ್ ಚೆಂಡು ಎಸೆತ ಸ್ಪರ್ಧೆಯಲ್ಲಿ ಪಿ.ಕೆ. ರವಿ (ಪ್ರಥಮ), ಬಿ.ಎಸ್. ಸದಾನಂದ್ (ದ್ವಿತೀಯ), ಬೈಕ್ ಚಾಲಿಸುವ ಸ್ಪರ್ಧೆಯಲ್ಲಿ ಎಸ್.ಬಿ. ಯಶವಂತ್ (ಪ್ರಥಮ), ಜಿ.ಜೆ. ಗಿರೀಶ್ (ದ್ವಿತೀಯ) ಸ್ಥಾನ ಪಡೆದರು.

ರೋಟರಿ ಮಹಿಳೆಯರ ವಿಭಾಗದ ಹಾಕಿ ಚೆಂಡು ದೂಡುವ ಸ್ಪರ್ಧೆಯಲ್ಲಿ ಸವಿತಾ ದಿನೇಶ್ (ಪ್ರಥಮ), ಶೀಲಾ ಉದಯ್ (ದ್ವಿತೀಯ), ಕ್ರಿಕೆಟ್ ಚೆಂಡು ಎಸೆಯುವ ಸ್ಪರ್ಧೆಯಲ್ಲಿ ಸವಿತಾ ವೆಂಕಟೇಶ್, ಲತಾ ನವೀನ್ (ದ್ವಿತೀಯ), ಕಾಯಿನ್ ಗೇಮ್ಸ್‍ನಲ್ಲಿ ಸವಿತಾ ದಿನೇಶ್ (ಪ್ರಥಮ), ನೇತ್ರಾ ಮಲ್ಲೇಶ್ (ದ್ವಿತೀಯ), ವಿದ್ಯಾರ್ಥಿಗಳ ವಿಭಾಗದ ಸ್ಪರ್ಧೆಯಲ್ಲಿ ಹಾಕಿ ಚೆಂಡು ಹಾಕುವ ಸ್ಪರ್ಧೆಯಲ್ಲಿ ಸುಕೇತ್ ಮನೋಹರ್ (ಪ್ರಥಮ), ಕೃಷಿ ಧರ್ಮಪ್ಪ (ದ್ವಿತೀಯ), ಕಾಯಿನ್ ಗೇಮ್‍ನಲ್ಲಿ ಪೂಜಾ ರವಿ (ಪ್ರಥಮ), ನಿರೀಕ್ಷ ಶಶಿಧರ್ (ದ್ವಿತೀಯ) ಸ್ಥಾನ ಪಡೆದರು. ಸ್ಪರ್ಧಾ ವಿಜೇತರಿಗೆ ಅತಿಥಿಗಳು ಬಹುಮಾನ ವಿತರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಅಧ್ಯಕ್ಷ ಪಿ.ಕೆ. ರವಿ ವಹಿಸಿದ್ದರು. ವೇದಿಕೆಯಲ್ಲಿ ರೋಟರಿ ಸ್ಥಾಪಕ ಅಧ್ಯಕ್ಷ ಹೆಚ್.ಸಿ. ನಾಗೇಶ್, ವಲಯ ಕಾರ್ಯದರ್ಶಿ ಕ್ರಿಸ್ವೆಲ್ ಕೋಟ್ಸ್, ಕಾರ್ಯದರ್ಶಿ ಪಿ. ನಾಗೇಶ್, ಮಾಜಿ ಸಹಾಯಕ ರಾಜ್ಯಪಾಲರುಗಳಾದ ಬಿ.ಎಸ್. ಸದಾನಂದ, ಎ.ಡಿ. ಶುಭಕರ್ ಮತ್ತಿತರರು ಇದ್ದರು. ಶೋಭ ಯಶವಂತ್ ಕಾರ್ಯಕ್ರಮ ನಿರ್ವಹಿಸಿದರು.