ಸುಂಟಿಕೊಪ್ಪ, ನ. 4: ಇಲ್ಲಿನ ಕೆದಕಲ್ ಗ್ರಾಮ ಪಂಚಾಯಿತಿಯ ಹೊರೂರು ಪ್ರಾಥಮಿಕ ಶಾಲೆಗೆ ಕೆದಕಲ್ ಗ್ರಾಮ ಪಂಚಾಯಿತಿ ಸದಸ್ಯ ದೇವಿಪ್ರಸಾದ್ ಕಾಯರ್‍ಮಾರ್ ತಮ್ಮ ತಂದೆ ತಾಯಿ ದಿವಂಗತ ಬೆಳ್ಯಪ್ಪ, ಚಂದ್ರಾವತಿ ಜ್ಞಾಪಕಾರ್ಥಕವಾಗಿ ಶಾಲೆಗೆ ಕುಕ್ಕರ್ ದಾನವಾಗಿ ನೀಡಿದರು. ಈ ಸಂದರ್ಭ ಶಾಲಾ ಮುಖ್ಯ ಶಿಕ್ಷಕಿ ನಾಗರತ್ನ, ಶಿಕ್ಷಕಿ ಜಯಶ್ರೀ, ಸಂಪನ್ಮೂಲ ವ್ಯಕ್ತಿ ಪುರುಶೋತ್ತÀಮ್, ಅಂಗನವಾಡಿ ಶಿಕ್ಷಕಿ ನಳಿನಿ ಶಿವಣ್ಣ ಹಾಜರಿದ್ದರು.