ಮಡಿಕೇರಿ, ನ. 4: ಕೊಡಗು ಜಿಲ್ಲಾ ಬಡ್ತಿ ಪ್ರೌಢಶಾಲಾ ಶಿಕ್ಷಕರ ಸಂಘದ ವತಿಯಿಂದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಪೆರಿಗ್ರೀನ್ ಎಸ್. ಮಚಾಡೋ ಅವರನ್ನು ಭೇಟಿ ಮಾಡಿ ಸ್ವಾಗತ ಕೋರಲಾಯಿತು.
ಬಡ್ತಿ ಶಿಕ್ಷಕರ ಬಹು ದಿನಗಳ ಬೇಡಿಕೆ ಯಾಗಿದ್ದ ವಿಶೇಷ ಭತ್ಯೆಯನ್ನು 2008ರ ನಂತರ ಬಡ್ತಿ ಹೊಂದಿದ ಶಿಕ್ಷಕರಿಗೆ 6ನೇ ವೇತನ ದಲ್ಲಿ ವಿಲೀನಗೊಳಿಸಲು ಎಲ್ಲ ಸರ್ಕಾರಿ ಅನುದಾನಿತ ಪ್ರೌಢಶಾಲಾ ಮುಖ್ಯ ಶಿಕ್ಷಕರಿಗೆ ಹಾಗೂ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಕೋರಲಾಯಿತು. ಸಂಘದ ಅಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷೆ ಗೀತಾ, ಪ್ರಧಾನ ಕಾರ್ಯದರ್ಶಿ ಡಿ.ಹೆಚ್. ಪುಷ್ಪ, ಖಜಾಂಚಿ ಕೆ.ಕೆ. ಪುಷ್ಪ, ಸಂಘಟನಾ ಕಾರ್ಯದರ್ಶಿ ಉಷಾರಾಣಿ, ಸದಸ್ಯರಾದ ಕಾಮಾಕ್ಷಿ, ದೇಜಮ್ಮ, ಗಾಯತ್ರಿದೇವಿ, ಆಗ್ನೇಸ್, ತಮ್ಮಯ್ಯ, ಹೆಲೆನ್, ವಿಮಲ, ಲೀನಾ, ಮಾಲಿನಿ ಹಾಗೂ ಸುಮಿ ಹಾಜರಿದ್ದರು.