ಸುಂಟಿಕೊಪ್ಪ, ನ. 4: ಇಲ್ಲಿನ ಗದ್ದೆಹಳ್ಳ ವಿಜಯ ಬ್ಯಾಂಕ್ ಶಾಖೆ ವತಿಯಿಂದ ಬ್ಯಾಂಕಿನ 88 ನೇ ವರ್ಷದ ಸಂಸ್ಥಾಪಕರ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭ ಬ್ಯಾಂಕಿನ ಗ್ರಾಹಕರಿಗೆ ಸಿಹಿ ಹಂಚಿ ಸಂಭ್ರಮಿಸಲಾಯಿತು. ಈ ಸಂದರ್ಭ ವಿಜಯ ಬ್ಯಾಂಕಿನ ವ್ಯವಸ್ಥಾಪಕ ಸಂದೀಪ್ ಲೋಚಬ್, ಉಪ ವ್ಯವಸ್ಥಾಪಕ ಹೆಚ್.ಡಿ. ರಂಗರಾಜು, ಅಧಿಕಾರಿಗಳಾದ ರಾಜೇಂದ್ರ ಕುಮಾರ್, ರವಿ, ಸತೀಶ್. ಸಿಬ್ಬಂದಿ ಸಂತೋಷ್ ಹಾಜರಿದ್ದರು.