ಚೆಟ್ಟಳ್ಳಿ, ನ. 4: ಕಾಲೂರು ಗ್ರಾಮದ ದೇವಸ್ತೂರಿನಲ್ಲಿ ಐದು ಜನ ಫಲಾನುಭವಿಗಳನ್ನು ಗುರುತಿಸಿ ,ಬೆಂಗಳೂರಿನ ವೈದ್ಯ ಮಾಪಂಗಡ ಡಾ|| ಬೆಳ್ಳಿಯಪ್ಪ ಕೊಡಗು ಸೇವಾ ಕೇಂದ್ರದ ಸಹಯೋಗದಲ್ಲಿ ಸೋಲಾರ್ ದೀಪವನ್ನು ವಿತರಿಸಿದರು.
ವಿತರಣಾ ಕಾರ್ಯಕ್ರಮದಲ್ಲಿ ,ಕೊಡಗು ಸೇವಾಕೇಂದ್ರದ ಪುತ್ತರಿರ ಪಪ್ಪು ತಿಮ್ಮಯ್ಯ, ಮಾಪಂಗಡ ಸಜನ್ ದೇವಯ್ಯ,ವಿ. ಟಿ .ಮದನ್, ಬಲ್ಲಚಂಡ ರಂಜನ್, ಚಾಮೇರಾ ಸಂತು ಜಗನ್ , ಹಾಜರಿದ್ದರು. ಈಗಾಗಲೇ ವೈದ್ಯರು ಪ್ರಕೃತಿ ವಿಕೋಪ ನಡೆದ ಸ್ಥಳಗಳಲ್ಲಿ ಇಪ್ಪತೈದಕ್ಕೂ ಹೆಚ್ಚು ಸೋಲಾರ್ ದೀಪಗಳನ್ನು ವಿತರಿಸಿದ್ದಾರೆ. ನಂತರದ ದಿನಗಳಲ್ಲಿ ಇನ್ನಷ್ಟು ಫಲಾನುಭವಿಗಳನ್ನು ಗುರುತಿಸಿ ಸೋಲಾರ್ ದೀಪವನ್ನು ವಿತರಿಸಲಾಗುವದೆಂದು ತಿಳಿಸಿದ್ದಾರೆ.