ಮಡಿಕೇರಿ, ನ. 7: ರಾಜ್ಯ ಸರಕಾರದ ನಿಲುವಾದ ಟಿಪ್ಪು ಜಯಂತಿ ಆಚರಣೆಯ ದಿನವಾದ ತಾ. 10 ರ ಶನಿವಾರ ಎದುರಾಗುತ್ತಿರು ವಂತೆ ಸರಕಾರದ ಈ ನಿರ್ಧಾರಕ್ಕೆ ಕೊಡಗು ಜಿಲ್ಲೆಯಾದ್ಯಂತ ಸಾರ್ವತ್ರಿಕವಾದ ವಿರೋಧಗಳು - ಖಂಡನಾ ಹೇಳಿಕೆಗಳು ವ್ಯಕ್ತಗೊಳ್ಳುತ್ತಿವೆ.ಸರಕಾರದ ಕಾರ್ಯಕ್ರಮವಾಗಿ ಈ ಜನ್ಮದಿನಾಚರಣೆಗೆ ಸಹಕರಿಸುವಂತೆ ಪೊಲೀಸ್ ಇಲಾಖೆ ಹಾಗೂ ಸಂಬಂಧಿಸಿದ ಅಧಿಕಾರಿಗಳು ಮನವಿ ಮಾಡುವದರೊಂದಿಗೆ ಅಲ್ಲಲ್ಲಿ ಶಾಂತಿ ಸಭೆಗಳನ್ನು ನಡೆಸುತ್ತಿರುವದು ಒಂದೆಡೆ ನಡೆಯುತ್ತಿದೆ. ಇದರ ಬೆನ್ನಲ್ಲೇ ಟಿಪ್ಪು ಜಯಂತಿಯ ದಿನವಾದ ತಾ. 10 ರಂದು ಸ್ವಯಂಪ್ರೇರಿತ ಕೊಡಗು ಬಂದ್‍ಗೆ ಟಿಪ್ಪು ಜಯಂತಿ ವಿರೋಧಿ ಸಮಿತಿ ಕರೆ ನೀಡಿದೆ.ಮಾತ್ರವಲ್ಲದೆ ಸ್ವಯಂಪ್ರೇರಿತ ಬಂದ್‍ಗೆ ಕರೆ ನೀಡಿರುವ ಸಮಿತಿ ಯಾವದೇ ಅನಾಹುತಗಳು ಸಂಭವಿಸಿದಲ್ಲಿ ಇದಕ್ಕೆ ಜಿಲ್ಲಾಡಳಿತ ಹಾಗೂ ಸರಕಾರವೇ ಹೊಣೆ ಎಂಬ ಸಂದೇಶವನ್ನು ನೀಡಿರುವದು ಈಗಿನ ಬೆಳವಣಿಗೆಯಾಗಿದೆ. ಇದರೊಂದಿಗೆ ತಾ. 8 ರಂದು (ಇಂದು) ವೀರಾಜಪೇಟೆ ಹಾಗೂ ಸೋಮವಾg Àಪೇಟೆಯಲ್ಲಿ ಜಯಂತಿಯನ್ನು ವಿರೋಧಿಸಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಈ ನಡುವೆ ಜಿಲ್ಲಾಡಳಿತ ಮುನ್ನೆಚ್ಚರಿಕಾ ಕ್ರಮವಾಗಿ ತಾ. 9 ಹಾಗೂ 10 ರಂದು ಜಿಲ್ಲೆಯಾದ್ಯಂತ ಸೆಕ್ಷನ್ 144 ಜಾರಿಗೊಳಿಸಲು ಮುಂದಾಗಿದೆ ಎಂದು ಮಾಹಿತಿಯೂ ಲಭ್ಯವಾಗಿದೆ.ಸ್ವಯಂ ಘೋಷಿತ ಕೊಡಗು ಬಂದ್‍ಗೆ ಹೋರಾಟ ಸಮಿತಿ ಕರೆ ಸೋಮವಾರಪೇಟೆ: ಟಿಪ್ಪು ಜಯಂತಿ ದಿನವಾದ ತಾ. 10ರಂದು ಕೊಡಗಿನಲ್ಲಿ ಸ್ವಯಂಪ್ರೇರಿತ ಬಂದ್ ಮಾಡುವಂತೆ ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿ ಕರೆ ನೀಡಿದೆ.

ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟಿಪ್ಪು ಜಯಂತಿ ವಿರೋಧಿ ಹೋರಾಟ (ಮೊದಲ ಪುಟದಿಂದ) ಸಮಿತಿಯ ಜಿಲ್ಲಾಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್ ಅವರು, ಕೊಡಗಿನ ಮೇಲೆ 32 ಬಾರಿ ಆಕ್ರಮಣ ನಡೆಸಿ, ಮತಾಂತರ, ಅತ್ಯಾಚಾರ, ಅನಾಚಾರ, ದೌರ್ಜನ್ಯ ನಡೆಸಿದ ಟಿಪ್ಪುವಿನ ಜಯಂತಿಯನ್ನು ಕೊಡಗಿನಲ್ಲಿ ಆಚರಿಸಬಾರದು. ಈ ಹಿನ್ನೆಲೆ ತಾ. 10ರಂದು ಸ್ವಯಂ ಪ್ರೇರಿತರಾಗಿ ಬಂದ್ ನಡೆಸುವಂತೆ ಚೇಂಬರ್ ಆಫ್ ಕಾಮರ್ಸ್, ಖಾಸಗಿ ಬಸ್ ಮಾಲೀಕರ ಸಂಘ ಸೇರಿದಂತೆ ವಿವಿಧ ಸಂಘಸಂಸ್ಥೆಗಳು ಮತ್ತು ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ ಎಂದರು.

ಟಿಪ್ಪು ಜಯಂತಿ ಸಂದರ್ಭ ವಿಶ್ವಹಿಂದೂ ಪರಿಷತ್‍ನ ಕುಟ್ಟಪ್ಪ ಅವರು ಸಾವನ್ನಪ್ಪಿದಾಗ, ಅವರ ಮಗ ಡಾಲಿ ಕುಟ್ಟಪ್ಪ ಅವರ ಹೆಗಲ ಮೇಲೆ ಕೈಹಾಕಿದ್ದ ಕುಮಾರಸ್ವಾಮಿ ಅವರು, ತಾನು ಮುಖ್ಯಮಂತ್ರಿಯಾದರೆ ಟಿಪ್ಪು ಜಯಂತಿಯನ್ನು ರದ್ದುಪಡಿಸುತ್ತೇನೆ ಎಂದು ಹೇಳಿದ್ದರು. ಆದರೆ ಅಂದು ನೀಡಿದ ಮಾತನ್ನು ಮರೆತು ಇದೀಗ ಸರ್ಕಾರದ ಮೂಲಕವೇ ಜಯಂತಿ ಆಚರಿಸಲು ಹೊರಟಿರುವದು ದುರದೃಷ್ಟಕರ ಎಂದರು.

ತನ್ನ ಸಾಮ್ರಾಜ್ಯ ವಿಸ್ತರಣೆಗಾಗಿ ಹೋರಾಡಿದ ಟಿಪ್ಪು ಯಾವ ನಿಟ್ಟಿನಲ್ಲೂ ಸ್ವಾತಂತ್ರ್ಯ ಹೋರಾಟ ಗಾರನಲ್ಲ. ಸಾಮ್ರಾಜ್ಯಶಾಹಿ ಯಾಗಿದ್ದ ಈತ ಅಧಿಕಾರಕ್ಕಾಗಿ ತನ್ನ ಮಕ್ಕಳನ್ನೇ ಒತ್ತೆಯಿಟ್ಟಿದ್ದ. ಇದರೊಂದಿಗೆ ಕೊಡಗಿನಲ್ಲಿ ದುರಾಕ್ರಮಣ ನಡೆಸಿ, ಸಾವಿರಾರು ಮಂದಿಯನ್ನು ಮತಾಂತರ, ಅತ್ಯಾಚಾರ ನಡೆಸಿದ್ದಾನೆ. ಈತನ ವ್ಯಕ್ತಿತ್ವದಿಂದ ಟಿಪ್ಪು ಜಯಂತಿಯನ್ನು ವಿರೋಧಿಸಲಾಗು ತ್ತಿದೆಯೇ ಹೊರತು, ಯಾವದೇ ಧರ್ಮದ ವಿರುದ್ಧ ಹೋರಾಟವಲ್ಲ ಎಂದು ಅಭಿಮನ್ಯುಕುಮಾರ್ ಸ್ಪಷ್ಟಪಡಿಸಿದರು.

ಪ್ರವಾಹದಿಂದ ಈಗಷ್ಟೇ ಚೇತರಿಸಿಕೊಳ್ಳುತ್ತಿರುವ ಜಿಲ್ಲೆಯಲ್ಲಿ ಕೈಲ್‍ಮುಹೂರ್ತ, ಆಯುಧಪೂಜೆ, ಕನ್ನಡ ರಾಜ್ಯೋತ್ಸವ, ವಾಲ್ಮೀಕಿ ಜಯಂತಿಯನ್ನು ಸರಳವಾಗಿ ಆಚರಿಸಲಾಗಿದೆ. ಆದರೆ ತೀವ್ರ ವಿರೋಧದ ನಡುವೆಯೂ ಸರ್ಕಾರದ ಹಣದಲ್ಲಿ ಟಿಪ್ಪು ಜಯಂತಿ ಮಾಡಲು ಸರ್ಕಾರ ಹೊರಟಿರುವದು ಖಂಡನೀಯ ಎಂದರು.

ಕೊಡಗಿನಲ್ಲಿ ಈಗಾಗಲೇ 2 ಸಾವಿಗೆ ಟಿಪ್ಪು ಜಯಂತಿ ಕಾರಣವಾಗಿದೆ. ಈ ಹಿನ್ನೆಲೆ ಜಿಲ್ಲೆಯ ಶಾಂತಿ ಸಾಮರಸ್ಯ ಕಾಪಾಡಲು ಕೊಡಗಿನ ಮಟ್ಟಿಗೆ ಟಿಪ್ಪು ಜಯಂತಿಯನ್ನು ರದ್ದುಗೊಳಿಸಲು ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳಬೇಕು. ಇದನ್ನೂ ಮೀರಿದರೆ ತಾ. 10ರಂದು ಕೊಡಗು ಬಂದ್ ನಡೆಯಲಿದ್ದು, ಏನಾದರೂ ಅನಾಹುತಗಳು ಸಂಭವಿಸಿದರೆ ಜಿಲ್ಲಾಡಳಿತ ಮತ್ತು ಸರ್ಕಾರವೇ ನೇರ ಹೊಣೆಯಾಗುತ್ತದೆ ಎಂದು ಹೇಳಿದರು.

ಇಂದು ಪ್ರತಿಭಟನೆ: ತಾ. 8ರಂದು (ಇಂದು) ವೀರಾಜಪೇಟೆ ಮತ್ತು ಸೋಮವಾರಪೇಟೆಯಲ್ಲಿ ಟಿಪ್ಪು ಜಯಂತಿ ವಿರೋಧಿಸಿ ಪ್ರತಿಭಟನೆ ನಡೆಯಲಿದೆ. ತಾ. 9ರಂದು ಮಡಿಕೇರಿಯಲ್ಲಿ ಜಿಲ್ಲಾಮಟ್ಟದ ಪ್ರತಿಭಟನೆ ನಡೆಯಲಿದೆ ಎಂದು ಅಭಿಮನ್ಯುಕುಮಾರ್ ತಿಳಿಸಿದರು.

ಗೋಷ್ಠಿಯಲ್ಲಿದ್ದ ವಿಧಾನ ಪರಿಷತ್ ಮಾಜೀ ಸದಸ್ಯ ಎಸ್.ಜಿ. ಮೇದಪ್ಪ ಮಾತನಾಡಿ, ಕೊಡಗಿನ ಜನರ ವಿರೋಧದ ನಡುವೆ ಟಿಪ್ಪು ಜಯಂತಿ ಆಚರಿಸಲು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನಸ್ಸಿಲ್ಲ. ಆದರೂ ಸರ್ಕಾರದ ಒತ್ತಡಕ್ಕೆ ಮಣಿಯುತ್ತಿದ್ದಾರೆ. ಜಯಂತಿ ಆಚರಿಸಲೇ ಬೇಕಿದ್ದರೆ ಅಬ್ದುಲ್ ಕಲಾಂ ಅವರ ಜನ್ಮ ದಿನ ಆಚರಿಸುವಂತಾಗಲಿ. ಎಲ್ಲರೂ ಬೆಂಬಲ ನೀಡುತ್ತಾರೆ ಎಂದು ಸಲಹೆಯಿತ್ತರು. ಗೋಷ್ಠಿಯಲ್ಲಿ ಸಮಿತಿಯ ಪದಾಧಿಕಾರಿಗಳಾದ ಕೊಮಾರಪ್ಪ, ಮನುಕುಮಾರ್ ರೈ, ಎಸ್.ಆರ್. ಸೋಮೇಶ್, ಶರತ್‍ಚಂದ್ರ ಅವರುಗಳು ಉಪಸ್ಥಿತರಿದ್ದರು.

ವೀರಾಜಪೇಟೆಯಲ್ಲಿ ಶಾಂತಿ ಸಭೆ

ಸರ್ಕಾರದ ಆದೇಶದಂತೆ ತಾ. 10 ರಂದು ಟಿಪ್ಪು ಜಯಂತಿಯನ್ನು ಆಚರಿಸಲಾಗುವದು ಎಂದು ಕೊಡಗು ಜಿಲ್ಲಾ ಉಪವಿಭಾಗಧಿಕಾರಿ ಜವರೇಗೌಡ ತಿಳಿಸಿದರು.

ವೀರಾಜಪೇಟೆಯ ಪುರಭವನದ ಸಭಾಂಗಣದಲ್ಲಿ ಟಿಪ್ಪು ಜಯಂತಿ ಆಚರಣೆಯ ಪ್ರಯುಕ್ತ ಆಯೋಜಿಸ ಲಾಗಿದ್ದ ಸಾರ್ವಜನಿಕ ಹಾಗೂ ಸಂಘ ಸಂಸ್ಥೆಗಳ ಮುಖಂಡರ ಶಾಂತಿ ಸಭೆಯಲ್ಲಿ ಮಾತನಾಡಿದ, ಅವರು ಸರ್ಕಾರದ ಕಾರ್ಯಕ್ರಮಗಳಿಗೆ ಅಡ್ಡಿ ಮಾಡುವ ವ್ಯಕ್ತಿಗಳ ಮೇಲೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುವದು. ಎಲ್ಲಾ ಧಾರ್ಮಿಕ ಮುಖಂಡರುಗಳು ಟಿಪ್ಪು ಜಯಂತಿಯನ್ನು ಶಾಂತಿಯುತವಾಗಿ ಆಚರಿಸಲು ಕೈಜೋಡಿಸಬೇಕು ಎಂದರು.

ವೀರಾಜಪೇಟೆ ಪೊಲೀಸ್ ಉಪ ಅಧೀಕ್ಷಕ ನಾಗಪ್ಪ ಮಾತನಾಡಿ ಟಿಪ್ಪು ಜಯಂತಿ ಅಂಗವಾಗಿ ಹಮ್ಮಿಕೊಂಡಿ ರುವ ಕಾರ್ಯಕ್ರಮವು ಸರ್ಕಾರಿ ಕಾರ್ಯಕ್ರಮವಾಗಿದ್ದು ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಇಲಾಖೆಯು ಮುಂಜಾಗ್ರತಾ ಕ್ರಮ ತೆಗೆದುಕೊಂಡಿದೆ. ಶಾಂತಿ ಕದಡಲು ಯಾವದೇ ವ್ಯಕ್ತಿ ಮತ್ತು ಸಂಘಟನೆಗಳು ಮುಂದಾದಲ್ಲಿ ಕಾನೂನು ರೀತಿಯಲ್ಲಿ ಕ್ರಮ ಜರುಗಿಸಲಾಗುತ್ತದೆ. ಟಿಪ್ಪು ಜಯಂತಿಯ ಪ್ರಯುಕ್ತ ಪರ ಮತ್ತು ವಿರೋಧದ ಮೆರವಣಿಗೆಗೆ ಆಸ್ಪದ ಇಲ್ಲ ಎಂದು ಹೇಳಿದರು.

ವೇದಿಕೆಯಲ್ಲಿ ತಹಶೀಲ್ದಾರ್ ಗೋವಿಂದರಾಜ್, ವೃತ್ತ ನಿರೀಕ್ಷಕ ಕುಮಾರ್ ಆರಾಧ್ಯ, ಗ್ರಾಮಾಂತರ ಠಾಣಾಧಿಕಾರಿ ಸುರೇಶ್ ಬೋಪಣ್ಣ, ನಗರ ಠಾಣಾಧಿಕಾರಿ ಸಂತೋಷ್ ಕಶ್ಯಪ್ ಉಪಸ್ಥಿತÀರಿದ್ದರು.

ಶಾಂತಿ ಸಭೆಯಲ್ಲಿ ವಿವಿಧ ಪಕ್ಷಗಳ ಮುಖಂಡರು, ವಿವಿಧ ಧರ್ಮಗಳ ಮುಖಂಡರು ಹಾಗೂ ಪ್ರಮುಖ ಸಾರ್ವಜನಿಕರು, ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.

ಟಿಪ್ಪು ಜಯಂತಿ ಧಿಕ್ಕರಿಸುವಂತೆ ಕರೆ

ಟಿಪ್ಪು ಸುಲ್ತಾನ ಆಡಳಿತ ಅವದಿಯಲ್ಲಿ ಕ್ರೈಸ್ತ ಮತ ಹಿಂದೂ ಧರ್ಮ ಮತ್ತು ಇಸ್ಲಾಂ ಧರ್ಮಕ್ಕೆ ವಿರುದ್ಧವಾಗಿ ಮತಾಂತರ ಮಾಡಿರುವ ಸುಲ್ತಾನನ ಜಯಂತಿಯನ್ನು ಧಿಕ್ಕರಿಸುವಂತೆ ಹಿಂದೂ ಪರ ಸಂಘಟನೆಗಳ ಪ್ರಮುಖ, ವಿಶ್ವ ಹಿಂದೂ ಪರಿಷತ್‍ನ ತಾಲೂಕು ಅಧ್ಯಕ್ಷ ಸಣ್ಣುವಂಡ ಗಣೇಶ್ ಮೇದಪ್ಪ ಕರೆ ನೀಡಿದ್ದಾರೆ.

ವೀರಾಜಪೇಟೆ ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕೊಡಗಿನಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಮುಗ್ದ ನಾಗರಿಕರನ್ನು ಮತಾಂತರ ಮಾಡುವ ಮೂಲಕ ದೇವಟಿಪರಂಬುವಿನಲ್ಲಿ ತನ್ನ ಸಹಚರರಿಂದ ಏನು ಅರಿಯದ ಸಾಮಾನ್ಯರನ್ನು ನರಮೇದ ಮಾಡಿರುವ ಟಿಪ್ಪು ಕೊಡಗಿನಲ್ಲಿ ಅಲ್ಲದೇ ನೆರೆಯ ಕೇರಳ ರಾಜ್ಯದಲ್ಲಿ ವಿಖ್ಯಾತ ದೇಗುಲಗಳನ್ನು ಕೆಡವಿ ಮೂರ್ತಿಗಳನ್ನು ಭಗ್ನ ಮಾಡಿರುವ ಟಿಪ್ಪು ಧೀಮಂತ ಸಂಸ್ಕøತಿಯನ್ನು ಹೊಂದಿರುವ ಹಿಂದೂ ಧರ್ಮದ ಮೇಲೆ ಅತ್ಯಾಚಾರವೆಸಗಿರುವ ಟಿಪ್ಪು ಸುಲ್ತಾನ ಜಯಂತಿ ಆಚರಣೆಯನ್ನು ಕಟುವಾಗಿ ವಿರೋಧಿಸುತ್ತಿದ್ದೇವೆ ಎಂದರು. ಧರ್ಮಗಳ ಮಧ್ಯೆ ಒಡುಕು ತರುವಂತ ಜಯಂತಿ ಆಚರಣೆಗೆ ನಮ್ಮ ವಿರೋಧವಿದೆ. ಸರ್ಕಾರವು ಟಿಪ್ಪು ಜಯಂತಿ ಆಚರಣೆಯನ್ನು ರದ್ದುಗೊಳಿಸಬೇಕು ಎಂದು ಆಗ್ರಹ ಪಡಿಸಿದರು. ಜಯಂತಿ ವಿರೋಧಿಸಿ ತಾ. 8ರಂದು ವೀರಾಜಪೇಟೆ ನಗರದಲ್ಲಿ ಸಂಘ ಪರಿವಾರದಿಂದ ಕರಾಳ ದಿನ ಅಚರಣೆ ಅಂಗವಾಗಿ ಬೃಹತ್ ಪ್ರತಿಭಟನೆ ಮೆರವಣಿಗೆ ಹಮ್ಮಿಕೊಂಡು ಮೆರವಣಿಗೆ ಮುಲಕ ತೆರಳಿ ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸುತ್ತಿದ್ದೇವೆ ಎಂದು ಹೇಳಿದರು.

ಭಜರಂಗದಳದ ತಾಲೂಕು ಸಂಚಾಲಕ ವಿವೇಕ್ ರೈ ಮಾತನಾಡಿ, ಟಿಪ್ಪು ಸುಲ್ತಾನ ಕರ್ನಾಟಕದ ಕೊಡಗಿನಲ್ಲಿ ಮಂಗಳೂರಿನಲ್ಲಿ ಮತ್ತು ನೆರೆಯ ಕೇರಳ ರಾಜ್ಯದಲ್ಲಿ ಪೂರ್ವ ನೆಲೆಯ ನಿವಾಸಿಗಳನ್ನು ಮತಾಂತರ ಮಾಡಿ ಧರ್ಮಗಳನ್ನು ಒಡೆದು ಆಳುವ ನೀತಿಯನ್ನು ಅನುಸರಿಸಿ ದೇಗುಲ, ಮಸೀದಿ ಮತ್ತು ಚರ್ಚುಗಳನ್ನು ಕೆಡವಿ ಧರ್ಮಗಳ ವಿರೋಧವನ್ನು ಗಳಿಸಿದ್ದಾತನ ಜಯಂತಿ ಆಚರಿಸುತ್ತಿರುವದು ಧರ್ಮಗಳ ಮಧ್ಯೆ ಒಡುಕು ತರುವಂತೆ ಮತ್ತು ಜನಾಂಗೀಯ ಒಲೈಕೆಗಾಗಿ ಮಾಡುತ್ತಿರುವ ಜಯಂತಿ ಆಚರಣೆಯಾಗಿದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ವಿಶ್ವ ಹಿಂದೂ ಪರಿಷತ್ ನಗರ ಅಧ್ಯಕ್ಷ ಪೊನ್ನಪ್ಪ ರೈ, ನಗರ ಸಹ ಸಂಚಾಲಕ ಭಜರಂಗದಳ ಶಿನೋಜ್ ಟಿ.ಕೆ. ಹಾಜರಿದ್ದರು.

ಇಂದು ಪ್ರತಿಭಟನೆ

ಗೋಣಿಕೊಪ್ಪ ವರದಿ: ಟಿಪ್ಪು ಜಯಂತಿ ವಿರೋಧಿಸಿ ತಾ. 8 ರಂದು (ಇಂದು) ವೀರಾಜಪೇಟೆಯಲ್ಲಿ ವೀರಾಜಪೇಟೆ ತಾಲೂಕು ಟಿಪ್ಪು ಜಯಂತಿ ವಿರೋಧಿ ಸಮಿತಿ ವತಿಯಿಂದ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಬೆಳಿಗ್ಗೆ 10.30ಕ್ಕೆ ವೀರಾಜಪೇಟೆ ಮಾರಿಯಮ್ಮ ದೇವಸ್ಥಾನದಿಂದ ತಹಶೀಲ್ದಾರ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ನಂತರ ಟಿಪ್ಪು ಜಯಂತಿ ನಡೆಸದಂತೆ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಕೆ ನಡೆಯಲಿದೆ ಎಂದು ವೀರಾಜಪೇಟೆ ತಾಲೂಕು ಟಿಪ್ಪು ಜಯಂತಿ ವಿರೋಧಿ ಸಮಿತಿ ಸಂಚಾಲಕ ನೆಲ್ಲೀರ ಚಲನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬೆಂಬಲ: ತಾ. 8 ರಂದು ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿ ಕರೆದಿರುವ ಪ್ರತಿಭಟನೆಗೆ ಬಿಜೆಪಿ ಬೆಂಬಲ ಸೂಚಿಸಲಿದೆ ಎಂದು ವೀರಾಜಪೇಟೆ ಕ್ಷೇತ್ರ ಬಿಜೆಪಿ ಅಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ ತಿಳಿಸಿದ್ದಾರೆ. ಬಿಜೆಪಿಯ ಹೆಚ್ಚಿನ ಕಾರ್ಯಕರ್ತರು ಮೆರವಣಿಗೆಯಲ್ಲಿ ಪಾಲ್ಗೊಂಡು ತಮ್ಮ ವಿರೋಧ ವ್ಯಕ್ತಪಡಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಕುಶಾಲನಗರದಲ್ಲಿ ವಿರೋಧ

ಟಿಪ್ಪು ಜಯಂತಿ ಆಚರಣೆಗೆ ವಿರೋಧ ವ್ಯಕ್ತಪಡಿಸಿ ಕೊಡಗು ಜಿಲ್ಲಾ ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿ ಕರೆ ನೀಡಿರುವ ಸ್ವಯಂ ಪ್ರೇರಿತ ಕೊಡಗು ಬಂದ್‍ಗೆ ಕುಶಾಲನಗರ ಹೋಬಳಿ ಸಮಿತಿ ಸಂಪೂರ್ಣ ಬೆಂಬಲ ವ್ಯಕ್ತಪಡಿಸುವದಾಗಿ ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿಯ

ಟಿಪ್ಪು ಧೀಮಂತ ಸಂಸ್ಕøತಿಯನ್ನು ಹೊಂದಿರುವ ಹಿಂದೂ ಧರ್ಮದ ಮೇಲೆ ಅತ್ಯಾಚಾರವೆಸಗಿರುವ ಟಿಪ್ಪು ಸುಲ್ತಾನ ಜಯಂತಿ ಆಚರಣೆಯನ್ನು ಕಟುವಾಗಿ ವಿರೋಧಿಸುತ್ತಿದ್ದೇವೆ ಎಂದರು. ಧರ್ಮಗಳ ಮಧ್ಯೆ ಒಡುಕು ತರುವಂತ ಜಯಂತಿ ಆಚರಣೆಗೆ ನಮ್ಮ ವಿರೋಧವಿದೆ. ಸರ್ಕಾರವು ಟಿಪ್ಪು ಜಯಂತಿ ಆಚರಣೆಯನ್ನು ರದ್ದುಗೊಳಿಸಬೇಕು ಎಂದು ಆಗ್ರಹ ಪಡಿಸಿದರು. ಜಯಂತಿ ವಿರೋಧಿಸಿ ತಾ. 8ರಂದು ವೀರಾಜಪೇಟೆ ನಗರದಲ್ಲಿ ಸಂಘ ಪರಿವಾರದಿಂದ ಕರಾಳ ದಿನ ಅಚರಣೆ ಅಂಗವಾಗಿ ಬೃಹತ್ ಪ್ರತಿಭಟನೆ ಮೆರವಣಿಗೆ ಹಮ್ಮಿಕೊಂಡು ಮೆರವಣಿಗೆ ಮುಲಕ ತೆರಳಿ ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸುತ್ತಿದ್ದೇವೆ ಎಂದು ಹೇಳಿದರು.

ಭಜರಂಗದಳದ ತಾಲೂಕು ಸಂಚಾಲಕ ವಿವೇಕ್ ರೈ ಮಾತನಾಡಿ, ಟಿಪ್ಪು ಸುಲ್ತಾನ ಕರ್ನಾಟಕದ ಕೊಡಗಿನಲ್ಲಿ ಮಂಗಳೂರಿನಲ್ಲಿ ಮತ್ತು ನೆರೆಯ ಕೇರಳ ರಾಜ್ಯದಲ್ಲಿ ಪೂರ್ವ ನೆಲೆಯ ನಿವಾಸಿಗಳನ್ನು ಮತಾಂತರ ಮಾಡಿ ಧರ್ಮಗಳನ್ನು ಒಡೆದು ಆಳುವ ನೀತಿಯನ್ನು ಅನುಸರಿಸಿ ದೇಗುಲ, ಮಸೀದಿ ಮತ್ತು ಚರ್ಚುಗಳನ್ನು ಕೆಡವಿ ಧರ್ಮಗಳ ವಿರೋಧವನ್ನು ಗಳಿಸಿದ್ದಾತನ ಜಯಂತಿ ಆಚರಿಸುತ್ತಿರುವದು ಧರ್ಮಗಳ ಮಧ್ಯೆ ಒಡುಕು ತರುವಂತೆ ಮತ್ತು ಜನಾಂಗೀಯ ಒಲೈಕೆಗಾಗಿ ಮಾಡುತ್ತಿರುವ ಜಯಂತಿ ಆಚರಣೆಯಾಗಿದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ವಿಶ್ವ ಹಿಂದೂ ಪರಿಷತ್ ನಗರ ಅಧ್ಯಕ್ಷ ಪೊನ್ನಪ್ಪ ರೈ, ನಗರ ಸಹ ಸಂಚಾಲಕ ಭಜರಂಗದಳ ಶಿನೋಜ್ ಟಿ.ಕೆ. ಹಾಜರಿದ್ದರು.

ಇಂದು ಪ್ರತಿಭಟನೆ

ಗೋಣಿಕೊಪ್ಪ ವರದಿ: ಟಿಪ್ಪು ಜಯಂತಿ ವಿರೋಧಿಸಿ ತಾ. 8 ರಂದು (ಇಂದು) ವೀರಾಜಪೇಟೆಯಲ್ಲಿ ವೀರಾಜಪೇಟೆ ತಾಲೂಕು ಟಿಪ್ಪು ಜಯಂತಿ ವಿರೋಧಿ ಸಮಿತಿ ವತಿಯಿಂದ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಬೆಳಿಗ್ಗೆ 10.30ಕ್ಕೆ ವೀರಾಜಪೇಟೆ ಮಾರಿಯಮ್ಮ ದೇವಸ್ಥಾನದಿಂದ ತಹಶೀಲ್ದಾರ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ನಂತರ ಟಿಪ್ಪು ಜಯಂತಿ ನಡೆಸದಂತೆ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಕೆ ನಡೆಯಲಿದೆ ಎಂದು ವೀರಾಜಪೇಟೆ ತಾಲೂಕು ಟಿಪ್ಪು ಜಯಂತಿ ವಿರೋಧಿ ಸಮಿತಿ ಸಂಚಾಲಕ ನೆಲ್ಲೀರ ಚಲನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬೆಂಬಲ: ತಾ. 8 ರಂದು ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿ ಕರೆದಿರುವ ಪ್ರತಿಭಟನೆಗೆ ಬಿಜೆಪಿ ಬೆಂಬಲ ಸೂಚಿಸಲಿದೆ ಎಂದು ವೀರಾಜಪೇಟೆ ಕ್ಷೇತ್ರ ಬಿಜೆಪಿ ಅಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ ತಿಳಿಸಿದ್ದಾರೆ. ಬಿಜೆಪಿಯ ಹೆಚ್ಚಿನ ಕಾರ್ಯಕರ್ತರು ಮೆರವಣಿಗೆಯಲ್ಲಿ ಪಾಲ್ಗೊಂಡು ತಮ್ಮ ವಿರೋಧ ವ್ಯಕ್ತಪಡಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಕುಶಾಲನಗರದಲ್ಲಿ ವಿರೋಧ

ಟಿಪ್ಪು ಜಯಂತಿ ಆಚರಣೆಗೆ ವಿರೋಧ ವ್ಯಕ್ತಪಡಿಸಿ ಕೊಡಗು ಜಿಲ್ಲಾ ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿ ಕರೆ ನೀಡಿರುವ ಸ್ವಯಂ ಪ್ರೇರಿತ ಕೊಡಗು ಬಂದ್‍ಗೆ ಕುಶಾಲನಗರ ಹೋಬಳಿ ಸಮಿತಿ ಸಂಪೂರ್ಣ ಬೆಂಬಲ ವ್ಯಕ್ತಪಡಿಸುವದಾಗಿ ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿಯ ಅವಮಾನಿಸುವ ನಿರಂತರ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು. ಕೊಡವರ ಗಾಯದ ಮೇಲೆ ಉಪ್ಪು ಸವರುವ ಕೆಲಸವನ್ನು ಸರ್ಕಾರ ಮಾಡುತ್ತಿದೆ, ಈ ಕಾರ್ಯವನ್ನು ಕೈಬಿಟ್ಟು ದೇವಟ್ ಪರಂಬ್‍ನಲ್ಲಿ ರಾಷ್ಟ್ರೀಯ ಸ್ಮಾರಕ ಸ್ಥಾಪಿಸಿ ಕೊಡವರಿಗೆ ಶ್ರದ್ಧಾಂಜಲಿ ಅರ್ಪಿಸುವ ದೊಡ್ಡ ಮನಸ್ಸು ಮಾಡಲಿ ಎಂದು ಒತ್ತಾಯಿಸಿದರು.

ಕೊಡಗಿನಲ್ಲಿ ಭಾಗಮಂಡಲ, ಮಲೆತಿರಿಕೆ ಸೇರಿದಂತೆ ನೂರಾರು ದೇಗುಲಗಳನ್ನು ಧ್ವಂಸ ಮಾಡಿದ್ದು ಚರಿತ್ರೆಯಲ್ಲಿದೆ. ಮಲಬಾರ್ ಪ್ರಾಂತದ ಯೋಧ ಜನಾಂಗವಾದ ನಾಯರು ಗಳನ್ನು, ಚಿತ್ರದುರ್ಗದ ವಾಲ್ಮಿಕಿ ಬೇಡ ನಾಯಕರನ್ನು ಮತ್ತು ಮಂಗಳೂರಿನ ಕ್ಯಾಥೋಲಿಕರನ್ನು, ಗೌಡ ಸಾರಸ್ವತ ಕೊಂಕಣಿಗರನ್ನು, ಮೇಲುಕೊಟೆ ಅಯ್ಯಂಗಾರ್‍ಗಳನ್ನು, ಕುಂಭ ಕೋಣಂನ ಅಯ್ಯರ್‍ಗಳನ್ನು ಕೂಡ ಈತ ಬರ್ಬರವಾಗಿ ಹತ್ಯೆ ನಡೆಸಿದ್ದಾನೆ. ಇದೆಲ್ಲವನ್ನು ಟಿಪ್ಪುವಿನ ಆಸ್ಥಾನದ ಇತಿಹಾಸಕಾರ ಮೀರ್ ಉಸ್ಮಾನ್ ಆಲಿ ಕಿರ್ಮಾನಿಯೇ ಸ್ವತಃ ದಾಖಲಿಸಿರುವದು ಬೆಳಕಿಗೆ ಬಂದಿದೆ ಎಂದರು.

ಟಿಪ್ಪು ಜಯಂತಿಯನ್ನು ನಮ್ಮ ಮೇಲೆ ಹೇರುವ ಪ್ರಯತ್ನವನ್ನು ಸರಕಾರ ಮಾಡಬಾರದು. ಬದಲಿಗೆ ಜಯಂತಿಗಾಗಿ ವಿನಿಯೋಗಿಸುವ ಹಣವನ್ನು ಮುಖ್ಯಮಂತ್ರಿಗಳು ಸಂತ್ರಸ್ತ ಕೊಡಗು ಜಿಲ್ಲೆಗೆ ನೀಡಲಿ ಎಂದು ಒತ್ತಾಯಿಸಿದರು.

ವೀರಾಜಪೇಟೆ ತಾ.ಪಂ. ಖಂಡನಾ ನಿರ್ಣಯ

*ಗೋಣಿಕೊಪ್ಪಲು : ಟಿಪ್ಪು ಜಯಂತಿ ಆಚರಣೆ ವಿರುದ್ಧ ಬುಧವಾರ ಪೊನ್ನಂಪೇಟೆಯಲ್ಲಿ ನಡೆದ ವೀರಾಜಪೇಟೆ ತಾಲೂಕು ಪಂಚಾಯಿತಿ ತುರ್ತು ಸಭೆಯಲ್ಲಿ ಖಂಡನಾ ನಿರ್ಣಯ ಕೈಗೊಳ್ಳಲಾಯಿತು.

ಅಧ್ಯಕ್ಷೆ ಬೊಳ್ಳಚಂಡ ಸ್ಮಿತಾ ಪ್ರಕಾಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೊಡಗಿನಲ್ಲಿ ದುರಾಡಳಿತ ನಡೆಸಿ ಇಲ್ಲಿನ ಸಾವಿರಾರು ಜನರ ಸಾವಿಗೆ ಕಾರಣವಾದ ಹಾಗೂ ಸಾವಿರಾರು ಜನರನ್ನು ಮತಾಂತರಗೊಳಿಸಿದ ಟಿಪ್ಪುವಿನ ಜಯಂತಿ ಆಚರಿಸುತ್ತಿರುವದು ಅನ್ಯಾಯವಾಗಿದೆ. ಈ ಬಗ್ಗೆ ಸರ್ಕಾರ ತನ್ನ ನಿರ್ಧಾರವನ್ನು ಪುನರ್ ಪರಿಶೀಲಿಸಬೇಕು ಎಂದು ಒತ್ತಾಯಿಸಿ ಪತ್ರ ಬರೆಯುವ ನಿರ್ಧಾರವನ್ನು ಕೈಗೊಳ್ಳಲಾಯಿತು.

ತಾಲೂಕು ಪಂಚಾಯಿತಿ ಉಪಾಧ್ಯಕ್ಷ ನೆಲ್ಲೀರ ಚಲನ್ ಕುಮಾರ್ ಹಾಜರಿದ್ದರು.

ಜಯಂತಿ ಖಂಡಿಸಿ ವಿರೋಧಿ ಹೇಳಿಕೆಗಳು

ಕೊಡಗು ಮಾಜಿ ಸೈನಿಕರ ಸಂಘ

ಟಿಪ್ಪು ಜಯಂತಿ ಆಚರಣೆಯನ್ನು ನಡೆಸಲು ಸರಕಾರ ಪಟ್ಟು ಹಿಡಿದಿರುವ ಕ್ರಮವನ್ನು ಕೊಡಗು ಮಾಜಿ ಸೈನಿಕರ ಸಂಘ ಆಕ್ಷೇಪಿಸಿದ್ದು, ಈ ದಿನಾಚರಣೆಗೆ ವಿರೋಧ ವ್ಯಕ್ತಪಡಿಸಿದೆ. ಈ ಕುರಿತು ಹೇಳಿಕೆ ನೀಡಿರುವ ಸಂಘದ ಅಧ್ಯಕ್ಷ ನಿವೃತ್ತ ಮೇಜರ್ ಜನರಲ್ ಬಿ.ಎ. ಕಾರ್ಯಪ್ಪ ಹಾಗೂ ಕಾರ್ಯದರ್ಶಿ ಓ.ಎಸ್. ಚಿಂಗಪ್ಪ ಅವರುಗಳು ಈ ನಿರ್ಧಾರವನ್ನು ಖಂಡಿಸಿದ್ದು, ಜನತೆ ಒಪ್ಪದ ವ್ಯಕ್ತಿಯ ಜನ್ಮದಿನಾಚರಣೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಕ್‍ಗ್ಗಟ್ಟ್‍ನಾಡ್ ಕೊಡವ ಹಿತರಕ್ಷಣಾ ಬಳಗ ಆಕ್ಷೇಪ

ಪೊನ್ನಂಪೇಟೆ: ವಿವಾದಿತ ವ್ಯಕ್ತಿಯಾಗಿರುವ ಟಿಪ್ಪುವಿನ ಜನ್ಮದಿನಾಚರಣೆ ನಿರ್ಧಾರವನ್ನು ಸರಕಾರ ಮತ್ತೆ ಮುಂದುವರಿಸು ತ್ತಿರುವದನ್ನು ಪೊನ್ನಂಪೇಟೆಯ ಕ್‍ಗ್ಗಟ್ಟ್‍ನಾಡ್ ಕೊಡವ ಹಿತರಕ್ಷಣಾ ಬಳಗ ಆಕ್ಷೇಪಿಸಿದ್ದು, ಇದಕ್ಕೆ ವಿರೋಧ ವ್ಯಕ್ತಪಡಿಸಿದೆ. ಈ ಕುರಿತು ಹೇಳಿಕೆ ನೀಡಿರುವ ಬಳಗದ ಪ್ರಮುಖರು ಸಾರ್ವತ್ರಿಕವಾದ ವಿರೋಧದ ನಡುವೆಯೂ ಈ ಕಾರ್ಯಕ್ರಮ ನಡೆಸಲು ಮುಂದಾಗಿರುವದನ್ನು ಖಂಡಿಸಿದ್ದು, ಇದಕ್ಕೆ ವಿರೋಧ ವ್ಯಕ್ತಪಡಿಸುವದಾಗಿ ತಿಳಿಸಿದ್ದಾರೆ.

ಹೇರಿಕೆಯ ದಿನಾಚರಣೆ ಖಂಡನೀಯ: ಅ.ಕೊ.ಸ.

ಮಡಿಕೇರಿ : ಟಿಪ್ಪು ಜಯಂತಿ ಆಚರಣೆಯನ್ನು ಕೊಡಗಿನ ಜನತೆಯ ಮೇಲೆ ಹೇರುವದು ಖಂಡನೀಯ ಎಂದು ಅಖಿಲ ಕೊಡವ ಸಮಾಜ ಹೇಳಿದೆ. ಈ ಕುರಿತು ಹೇಳಿಕೆ ನೀಡಿರುವ ಸಮಾಜದ ಅಧ್ಯಕ್ಷ ಮಾತಂಡ ಸಿ. ಮೊಣ್ಣಪ್ಪ ಅವರು ಕೊಡಗಿನ ಪಾಲಿಗೆ ಟಿಪ್ಪು ಯಾವದೇ ಕಾರಣಕ್ಕೂ ದಂತಕಥೆಯಲ್ಲ. ಆತ ಇಲ್ಲಿನ ಜನತೆಯ ಪಾಲಿಗೆ ದುರಂತ ಎಂದಿದ್ದಾರೆ. ಇಂತಹ ಮತಾಂಧ ವ್ಯಕ್ತಿಯ ದಿನಾಚರಣೆ ಯಾವದೇ ರೀತಿಯಲ್ಲೂ ಸಮರ್ಥನೀಯವಲ್ಲ. ಈತನ ದುಷ್ಟ ವ್ಯಕ್ತಿತ್ವದ ಬಗ್ಗೆ ಇತಿಹಾಸದಲ್ಲೇ ನೈಜ ಉಲ್ಲೇಖವಿದೆ. ಇಂತಹ ವ್ಯಕ್ತಿಯ ಜನ್ಮದಿನಾಚರಣೆಯನ್ನು ಜನತೆಯ ಮೇಲೆ ಹೇರಬಾದರು. ಅಖಿಲ ಕೊಡವ ಸಮಾಜ ಸರಕಾರದ ಈ ನಿಲುವನ್ನು ತೀವ್ರವಾಗಿ ಖಂಡಿಸುವದಾಗಿ ಮೊಣ್ಣಪ್ಪ ಹೇಳಿಯಲ್ಲಿ ತಿಳಿಸಿದ್ದಾರೆ.

ಕೊಡವ ಸಮಾಜ ಖಂಡನೆ

ತನ್ನ ಆಡಳಿತದ ಸಂದರ್ಭದಲ್ಲಿ ಕೇವಲ ರಾಜ್ಯ ವಿಸ್ತರಣೆಯ ಧ್ಯೇಯೋದ್ದೇಶದೊಂದಿಗೆ ಹಲವು ರೀತಿಯ ವಿನಾಶಕ್ಕೆ ಕಾರಣಕರ್ತನಾದ ಟಿಪ್ಪು ಹಿಂದೂಗಳ ಭಾವನೆಗಳೊಂದಿಗೆ ಆಟವಾಡಿದ ವ್ಯಕ್ತಿಕೂಡ ಆಗಿದ್ದು, ಇಂತಹವರ ಜನ್ಮ ದಿನಾಚರಣೆಯನ್ನು ಒಪ್ಪಲಾಗದು ಎಂದು ಮಡಿಕೇರಿ ಕೊಡವ ಸಮಾಜ ಹೇಳಿಕೆಯಲ್ಲಿ ತಿಳಿಸಿದೆ.

ಟಿಪ್ಪು ಜನ್ಮದಿನವನ್ನು ಸರಕಾರ ಪ್ರಥಮವಾಗಿ ಆಚರಿಸುವ ಸಂದರ್ಭ ನಮ್ಮಕೊಡವ ಸಮಾಜ ಸೇರಿದಂತೆ ಹಿಂದೂ ಸಂಘಟನೆಗಳು ತೀವ್ರವಾಗಿ ವಿರೋಧಿಸಿದ್ದರೂ ಕೂಡ ಸರಕಾರಇದನ್ನುಗಣನೆಗೆ ತೆಗೆದುಕೊಳ್ಳದೆ ಅನುಷ್ಠಾನಗೊಳಿಸಿ ಹಲವು ಗಂಭೀರ ಅನಾಹುತಗಳಿಗೆ ಕಾರಣವಾಗಿರುವದು ಎಲ್ಲರಿಗೂ ತಿಳಿದಿರುವದೇ ಆಗಿ�