ಮಡಿಕೇರಿ, ನ. 9: ತಾ. 10 ರಂದು (ಇಂದು) ಬೆಳಿಗ್ಗೆ 7.30 ರಿಂದ 9.30 ಗಂಟೆಯ ತನಕ ಮಡಿಕೇರಿಯ ಓಂಕಾರೇಶ್ವರ ದೇವಾಲಯದಲ್ಲಿ 2015 ನವೆಂಬರ್ 10 ರ ಟಿಪ್ಪು ಜಯಂತಿಯಂದು ಹತ್ಯೆಗೀಡಾದ ವಿಶ್ವಹಿಂದು ಪರಿಷತ್‍ನ ಮುಖಂಡ ದೇವಪ್ಪಂಡ ಕುಟ್ಟಪ್ಪ ಅವರ ಆತ್ಮಕ್ಕೆ ಶಾಂತಿಗಾಗಿ ಪ್ರಾರ್ಥಿಸಿ ಪೂಜೆ ನಡೆಯಲಿದೆ ಎಂದು ಜಿಲ್ಲಾ ಸಂಚಾಲಕ ಕೆ.ಎಸ್. ಚೇತನ್ ತಿಳಿಸಿದ್ದಾರೆ.

ಮಾದಾಪುರ ಶ್ರೀ ಮಹಾಗಣಪತಿ ದೇವಾಲಯದಲ್ಲಿ ಬೆಳಿಗ್ಗೆ 9 ಗಂಟೆಗೆ ಹುತಾತ್ಮ ಡಿ.ಎಸ್. ಕುಟ್ಟಪ್ಪ ಸಂಸ್ಮರಣೆಯೊಂದಿಗೆ ಶಾಂತಿ ಪೂಜೆ ಏರ್ಪಡಿಸಲಾಗಿದೆ ಎಂದು ಹುತಾತ್ಮರ ಕುಟುಂಬಸ್ಥರು ತಿಳಿಸಿದ್ದಾರೆ.

ಹಿಂದು ಸಂಘಟನೆ ವತಿಯಿಂದ ದಿ. ದೇವಪಂಡ ಕುಟ್ಟಪ್ಪ ಅವರ ಪುಣ್ಯ ತಿಥಿ ಹಾಗೂ ಶ್ರದ್ಧಾಂಜಲಿ ಕಾರ್ಯಕ್ರಮವು ಬೆಳಿಗ್ಗೆ 10.30 ಗಂಟೆಗೆ ಸಿದ್ದಾಪುರ ಅಯ್ಯಪ್ಪ ದೇವಸ್ಥಾನದಲ್ಲಿ ನಡೆಯಲಿದೆ.