ಶ್ರೀಮಂಗಲ, ನ. 9: ತಾ.10 ರಂದು (ಇಂದು) ಗೋಣಿಕೊಪ್ಪದ ಅಖಿಲ ಅಮ್ಮಕೊಡವ ಸಮಾಜದ ಕಟ್ಟಡದಲ್ಲಿ ಆಯೋಜಿಸಿದ್ದ, ಪೊನ್ನಂಪೇಟೆಯ ಅಮ್ಮ ಕೊಡವ ಕಾವೇರಿ ಮಹಿಳಾ ಸಂಘದ ಮಹಾಸಭೆ ಮತ್ತು ಕಾವೇರಿ ಸಂಕ್ರಮಣ ಪ್ರಯುಕ್ತದ ಕಾರ್ಯಕ್ರಮವನ್ನು ತಾ.25ಕ್ಕೆ ಮುಂದೂಡಲಾಗಿದೆ. ತಾ.25ರಂದು ಈ ಕಾರ್ಯಕ್ರಮವು ಸಂಘದ ಅಧ್ಯಕ್ಷೆ ಅಮ್ಮತ್ತಿರ ರೇವತಿ ಪರಮೇಶ್ವರ ಅವರ ಅದ್ಯಕ್ಷತೆಯಲ್ಲಿ ಪೂರ್ವಾಹ್ನ 9.30ಕ್ಕೆ ಗೋಣಿಕೊಪ್ಪ ಅಖಿಲ ಅಮ್ಮಕೊಡವ ಸಮಾಜ ಕಟ್ಟಡದಲ್ಲಿ ನಡೆಯಲಿದೆ. ಮುಖ್ಯ ಅತಿಥಿಯಾಗಿ ಪುತ್ತಾಮನೆ ರೇವತಿ ರಾಧಾಕೃಷ್ಣ ಉಪಸ್ಥಿತರಿರುವರು ಎಂದು ಸಂಘದ ಕಾರ್ಯದರ್ಶಿ ಅಶ್ವಿನಿನಂದಾ ತಿಳಿಸಿದ್ದಾರೆ.