ಮಡಿಕೇರಿ, ನ. 9: ಟಿಪ್ಪು ಜಯಂತಿ ಆಚರಣೆ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಈ ಬಾರಿ ಜಿಲ್ಲಾಡಳಿತ ಕಾರ್ಯಕ್ರಮಕ್ಕೆ ಎರಡು ದಿನಗಳಿಗೆ ಮುನ್ನವೇ ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧ ಮಾಡಿ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ನಿನ್ನೆ ಮಧ್ಯ ರಾತ್ರಿಯಿಂದ ಅಬಕಾರಿ ಇಲಾಖೆಯವರು ಎಲ್ಲ ಬಾರ್, ಮದ್ಯದಂಗಡಿಗಳಿಗೆ ಬೀಗ ಜಡಿದು ಮುದ್ರೆ ಒತ್ತಿದ್ದಾರೆ. ಆದರೆ ಗಡಿಬಿಡಿಯಲ್ಲಿ ಚಿಕ್ಕಪೇಟೆ ಬಳಿ ಇರುವ ಮದ್ಯದಂಗಡಿಯೊಂದಕ್ಕೆ ಬೀಗ ಜಡಿಯುವ ಬದಲಿಗೆ ಪಕ್ಕದಲ್ಲಿ ಇದ್ದ ಬಟ್ಟೆ ಅಂಗಡಿ ಬೀಗಕ್ಕೆ ಮುದ್ರೆ ಒತ್ತಿ ತೆರಳಿದ್ದಾರೆ. ಶುಭ ಶುಕ್ರವಾರವಾದ ಇಂದು ಬೆಳಿಗ್ಗೆ ಬಟ್ಟೆ ಅಂಗಡಿಯವರು ಅಂಗಡಿ ತೆರೆಯಲು ಬಂದಾಗ ಅಬಕಾರಿ ಇಲಾಖೆಯ ಬೀಗ ಸ್ವಾಗತ ಮಾಡಿದೆ.

ಬೆಳಿಗ್ಗೆ ಬಂದವರಿಗೆ ಅಬಕಾರಿ ಇಲಾಖೆಯ ಈ ಅವಾಂತರ ನಗುವಿನ ವಾತಾವರಣ ಸೃಷ್ಟಿಸಿತು. ಮದ್ಯದಂಗಡಿಗಳಿಗೆ ಇನ್ನೂ ಕೂಡ ಮುದ್ರೆ ಹಾಕಿಲ್ಲ.

-ಟಿ.ಜಿ. ಸತೀಶ್