ಸೋಮವಾರಪೇಟೆ, ನ. 10: ಕರ್ನಾಟಕ ಬಾಲಭವನ ಸೊಸೈಟಿ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಇಲ್ಲಿನ ಸ್ತ್ರೀ ಶಕ್ತಿ ಭವನದಲ್ಲಿ ನಡೆದ ಕಲಾಶ್ರೀ ಆಯ್ಕೆ ಶಿಬಿರದಲ್ಲಿ, ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಸೃಜನಾತ್ಮಕ ಪ್ರದರ್ಶನ ಕಲೆಯಲ್ಲಿ ಕೂಡಿಗೆಯ ಅಂಜಲಿ ವಿದ್ಯಾನಿಕೇತನ ಶಾಲೆಯ ಕೆ.ಎನ್. ನಮಿತಾ (ಪ್ರ) ಸೋಮವಾರಪೇಟೆ ಓಎಲ್‍ವಿ ಶಾಲೆಯ ವಿದ್ಯಾರ್ಥಿನಿ ಡಿ.ಕೆ. ದಶಮಿ (ದ್ವಿ), ವಿಜ್ಞಾನದಲ್ಲಿ ನೂತನ ಅವಿಷ್ಕಾರ ಸ್ಪರ್ಧೆಯಲ್ಲಿ ಓಎಲ್‍ವಿ ಶಾಲೆಯ ಸಿ.ಎಸ್. ಹರ್ಷಿತ್‍ರಾಮ್ ಮತ್ತು ಎನ್.ಎ. ವಿಖಿತ್ ಪ್ರಥಮ ಹಾಗೂ ದ್ವಿತೀಯ ಸ್ಥಾನಗಳಿಸಿದ್ದಾರೆ.

ಸೃಜನಾತ್ಮಕ ಬರವಣಿಗೆಯಲ್ಲಿ ಸಂತ ಜೋಸೆಫರ ಪ್ರೌಢಶಾಲೆಯ ಜಿ. ದಿಶಾಂಕ್ (ಪ್ರ), ಸೋಮವಾರಪೇಟೆ ವಿಶ್ವ ಮಾನವ ಕುವೆಂಪು ಶಾಲೆಯ ಹೆಚ್.ಪಿ. ಲಾಲಿತ್ (ದ್ವಿ) ಸ್ಥಾನಗಳಿಸಿದ್ದಾರೆ.

ಸೃಜನಾತ್ಮಕ ಕಲೆ ಸ್ಪರ್ಧೆಯಲ್ಲಿ ವಿಶ್ವಮಾನವ ಕುವೆಂಪು ಶಾಲೆಯ ಎ.ಇ. ಅನನ್ಯ (ಪ್ರ) ಅದೇ ಶಾಲೆಯ ಸೋನಿಕ ಟಿ.ಎಸ್. ದ್ವಿತೀಯ ಸ್ಥಾನ ಗಳಿಸಿದ್ದಾರೆ.