ಕೂಡಿಗೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೂಡಿಗೆ ವಲಯದಲ್ಲಿ ಪ್ರಗತಿನಿಧಿ ಪಡೆದು ಸೋಲಾರ್ ಅಳವಡಿಸಿಕೊಂಡಿರುವ ಪಾಲುದಾರ ಸದಸ್ಯರುಗಳಿಗೆ ಅನುದಾನ ವಿತರಣೆ ಕಾರ್ಯಕ್ರಮವನ್ನು ಹೆಗ್ಗಡಹಳ್ಳಿ ಒಕ್ಕೂಟದ ಅಧ್ಯಕ್ಷೆ ಮಂದಾಕಿನಿ ಉದ್ಘಾಟಿಸಿದರು.

ಧರ್ಮಸ್ಥಳ ಕ್ಷೇತ್ರದಿಂದ ಮಂಜೂರುಗೊಂಡಿರುವ ಅನುದಾನವನ್ನು ಕೂಡಿಗೆ ವಲಯ ಮೇಲ್ವಿಚಾರಕ ರವಿಪ್ರಸಾದ್ ಆಲಾಜೆ ವಿತರಿಸಿ ಮಾತನಾಡಿ, ಸದಸ್ಯರ ಮನೆಗಳಲ್ಲಿ ಪ್ರಕೃತಿದತ್ತವಾದ ಸೂರ್ಯನ ಶಕ್ತಿಯನ್ನು ಉಪಯೋಗಿಸಿಕೊಂಡು ಶಾಶ್ವತವಾಗಿ ಬೆಳಕು ಪಡೆಯಲು ಸೋಲಾರ್ ಸಹಕಾರಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸೋಲಾರ್ ಅಳವಡಿಕೆ ಮಾಡಿರುವ ಹದಿನೆಂಟು ಕುಟುಂಬದ ಸದಸ್ಯರುಗಳು ಉಪಸ್ಥಿತರಿದ್ದರು.ಅರಸಿನಗುಪ್ಪೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೆಬ್ಬಾಲೆ ವಲಯ ಅರಸಿನಗುಪ್ಪೆ ಕಾರ್ಯಕ್ಷೇತ್ರದ ಸುಬ್ರಹ್ಮಣ್ಯ ದೇವಸ್ಥಾನದ ವಠಾರದ ಸುತ್ತ ಬೆಳೆದಿರುವ ಕಾಡು ಕಡಿದು ಸ್ವಚ್ಛತೆ ಮಾಡಲಾಯಿತು.

ಈ ಸಂದರ್ಭ ಜ್ಞಾನವಿಕಾಸ ಸಮನ್ವಯ ಅಧಿಕಾರಿ ಪದ್ಮ ಮಾತನಾಡಿ, ಪೂಜ್ಯರ ಆಶಯದಂತೆ ಧಾರ್ಮಿಕ ಕೇಂದ್ರಗಳ ಸ್ವಚ್ಛತೆ ಕಾಪಾಡಿಕೊಂಡು ಬರುವದು ನಮ್ಮ ಜವಾಬ್ದಾರಿ ಎಂದು ಹೇಳಿದರು. ಕೊಡಗಿನ ಕಾವೇರಿ ಜ್ಞಾನವಿಕಾಸ ಕೇಂದ್ರದಲ್ಲಿ ನಡೆಯುವ ಕಸದಿಂದ ರಸ ಮತ್ತು ಪ್ಲಾಸ್ಟಿಕ್ ನಿಷೇಧ ಎರಡನೇ ತಿಂಗಳ ಕಾರ್ಯಕ್ರಮವನ್ನು ಉದ್ಘಾಟಿಸಿದ ತೊರೆನೂರು ಗ್ರಾಮ ಪಂಚಾಯಿತಿ ಸದಸ್ಯ ರವಿಕುಮಾರ್ ಮಾತನಾಡಿ, ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆಯಿಂದ ಕೇವಲ ಪ್ರಗತಿನಿಧಿ ಸಾಲವನ್ನು ನೀಡದೆ ಸಾರ್ವಜನಿಕರಿಗೆ ಪ್ರಯೋಜನ ಆಗುವಂಥ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ದೇವಸ್ಥಾನ ಅಭಿವೃದ್ಧಿಗೆ ಸಮುದಾಯ ಭವನ ನಿರ್ಮಾಣಕ್ಕೆ, ರುದ್ರಭೂಮಿ ಅಭಿವೃದ್ಧಿಗೆ ಅನುದಾನಗಳನ್ನು ನೀಡುತ್ತಿದ್ದು, ಇಂಥಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವದು ಒಳ್ಳೆಯ ಅವಕಾಶ ಎಂದರು. ಜ್ಞಾನವಿಕಾಸ ಸಂಯೋಜಕಿ ವಿಮಲಾ, ಒಕ್ಕೂಟದ ಕಾರ್ಯದರ್ಶಿ ಲಿಂಗರಾಜ್, ಉಪಾಧ್ಯಕ್ಷೆ ಪಾರ್ವತಿ, ಸೇವಾಪ್ರತಿನಿಧಿ ಮಂಜುಳಾ, ವಲಯದ ಮೇಲ್ವಿಚಾರಕ ವಿನೋದ್‍ಕುಮಾರ್, ಜ್ಞಾನವಿಕಾಸ ಕೇಂದ್ರದ ಪದಾಧಿಕಾರಿಗಳು ಇದ್ದರು.ಕೂಡಿಗೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೋಮವಾರಪೇಟೆ ತಾಲೂಕಿನಾದ್ಯಂತ ಗ್ರಾಮ ಗ್ರಾಮಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಖಾಯಂ ಕಾರ್ಯಕರ್ತರಿಗೆ ಜರ್ಕಿನ್‍ಗಳನ್ನು ವಿತರಿಸಲಾಯಿತು.

ಕಾರ್ಯಕರ್ತರು ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಮಳೆ ಹಾಗೂ ಚಳಿಯಿಂದ ರಕ್ಷಣೆ ಪಡೆದುಕೊಂಡು ಗುಣಮಟ್ಟದ ಸೇವೆಯನ್ನು ಪಾಲುದಾರ ಕುಟುಂಬದ ಸದಸ್ಯರಿಗೆ ನೀಡಬೇಕೆಂಬ ಆಶಯದೊಂದಿಗೆ ವೀರೇಂದ್ರ ಹೆಗ್ಗಡೆ ಜರ್ಕಿನ್ ನೀಡಿದ್ದು, ಜಿಲ್ಲಾ ನಿರ್ದೇಶಕ ಯೋಗೀಶ್ ವಿತರಿಸಿದರು.

ತಾಲೂಕು ಯೋಜನಾಧಿಕಾರಿ ಪ್ರಕಾಶ್ ವೈ ಹಾಗೂ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಇದ್ದರು. ಮೇಲ್ವಿಚಾರಕ ರಮೇಶ್, ಕೂಡಿಗೆ ವಲಯ ಮೇಲ್ವಿಚಾರಕ ರವಿಪ್ರಸಾದ್ ಆಲಾಜೆ ಕಾರ್ಯಕ್ರಮವನ್ನು ನಿರ್ವಹಿಸಿದರು.

ಹೆಬ್ಬಾಲೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೆಬ್ಬಾಲೆ ವಲಯದ ಫಲಾನುಭವಿಗಳಿಗೆ ಗ್ರಾಮ ಪಂಚಾಯಿತಿ ಸದಸ್ಯೆ ಸರೋಜಮ್ಮ, ತಾಲೂಕು ಆಂತರಿಕ ಲೆಕ್ಕಪರಿಶೋಧಕಿ ಭಾವನಾ ರವಿಪ್ರಸಾದ್ ಗ್ರೀನ್ವೇ ಒಲೆಗಳನ್ನು ವಿತರಣೆ ಮಾಡಿದರು. ಫಲಾನುಭವಿಗಳಿಗೆ ಯೋಜನೆಯಿಂದ ಪ್ರಗತಿನಿಧಿ ಸಾಲದ ಮೂಲಕ ಸೋಲಾರ್ ಲೈಟ್, ಸೋಲಾರ್ ವಾಟರ್ ಹೀಟರ್, ಗ್ರೀನ್ವೇ ಒಲೆ, ಜೀವನ ಮಧುರ ವಿಮೆ, ಅಟಲ್ ಪಿಂಚಣಿ ಯೋಜನೆ ವಿಮೆಗಳನ್ನು ನೀಡಲಾಗುತ್ತಿದ್ದು, ಇವುಗಳನ್ನು ಸದುಪಯೋಗ ಮಾಡಿಕೊಳ್ಳಿ ಎಂದು ಹೇಳಿದರು.

ವಲಯದ ಮೇಲ್ವಿಚಾರಕ ವಿನೋದ್, ಸೇವಾಪ್ರತಿನಿಧಿ ಪ್ರಮೀಳಾ, ನಗದು ಸಂಗ್ರಾಹಕರಾದ ಭರತ್, ವರ್ಷಿಣಿ ಸುವಿಧ, ಸಹಾಯಕಿಯರಾದ ಸೌಮ್ಯ, ಅಶ್ವಿನಿ ಹಾಗೂ ಸಂಘದ ಸದಸ್ಯರು ಇದ್ದರು.