ಮಡಿಕೇರಿ, ನ. 10: ಕೊಡಗು ಶಿಶು ಕಲ್ಯಾಣ ಸಂಸ್ಥೆ, ಲಯನ್ಸ್ ಹಾಗೂ ರೋಟರಿ ಮಿಸ್ಟಿ ಹಿಲ್ಸ್ ಆಶ್ರಯದಲ್ಲಿ ಕಳೆದ ಸೆಪ್ಟೆಂಬರ್ 16 ರಂದು ನಡೆಸಿದ ಮಕ್ಕಳ ವರ್ಣಚಿತ್ರ ಸ್ಪರ್ಧೆ ವಿಜೇತರಿಗೆ ತಾ. 14 ರಂದು ಬಹುಮಾನ ನೀಡಲಾಗುತ್ತದೆ.

ಶಾಲಾ ಮಕ್ಕಳಿಗೆ ಏರ್ಪಡಿಸಿದ್ದ ರಾಷ್ಟ್ರೀಯ ವರ್ಣಚಿತ್ರ ಸ್ಪರ್ಧೆಯಲ್ಲಿ ವಿಜೇತರಾದವರ ವಿವರ ಈ ಕೆಳಗಿನಂತಿದೆ. ಹಸಿರು ಗುಂಪಿನಲ್ಲಿ ಬಿ. ಮನಸ್ವಿ ಪ್ರಥಮ, ಜಿ. ಲೇಖನಾಶ್ರೀ ದ್ವಿತೀಯ ಹಾಗೂ ಬಿ.ಎಸ್. ನಿಶಾಂತ್ ತೃತೀಯ ಸ್ಥಾನ ಪಡೆದಿದ್ದಾರೆ.

ಸಮಾಧಾನಕರ ಬಹುಮಾನವನ್ನು ಆರ್. ಪ್ರಣಮ್ಯ ಆಚಾರ್ಯ, ಅದಿತ್ ಅನೀವ್, ಕೆ.ಎನ್. ಜೀವಿಕಾ, ಎಂ.ಎನ್. ಶ್ರೇಯ, ಆರುಷ್ ಎ. ವಂದಕುದರಿ, ಧ್ರುವ ನಂಜಪ್ಪ, ಎಸ್. ತಾನ್ಯ, ಮಹಮ್ಮದ್ ಸುಫಿಯಾನ್, ಟಿ.ಜೆ. ಪ್ರಣವ್ ಆಚಾರ್ಯ, ಹುರೇನ್ ಖಾನ್, ಸಿ.ಡಿ. ಗಂಗಮ್ಮ ಹಾಗೂ ಕೆ.ಹೆಚ್. ಮಧುಶ್ರೀ ಪಡೆದುಕೊಂಡರು.

ಬಿಳಿ ಗುಂಪಿನಲ್ಲಿ ಪಿ.ಆರ್. ಆರ್ಯ, ಸಾತ್ವಿಕ್ ಆರ್. ಅನ್ವೇಕರ್, ಎ.ವಿ. ಸಿಂಚನ ಪಡೆದಿದ್ದಾರೆ. ಸಮಾಧಾನಕರ ಬಹುಮಾನವನ್ನು ಸಿ. ಹರ್ಷಿಣಿ ಪ್ರದೀಪ್, ಸಿ.ಟಿ. ಶ್ರೇಯಸ್ಸ್, ಎಂ.ಎಂ. ಮಾನ್ಯ ದೇಚಮ್ಮ, ಪಿ.ಎನ್. ಲಕ್ಷ್ಯ, ಕೆ.ಕೆ. ಹವ್ಯಾಸ್, ಕೆ.ಜಿ. ಹೊನಲು, ಪಿ.ಎನ್. ಮೋಕ್ಷ್, ಕೆ.ಎ. ರುಚಿ, ಎನ್.ಆರ್. ನೇಹಾ, ಮೈಕಲ್ ರೊನಾಲ್ಡ್, ಶ್ರೀಜಿತ್ ಪೂಜಾರಿ ಹಾಗೂ ಕೆ.ಪಿ. ವರ್ಷ ಈ ಎಲ್ಲಾ ವಿದ್ಯಾರ್ಥಿಗಳು ಮಕ್ಕಳ ದಿನಾಚರಣೆ ದಿನ ಬಾಲಭವನದಲ್ಲಿ ಜರುಗಲಿರುವ ಸಮಾರಂಭದಲ್ಲಿ ಬಹುಮಾನ ಪಡೆಯಲು ತಿಳಿಸಲಾಗಿದೆ.