ಸೋಮವಾರಪೇಟೆ, ನ. 10: ರಾಜ್ಯದ 2 ಲೋಕಸಭೆ ಹಾಗೂ 2 ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಗಳು ಜಯಗಳಿಸಿದ ಹಿನ್ನೆಲೆ ಎರಡೂ ಪಕ್ಷಗಳ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.

ಇಲ್ಲಿನ ಖಾಸಗಿ ಬಸ್ ನಿಲ್ದಾಣ ಪುಟ್ಟಪ್ಪ ವೃತ್ತದಲ್ಲಿ ಪಟಾಕಿ ಸಿಡಿಸಿದ ಕಾರ್ಯಕರ್ತರು ಪಕ್ಷದ ಮುಖಂಡರಿಗೆ ಜಯಘೋಷ ಹಾಕಿದರು. ಈ ಸಂದರ್ಭ ಕಾಂಗ್ರೆಸ್ ಪ್ರಮುಖರಾದ ಬಿ.ಬಿ. ಸತೀಶ್, ವಿ.ಎ. ಲಾರೆನ್ಸ್, ಕೆ.ಎ. ಆದಂ, ಬಿ.ಈ. ಜಯೇಂದ್ರ, ಹೆಚ್.ಸಿ. ನಾಗೇಶ್, ಉದಯಶಂಕರ್, ಜೆಡಿಎಸ್ ಮುಖಂಡರಾದ ವೀರರಾಜು, ಕೃಷ್ಣಪ್ಪ, ನಾಗರಾಜು ಸೇರಿದಂತೆ ಇತರರು ಉಪಸ್ಥಿತರಿದ್ದರು.