ಮಡಿಕೇರಿ, ನ. 14: ಮಡಿಕೇರಿ ತಾಲೂಕಿನ ಸರ್ಕಾರಿ, ಅನುದಾನಿತ, ಮತ್ತು ಸ್ಥಳೀಯ ಸಂಸ್ಥೆಯ ಶಾಲೆಗಳಲ್ಲಿನ 1 ರಿಂದ 10ನೇ ತರಗತಿಗೆ ದಾಖಲಾಗಿರುವ ವಿಶೇಷ ಅಗತ್ಯತೆವುಳ್ಳ ಮಕ್ಕಳಿಗೆ 2018-19ನೇ ಸಾಲಿನ ಸಮನ್ವಯ ಶಿಕ್ಷಣ ಮದ್ಯವರ್ತನೆಯಡಿಯಲ್ಲಿ ವೈದ್ಯಕೀಯ ಮೌಲ್ಯಾಂಕನ ಶಿಬಿರವನ್ನು ತಾ. 17 ರಂದು ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ವಿಶೇಷ ಅಗತ್ಯತೆಯುಳ್ಳ ಮಕ್ಕಳ ಪೋಷಕರು, ಶಿಕ್ಷಕರು ವಿದ್ಯಾರ್ಥಿಯ ಎರಡು ಭಾವಚಿತ್ರದೊಂದಿಗೆ ಶಿಬಿರದಲ್ಲಿ ಹಾಜರಾಗಿ, ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳುವಂತೆ ಮಡಿಕೇರಿ ತಾಲೂಕು ಸಮಗ್ರ ಶಿಕ್ಷಣ ಅಭಿಯಾನ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಕೋರಿದ್ದಾರೆ.