ಕೂಡಿಗೆ, ನ. 14: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೆಬ್ಬಾಲೆ ಮತ್ತು ಹಳೆಗೋಟೆ ಕಾರ್ಯಕ್ಷೇತ್ರದಲ್ಲಿ ಹಾಲಮ್ಮ ತಾಯಿ ಮತ್ತು ರೇಣುಕಾದೇವಿ ಸರ್ವ ಸೇವಾ ಸಂಘದ ಉದ್ಘಾಟನೆ ಮಾಡಲಾಯಿತು.

ಪ್ರತಿನಿಧಿಗಳಾಗಿ ರತ್ನಮ್ಮ, ಯಶೋದಾ, ಜಯಮ್ಮ, ಹಾಲಮ್ಮ, ಯಲ್ಲಮ್ಮ, ನಾಗಮ್ಮ ಅವರನ್ನು ಆಯ್ಕೆ ಮಾಡಲಾಗಿದೆ. ಈ ಸಂದರ್ಭ ಹೆಬ್ಬಾಲೆ ಗ್ರಾಮ ಪಂಚಾಯಿತಿ ಸದಸ್ಯೆ ಪ್ರಮೀಳಾ ಮಾತನಾಡಿ, ಧರ್ಮಸ್ಥಳ ಯೋಜನೆಯಿಂದ ಕೇವಲ 18 ರಿಂದ 60 ವರ್ಷದ ಪ್ರಾಯದವರಿಗೆ ಮಾತ್ರ ಸಂಘಗಳನ್ನು ಮಾಡದೇ ಇಂಥ ವಯಸ್ಕರ ಸಂಘಗಳನ್ನು ಮಾಡುವ ಮೂಲಕ ವಯಸ್ಕರಿಗೆ ವ್ಯವಹಾರದ ಜ್ಞಾನವನ್ನು ಬೆಳೆಸುವ ಕೆಲಸ ಮಾಡುತ್ತಿರುವದು ಉತ್ತಮವಾದ ಕಾರ್ಯವಾಗಿದ್ದು, ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು. ಮೇಲ್ವಿಚಾರಕ ವಿನೋದ್‍ಕುಮಾರ್ ಮಾತನಾಡಿ, ಸರ್ವ ಸೇವಾ ಸಂಘದ ನಿಯಮ, ವ್ಯವಹಾರ ಯಾವ ರೀತಿ ಮಾಡಬೇಕು, ವಾರದ ಸಭೆಗಳನ್ನು ಹೇಗೆ ಮಾಡಬೇಕು ಎಂಬದರ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭ ಹೆಬ್ಬಾಲೆ ಪಂಚಾಯಿತಿ ಸದಸ್ಯೆ ಸರೋಜಮ್ಮ, ಹೆಬ್ಬಾಲೆ ಒಕ್ಕೂಟದ ಕಾರ್ಯದರ್ಶಿ ಗೀತಾ, ಸೇವಾಪ್ರತಿನಿಧಿ ಪ್ರಮೀಳಾ, ಕಲ್ಪನಾ ಇದ್ದರು.