ಶ್ರೀಮಂಗಲ, ನ. 13: ಬಿರುನಾಣಿಯ ಮರೆನಾಡು ನಾಡ್‍ಮಂದ್‍ನಲ್ಲಿ ಪುತ್ತರಿ ಪ್ರಯುಕ್ತ ಮಂದ್ ನಮ್ಮೆ ಆಚರಣೆಯನ್ನು ಮರೆನಾಡು ಕೊಡವ ಸಮಾಜ ಹಾಗೂ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಸಂಯುಕ್ತ ಆಶ್ರಯದಲ್ಲಿ ತಾ. 27 ರಂದು ನಡೆಸಲು ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಬಿರುನಾಣಿಯ ಮಹಿಳಾ ಸಮಾಜ ಸಭಾಂಗಣದಲ್ಲಿ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಮರೆನಾಡು ಕೊಡವ ಸಮಾಜದ ಪದಾಧಿಕಾರಿಗಳು ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.
ಬಿರುನಾಣಿ ಗ್ರಾ.ಪಂ ವ್ಯಾಪ್ತಿಯ ಗ್ರಾಮಗಳಾದ ಬಿರುನಾಣಿ, ತೆರಾಲು, ಪೊರಾಡು, ಬಾಡಗರಕೇರಿ, ಪರಕಟಗೇರಿಯ ಜನರು ಸಂಪ್ರದಾಯಿಕವಾಗಿ ಪುತ್ತರಿ ಕೋಲ್ ಮಂದ್ ಆಚರಿಸುತ್ತಾ ಬರುತ್ತಿದ್ದು, ಈ ವರ್ಷವೂ ಪದ್ಧತಿಯಂತೆ ಆಚರಿಸಲು ನಿರ್ಧರಿಸಲಾಯಿತು. ಮಂದ್ ನಮ್ಮೆ ಪ್ರಯುಕ್ತ ಪೂರ್ವಾಹ್ನ 10 ಗಂಟೆಗೆ ವಿವಿಧ ಕ್ರೀಡಾ ಕೂಟಗಳನ್ನು ಆಯೋಜಿಸಲಾಗಿದ್ದು ಅಪರಾಹ್ನ ಭೋಜನದ ನಂತರ ವೇದಿಕೆ ಕಾರ್ಯಕ್ರಮ, ಪುತ್ತರಿ ಕೋಲ್ ಮಂದ್ ಕಾರ್ಯಕ್ರಮ, ಸಾಂಸೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಸಭೆಯಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಪೆಮ್ಮಂಡ ಪೊನ್ನಪ್ಪ, ಸದಸ್ಯರಾದ ಚಂಗುಲಂಡ ಸೂರಜ್, ಅಜ್ಜಮಾಡ ಕುಶಾಲಪ್ಪ, ಮರೆನಾಡು ಕೊಡವ ಸಮಾಜದ ಅಧ್ಯಕ್ಷ ಮಲ್ಲೇಂಗಡ ಪೆಮ್ಮಯ್ಯ, ಕಾರ್ಯದರ್ಶಿ ಮಲ್ಲೇಂಗಡ ಧನಂಜಯ, ಪದಾಧಿಕಾರಿಗಳಾದ ಬೊಳ್ಳೆರ ಪೊನ್ನಪ್ಪ, ಬಿರುನಾಣಿ ಕೊಡವ ಸಮಾಜದ ಅಧ್ಯಕ್ಷ ಬುಟ್ಟಿಯಂಡ ತಂಬಿ ನಾಣಯ್ಯ, ಪ್ರಮುಖರಾದ ಅಣ್ಣಳಮಾಡ ಲಾಲ ಅಪ್ಪಣ್ಣ, ಬಲ್ಯಮೀದೇರಿರ ಸುರೇಶ್, ಕಾಯಪಂಡ ಸುನೀಲ್, ಬಲ್ಯಮೀದೇರಿರ ಚೋಂದಮ್ಮ, ಕರ್ತಮಾಡ ಮಿಲನ್, ಬುಟ್ಟಿಯಂಡ ಸುನೀತಾ, ಚೋನೀರ ಮಧು, ಬಲ್ಯಮೀದೇರಿರ ನಾಣಯ್ಯ ಹಾಗೂ ಕೊಡವ ಸಮಾಜದ ನಿರ್ದೇಶಕರು ಪಾಲ್ಗೊಂಡಿದ್ದರು.