ಮಡಿಕೇರಿ, ನ. 14: ಸಮರ್ಥ ಕನ್ನಡಿಗರು ಸಂಸ್ಥೆಯ ಕೊಡಗು ಘಟಕದ ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕೊಡಗು ಜಿಲ್ಲಾ ಶಾಲಾ ಮಕ್ಕಳಿಗೆ ಹಾಗೂ ಗೃಹಿಣಿಯರಿಗೆ ಪ್ರಥಮ ಬಾರಿಗೆ ತಾ. 21 ರಂದು ಮಡಿಕೇರಿಯ ಓಂಕಾರ ಸದನದಲ್ಲಿ ವಿವಿಧ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಕೊಡಗಿಗಾಗಿ ಮಿಡಿದ ಮಾನವೀಯ ಮನಸ್ಸುಗಳಿಗೆ “ಸಮರ್ಥ ಕನ್ನಡಿಗ’’ ಗೌರವಾರ್ಪಣೆ ಹಮ್ಮಿಕೊಳ್ಳಲಾಗಿದೆ.
ಸ್ಪರ್ಧೆಯ ವಿವರ - 1 ರಿಂದ 4ನೇ ತರಗತಿ ಮಕ್ಕಳಿಗೆ ಸಮೂಹ ಗಾಯನ ಸ್ಪರ್ಧೆ, 5 ರಿಂದ 7ನೇ ತರಗತಿ ಮಕ್ಕಳಿಗೆ ಸಮೂಹ ನಾಡ ಭಕ್ತಿ ಗೀತೆ ಸ್ಪರ್ಧೆ, 8 ರಿಂದ 10ನೇ ತರಗತಿ ಮಕ್ಕಳಿಗೆ ಆಶುಭಾಷಣ ಸ್ಪರ್ಧೆ, ಪ್ರೌಢಶಾಲೆಯ (8 ರಿಂದ 10ನೇ) ಮಕ್ಕಳಿಗೆ ಚರ್ಚಾ ಸ್ಪರ್ಧೆ, ಪಿ.ಯು. ಮತ್ತು ಪದವಿ ಮಕ್ಕಳಿಗೆ ಕವನವಾಚನ (ಕವಿಗೋಷ್ಠಿ), ಗೃಹಿಣಿಯರಿಗೆ ಸಮೂಹಗಾನ ಹಾಗೂ ನೃತ್ಯ ಸ್ಪರ್ಧೆ ಆಯೋಜಿಸಲಾಗಿದೆ.
ಪ್ರತಿ ವಿಭಾಗಕ್ಕೂ ಪ್ರಥಮ, ದ್ವಿತೀಯ, ತೃತೀಯ ಹಾಗೂ ಸಮಾಧಾನಕರ ಬಹುಮಾನಗಳಿವೆ. ವಿಜೇತರಿಗೆ ಅಭಿನಂದನೆ ಪತ್ರ ಹಾಗೂ ಕನ್ನಡ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಲಾಗುವದು.
ಒಂದು ಗುಂಪಿನಲ್ಲಿ ಕನಿಷ್ಟ ನಾಲ್ಕು ಜನ, ಗರಿಷ್ಠ ಆರು ಜನ ಇರಬೇಕು. ಸಂಗೀತದ ಪರಿಕರಗಳನ್ನು ಬಳಸಬಹುದು, ಸಮೂಹ ಗೀತೆಗಳ ಅವಧಿ 3+1 ನಿಮಿಷಗಳು, ಒಂದು ಶಾಲೆಯಿಂದ ಎಷ್ಟು ತಂಡಗಳಾದರು ಭಾಗವಹಿಸಬಹುದು ಆದರೆ ಒಬ್ಬರು ಒಂದು ತಂಡದಲ್ಲಿ ಮಾತ್ರ ಭಾಗವಹಿಸಬೇಕು.
ಹಾಡಿಗೆ ತಕ್ಕಂತೆ ವಸ್ತ್ರ ವಿನ್ಯಾಸ ಧರಿಸಿದ ತಂಡಕ್ಕೆ ವಿಶೇಷ ಅಂಕಗಳು ಇರುತ್ತವೆ. ಆಶುಭಾಷಣದ ಅವಧಿ 2+1 ನಿಮಿಷಗಳು. ವಾಚನ ಮಾಡುವ ಕವನಗಳನ್ನು ಕಡ್ಡಾಯವಾಗಿ ಈ ಕೆಳಗೆ ಸೂಚಿಸಿದ ನಂಬರ್‍ಗೆ ಮುಂಚಿತವಾಗಿ ಕಳುಹಿಸಬೇಕು. ವಾಚಿಸುವ ಕವನ ಸ್ವ ರಚಿತವಾಗಿ ಇರಬೇಕು. ಕನ್ನಡ ಹಾಡುಗಳನ್ನೇ ಬಳಸತಕ್ಕದ್ದು
ನೋಂದಾಯಿಸುವ ಕೊನೆಯ ದಿನಾಂಕ ತಾ. 16. ಸ್ಥಳದಲ್ಲಿ ನೋಂದಣಿ ಅವಕಾಶ ಇಲ್ಲ. ಸ್ಪರ್ಧೆಗಳು ಮಡಿಕೇರಿಯ ಓಂಕಾರ ಸದನದಲ್ಲಿ ತಾ. 21 ರಂದು ಆಯೋಜಿತವಾಗಿದೆ ಎಂದು ಸಂಘಟಕಿ ಸಮರ್ಥ ಕನ್ನಡಿಗ ಸಂಸ್ಥೆಯ ಕೊಡಗು ಜಿಲ್ಲಾ ಸಂಚಾಲಕಿ ಕೆ. ಜಯಲಕ್ಷ್ಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೋಂದಣಿಗೆ ಸಂಪರ್ಕ ಸಂಖ್ಯೆಗಳು - 966311970, 9740582276.