ಮಡಿಕೇರಿ, ನ.13 : ಪೋಷಣೆÉ ಹಾಗೂ ರಕ್ಷಣೆಯ ಅಗತ್ಯವಿರುವ ಸಂಕಷ್ಟದಲ್ಲಿರುವ ಮಕ್ಕಳಿಗೆ ಉಚಿತ ಮತ್ತು ತುರ್ತು ಸೇವೆ ನೀಡುವ ಚೈಲ್ಡ್ ಲೈನ್ ಸಂಸ್ಥೆಯ ವತಿಯಿಂದ ತಾ. 14 ರಿಂದ 21ರವರೆಗೆ ‘ಚೈಲ್ಡ್ ಲೈನ್ ಸೇ ದೋಸ್ತಿ’ ಸಪ್ತಾಹ ನಡೆಯಲಿದೆ.
Àುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೊಡಗು ಗ್ರಾಮೀಣಾಭಿವೃದ್ಧಿ ಸಂಸ್ಥೆ (ಕಾರ್ಡ್)ಯ ನಿರ್ದೇಶಕ ವಿ.ಎಸ್. ರಾಯ್ ಡೇವಿಡ್ ಅವರು, ಕೇಂದ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ, ರಾಜ್ಯ ಸರ್ಕಾರ, ಸರ್ಕಾರೇತರ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಚೈಲ್ಡ್ ಲೈನ್ (ಮಕ್ಕಳ ಸಹಾಯವಾಣಿ 1098) ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ ಎಂದರು. ದೇಶದ 28 ರಾಜ್ಯಗಳ 450 ನಗರ, 75 ರೈಲ್ವೆ ನಿಲ್ದಾಣಗಳಲ್ಲಿ 850 ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಪ್ರಕ್ರಿಯೆ ನಡೆಯುತ್ತಿದೆ.
ಕೊಡಗು ಜಿಲ್ಲೆಯಲ್ಲಿ ಕೊಡಗು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಹಭಾಗಿತ್ವದಲ್ಲಿ 2012ರ ಸೆಪ್ಟೆಂಬರ್‍ನಿಂದ ಚೈಲ್ಡ್ ಲೈನ್ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದ್ದು, ಇದುವರೆಗೆ 1180 ಪ್ರಕರಣಗಳನ್ನು ದಾಖಲಿಸಿ ಕೊಂಡು ಸರ್ಕಾರದ ಸಂಬಂಧಿಸಿದ ಇಲಾಖೆÀಗಳಿಗೆ ಸಂಪರ್ಕ ಕಲ್ಪಿಸಿದೆ. ಅಲ್ಲದೆ, ಸಹಾಯವಾಣಿಗೆ ಬಂದ ಬಾಲ್ಯ ವಿವಾಹ ಪ್ರಕರಣಗಳನ್ನು ಸಂಪೂರ್ಣವಾಗಿ ತಡೆಯಲಾಗಿದೆ. ಪೋಷಕರ ನಿರ್ಲಕ್ಷ್ಯ, ಭಿಕ್ಷಾಟನೆ, ಬಾಲ ಕಾರ್ಮಿಕ ವ್ಯವಸ್ಥೆಗೆ ಸಿಲುಕಿದ ಮಕ್ಕಳನ್ನು ಮರಳಿ ಶಾಲೆಗೆ ಸೇರಿಸಲಾಗಿದೆ. ಪೋಷಕರ ನಿರ್ಲಕ್ಷ್ಯಕ್ಕೆ ಒಳಗಾದ ನಿರ್ಗತಿಕ ಮತ್ತು ಅನಾಥ ಮಕ್ಕಳನ್ನು ಸರ್ಕಾರಿ ಬಾಲಕ, ಬಾಲಕಿಯರ ಬಾಲ ಮಂದಿರಕ್ಕೆ ಸೇರಿಸಲಾಗಿದ್ದು, ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಬಾಲಕಿಯರ ಪ್ರಕರಣಗಳನ್ನು ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಲಾಗಿದೆ ಎಂದು ವಿವರಿಸಿದರು.
ಸಂಕಷ್ಟದಲ್ಲಿರುವ ಮಕ್ಕಳ ಪೋಷಣೆ ಮತ್ತು ಸಂರಕ್ಷಣೆ ಎಲ್ಲಾ ಇಲಾಖೆಗಳು ಮತ್ತು ಸಾರ್ವಜನಿಕರ ಜವಾಬ್ದಾರಿಯಾಗಿದ್ದು, ಈ ಹಿನ್ನೆಲೆಯಲ್ಲಿ ಸಾರ್ವಜನಿಕರು, ವಿದ್ಯಾರ್ಥಿಗಳು, ಅಧಿಕಾರಿಗಳಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಚೈಲ್ಡ್ ಲೈನ್ ಸೇ ದೋಸ್ತಿ ಸಪ್ತಾಹವನ್ನು ಜಿಲ್ಲೆಯ ವಿವಿಧೆಡೆಗಳಲ್ಲಿ ಆಚರಿಸ ಲಾಗುತ್ತಿದೆ ಎಂದು ವಿ.ಎಸ್.ರಾಯ್ ಡೇವಿಡ್ ತಿಳಿಸಿದರು.
ಸಂಸ್ಥೆಯ ಜಿಲ್ಲಾ ಸಂಯೋಜಕ ನವೀನ್ ಕುಮಾರ್ ಮಾತನಾಡಿ, ನ.14 ರಂದು ವೀರಾಜಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಚೈಲ್ಡ್ ಲೈನ್ ಸೇ ದೋಸ್ತಿ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದ್ದು, ಅಭಿಯಾನ ಹಾಗೂ ರಕ್ಷಾ ಬಂಧನ ಕಾರ್ಯ ಕ್ರಮವನ್ನು ಕೂಡ ಆಯೋಜಿಸಲಾಗಿದೆ ಎಂದರು. ಜಿಲ್ಲೆಯ ವಿವಿಧೆಡೆÉಗಳಲ್ಲಿ ಕಂಡು ಬರುತ್ತಿರುವ ಭಿಕ್ಷಾಟನೆ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನ.15 ರಂದು ಸೋಮವಾರ ಪೇಟೆ ಸರ್ಕಾರಿ ಪದವಿ ಪೂರ್ವ ಕಾಲೆÉೀಜಿನಲ್ಲಿ ವಿದ್ಯಾರ್ಥಿ ಗಳೊಂದಿಗೆ ಸಂವಾದ ಮತ್ತು ಗೊಂಬೆಯಾಟ ನಡೆಯಲಿದೆ ಎಂದು ತಿಳಿಸಿದರು.
ನ.16 ರಂದು ಸಾಮಾಜಿಕ ಜಾಲತಾಣಗಳ ಸುರಕ್ಷತೆ ಹಾಗೂ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ನೆಲ್ಯಹುದಿಕೇರಿ ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಂದ ಮೌನ ಜಾಥ, ಬಳಿಕ ಸಭಾ ಕಾರ್ಯಕ್ರಮ ನಡೆಯಲಿದೆ. ದಕ್ಷಿಣ ಕೊಡಗಿನ ಶ್ರೀಮಂಗಲ ಕುಟ್ಟ ವ್ಯಾಪ್ತಿಯಲ್ಲಿ ಬಾಲ ಕಾರ್ಮಿಕ ಪದ್ಧತಿ ಜೀವಂತವಾಗಿರುವ ಹಿನ್ನೆಲೆಯಲ್ಲಿ ನ.17 ರಂದು ಟಿ.ಶೆಟ್ಟಿಗೇರಿ ಗ್ರಾಮದ ಕಾಫಿ ತೋಟಗಳು ಹಾಗೂ ಅಂಗಡಿಗಳಲ್ಲಿ ಬಾಲ ಕಾರ್ಮಿಕ ಪದ್ಧತಿ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ನವೀನ್ ಕುಮಾರ್ ತಿಳಿಸಿದರು.
ನ.18 ರಂದು ಬಾಲ್ಯ ವಿವಾಹ, ಲೈಂಗಿಕ ದೌರ್ಜನ್ಯ ಮತ್ತು ದೈಹಿಕ ದಂಡನೆ ಕುರಿತು ಸುಂಟಿಕೊಪ್ಪದಲ್ಲಿ ಜಾಗೃತಿ ಕಾರ್ಯಕ್ರಮ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಕುರಿತು ನ.19 ರಂದು ಕೂಡಿಗೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶ್ವೇತ ವರ್ಣದ ಆಂದೋಲನ ನಡೆಯಲಿದೆ. ನ.20 ರಂದು ವೀರಾಜಪೇಟೆ ತಾಲೂಕಿನ ದೇವರಪುರ ಅಮೃತವಾಣಿ ಶಾಲೆಯಲ್ಲಿ ವಿಶೇಷ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಹಾಗೂ ಆಟೋಟ ಸ್ಪರ್ಧೆ, ನ.21 ರಂದು ಸೋಮವಾರಪೆÉೀಟೆಯ ಜ್ಞಾನ ವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ಹಕ್ಕುಗಳು ಹಾಗೂ ಕಾಯ್ದೆಗಳ ಕುರಿತು ಪ್ರಬಂಧ ಸ್ಪರ್ಧೆ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.
1098 ಸಂಖ್ಯೆಗೆ ಕರೆ ಮಾಡಿ
ಸಂಕಷ್ಟದಲ್ಲಿರುವ ಹಾಗೂ ಪೋಷಣೆ ಮತ್ತು ರಕ್ಷಣೆಯ ಅಗತ್ಯವಿರುವ ಮಕ್ಕಳಿಗೆ ನೆರವು ನೀಡಲು ಇಚ್ಛಿಸುವವರು 1098 ಸಂಖ್ಯೆಗೆ ಕರೆಮಾಡಿ ತಿಳಿಸಬಹು ದಾಗಿದೆ. ಮಗುವೊಂದು ಅಸೌಖ್ಯಕ್ಕೆ ಒಳಗಾಗಿ ಒಂಟಿಯಾಗಿರು ವದನ್ನು ಕಂಡಾಗ, ಮಗುವಿಗೆ ಆಶ್ರಯದ ಅಗತ್ಯವಿದ್ದಾಗ, ನಿರ್ಗತಿಕ ಹಾಗೂ ಕಾಣೆಯಾದ ಮಗುವನ್ನು ಕಂಡಾಗ, ದೌರ್ಜನ್ಯಕ್ಕೆ ಮತ್ತು ಹಿಂಸೆಗೆ ಒಳಗಾದ ಮಗುವನ್ನು ನೋಡಿದಾಗ, ಬಾಲ ಕಾರ್ಮಿಕ ಮತ್ತು ವಿಕಲಾಂಗ ಚೇತನ ಮಕ್ಕಳನ್ನು ಕಂಡಾಗ ಸಾರ್ವಜನಿಕರು ಈ ಸಂಖ್ಯೆಗೆ ಕರೆಮಾಡಿ ಮಾಹಿತಿ ನೀಡಬಹು ದಾಗಿದೆ. ಚೈಲ್ಡ್ ಲೈನ್ ಸಂಸ್ಥೆಯು ದಿನದ 24 ಗಂಟೆಯೂ ಉಚಿತ ಮತ್ತು ತುರ್ತು ಸೇವೆಯನ್ನು ನೀಡುವ ಸಂಸ್ಥೆಯಾಗಿದ್ದು, ಹೆಚ್ಚಿನ ಮಾಹಿತಿಗೆ ತಿತಿತಿ. ಛಿhiಟಜಟiಟಿeiಟಿಜiಚಿ.oಡಿg.iಟಿ ನ್ನು ಸಂಪರ್ಕಿಸಬಹುದಾಗಿದೆ. ಸುದ್ದಿಗೋಷ್ಠಿಯಲ್ಲಿ ಚೈಲ್ಡ್ ಲೈನ್ ಸಂಸ್ಥೆಯ ಸದಸ್ಯರುಗಳಾದ ರಂಜನ್, ಪ್ರವೀಣ್ ಕುಮಾರ್, ಶೋಭಾ ಲಕ್ಷ್ಮೀ ಹಾಗೂ ಆಪ್ತ ಸಮಾಲೋಚಕಿ ಸಫ್ರಿನಾ ಉಪಸ್ಥಿತರಿದ್ದರು.