ಸಿದ್ದಾಪುರ, ನ. 21: ಹಾಡಹಗಲೇ ಸಾರ್ವಜನಿಕವಾಗಿ ಗಾಂಜಾ ಸೇದುತ್ತಿದ್ದ ಯುವಕನೋರ್ವನನ್ನು ಬಂಧಿಸುವಲ್ಲಿ ಸಿದ್ದಾಪುರದ ಪೊಲೀಸ್ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.ನೆಲ್ಯಹುದಿಕೇರಿ ನಿವಾಸಿ ಟೋಶನ್ ಥೋಮಸ್ ಬಂಧಿತ ಆರೋಪಿ. ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ಕ್ರಮಕೈಗೊಂಡಿದ್ದಾರೆ.ನೆಲ್ಯಹುದಿಕೇರಿ, ಸಿದ್ದಾಪುರ ವ್ಯಾಪ್ತಿಯಲ್ಲಿ ಎಗ್ಗಿಲ್ಲದೆ ರಾಜಾರೋಷವಾಗಿ ಗಾಂಜಾ ದಂಧೆಗಳು ನಡೆಯುತ್ತಿದ್ದು, ಪ್ರಕರಣಗಳನ್ನು ಬೇದಿಸುವಲ್ಲಿ ಸಿದ್ದಾಪುರ ಪೊಲೀಸರು ವಿಫಲರಾಗಿದ್ದಾರೆ ಎಂಬದಾಗಿ ನೆಲ್ಯಹುದಿಕೇರಿ ಹಾಗೂ ಸಿದ್ದಾಪುರದ ಗ್ರಾ.ಪಂ. ಸಭೆಗಳಲ್ಲಿ ಪೊಲೀಸ್ ಇಲಾಖೆಯ ವಿರುದ್ಧ ಆರೋಪಗಳು ಪ್ರಸ್ತಾಪವಾಗಿರುವ ಹಿನ್ನೆಲೆಯಲ್ಲಿ. ಸಿದ್ದಾಪುರ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟಗಾರರನ್ನು ಪತ್ತೆಹಚ್ಚುವ ಕಾರ್ಯಾಚರಣೆ ರಹಸ್ಯವಾಗಿ ನಡೆಯುತ್ತಿದೆ.ಆರೋಪಗಳು ಕೇಳಿಬಂದ ಕೆಲವೇ ದಿನಗಳಲ್ಲಿ, ಇದೀಗ ವ್ಯಾಪ್ತಿಯ ಎರಡನೇ ಗಾಂಜಾ ಪ್ರಕರಣ ದಾಖಲಾಗಿದ್ದು, ಸಾರ್ವಜನಿಕರ ಆತಂಕವನ್ನು ಅಲ್ಪ ನಿವಾರಿಸಿದೆ.
ಪೊಲೀಸ್ ಇಲಾಖೆ ಗಾಂಜಾ ವ್ಯಸನಿಗಳನ್ನು ಬಂಧಿಸಿ ಅವರ ಮೇಲೆ ಪ್ರಕರಣ ದಾಖಲಿಸುವದರೊಂದಿಗೆ, ಗಾಂಜಾ ಮಾರಾಟಗಾರರನ್ನು ಪತ್ತೆಹಚ್ಚಿ ಬಂಧಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.