ಮಡಿಕೇರಿ, ನ. 21: ನಗರದ ಬದ್ರಿಯಾ ಮಸೀದಿಯ ಆಶ್ರಯದಲ್ಲಿ ಇಂದು ವಿಶ್ವ ಪ್ರವಾದಿ ಮಹಮ್ಮದ್ ಪೈಗಂಬರರ ಜಯಂತಿಯನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸ ಲಾಯಿತು. ನಗರದ ಕ್ರೆಸೆಂಟ್ ಶಾಲಾ ಆವರಣದಲ್ಲಿ ಸಮಾರಂಭ ನಡೆಯಿತು. ಆರಂಭದಲ್ಲಿ ಗದ್ದುಗೆಯಿಂದ ಬೃಹತ್ ಮೆರವಣಿಗೆ ಹೊರಟು ನಗರದ ಮುಖ್ಯ ಬೀದಿಗಳಲ್ಲಿ ಹಾದು ಶಾಲಾ ಆವರಣದಲ್ಲಿ ಕೊನೆಗೊಂಡಿತು.ಮೆರವಣಿಗೆಯ ಉದ್ದಕ್ಕೂ ಪ್ರವಾದಿಯ ಕುರಿತು ಗುಣಗಾನ ಹಾಗೂ ಪ್ರವಾದಿ ಕೀರ್ತನೆಗಳ ಘೋಷಣೆಗಳು ಮೊಳಗಿದವು. ಬದ್ರಿಯಾ ಜಮಾಅತನ ಆಶ್ರಯದಲ್ಲಿ ಆಝಾದ್ ನಗರ, ಗದ್ದುಗೆ, ತ್ಯಾಗರಾಜನಗರಗಳಲ್ಲಿ ನಡೆಯುತ್ತಿರುವ ಹಯಾತುಲ್ ಇಸ್ಲಾಂ ಅರಬಿ ಶಾಲೆಗಳ ವಿದ್ಯಾರ್ಥಿಗಳಿಂದ ಪ್ರವಾದಿಯ ತತ್ವಾದರ್ಶಗಳ ಕುರಿತು ಕನ್ನಡ, ಮಲಯಾಳಂ, ಇಂಗ್ಲೀಷ್, ಉರ್ದು ಸೇರಿದಂತೆ ವಿವಿಧ ಭಾಷೆಗಳಲ್ಲಿ ಹಾಡು, ಭಾಷಣ ರಸಪ್ರಶ್ನೆ- ಸಂಭಾಷಣೆಗಳು ಜರುಗಿದವು.ಕೊಳಕೇರಿ ಸುನ್ನಿ ಮುಸ್ಲಿಂ ಜಮಾತ್‍ನ ಯುವಕರು ಮೆರವಣಿಗೆ ಯಲ್ಲಿ ಪ್ರದರ್ಶಿಸಿದ ದಫ್ ಜಾನಪದ ಕಲೆ ಆಕರ್ಷಕವಾಗಿತ್ತು. ಬದ್ರಿಯಾ ಜಮಾತ್‍ನ

(ಮೊದಲ ಪುಟದಿಂದ) ಅಧ್ಯಕ್ಷ ಯೂಸುಫ್ ಹಾಜಿ ಅವರ ಅಧ್ಯಕ್ಷತೆ ಯಲ್ಲಿ ನಡೆದ ಸಮಾರಂಭವನ್ನು ನಗರದ ಎಂ.ಎಂ. ಮಸೀದಿಯ ಧರ್ಮಗುರು ಹಮೀದ್ ಮದನಿ ಉದ್ಘಾಟಿಸಿದರು. ಬದ್ರಿಯಾ ಜಮಾತ್‍ನ ಧರ್ಮಗುರು ಉಮರ್ ಸಖಾಫಿ ಹಾಗೂ ನಗರಸಭಾ ಸದಸ್ಯ ಅಮೀನ್ ಮೊಹಿಸಿನ್ ಇವರುಗಳು ದಿನದ ಮಹತ್ವದ ಬಗ್ಗೆ ಮಾತನಾಡಿದರು. ಜಾಮಿಯಾ ಮಸೀದಿ ಅಧ್ಯಕ್ಷ ಎಂ.ಎ. ನಝೀರ್, ನಗರಸಭಾ ಸದಸ್ಯ ಮನ್ಸೂರ್ ಆಲಿ, ನಗರದ ಲೆಕ್ಕಪರಿಶೋಧಕ ಜಿ.ಹೆಚ್. ಮೊಹಮದ್ ಹನೀಫ್, ಅರಬಿ ಶಾಲೆಗಳ ಮುಖ್ಯೋಪಾಧ್ಯಾಯ ಅಬ್ದುಲ್ ಅಜೀಜ್ ಅಂಜದಿ, ಉಪಸ್ಥಿತರಿದ್ದರು. ಹಿರಿಯ ಅಧ್ಯಾಪಕ ಹೆಚ್.ಎಂ. ಬಾಬಜಾನ್ ಉಸ್ತಾದ್ ಸ್ವಾಗಿತಿಸಿ ವಂದಿಸಿದರು.

ಸೋಮವಾರಪೇಟೆ : ಸಮೀಪದ ಬಜೆಗುಂಡಿ ಖಿಳಾರಿಯ ಮಸೀದಿ ಯಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಮಕ್ಕಳಿಂದ ದಫ್ ಹಾಗೂ ಧಾರ್ಮಿಕ ಪಠಣ ಸ್ಪರ್ಧೆ ನಡೆಯಿತು.

ಕಾರ್ಯಕ್ರಮವನ್ನು ಜಮಾಅತ್ ಅಧ್ಯಕ್ಷ ಕೆ.ಎ.ಯಾಕೂಬ್ ಉದ್ಘಾಟಿಸಿ ದರು. ವೇದಿಕೆಯಲ್ಲಿ ಖತೀಬರಾದ ಹಂಸ ಮಿಸ್ಬಾಯಿ, ಪ್ರಧಾನ ಕಾರ್ಯದರ್ಶಿ ಕೆ.ಎಂ.ಸುಲೇಮಾನ್, ಉಪಾಧ್ಯಕ್ಷ ಹನೀಪ್, ಜಂಟಿ ಕಾರ್ಯದರ್ಶಿ ನಿಯಾಜ್, ಖಜಾಂಚಿ ಅಬ್ದುಲ್ ರೆಹಮಾನ್, ಸದಸ್ಯರಾದ ಮುಸ್ತಾಪಾ, ಮುನೀರ್, ಇಬ್ರಾಹಿಂ ಸಿದ್ದಿಕ್ ಮತ್ತಿತರರು ಇದ್ದರು.

ಕುಶಾಲನಗರ: ಪ್ರವಾದಿ ಮುಹಮ್ಮದ್ ಪೈಗಂಬರ್ ರ 1493 ನೇ ಜನ್ಮ ದಿನದ ಅಂಗವಾಗಿ ದಾರುಲ್ ಉಲೂಮ್ ಮದ್ರಸ ಹಾಗೂ ಹಿಲಾಲ್ ಮಸೀದಿ ಸಂಯುಕ್ತಾಶ್ರಯದಲ್ಲಿ ಕುಶಾಲನಗರದ ಶಾದಿ ಮಹಲಿನಲ್ಲಿ ಇಶ್ಕೇ ಮದೀನಾ ದಫ್ ಮತ್ತು ಬುರ್ದಾ ಕಾರ್ಯಕ್ರಮ ನಡೆಯಿತು.

ಎರಡು ದಿನಗಳ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕುಶಾಲನಗರ ಹಿಲಾಲ್ ಮಸೀದಿ ಧರ್ಮಗುರು ಸೂಫಿ ದಾರಿಮಿ ಮಾತನಾಡಿ, ವಿಶ್ವ ಗುರು ಪ್ರವಾದಿ ಮುಹಮ್ಮದ್ ಪೈಗಂಬರವರ ತತ್ವ ಸಿದ್ಧಾಂತಗಳನ್ನು ಆಧರಿಸಿ ಶಾಂತಿಯುತವಾದ ಹಾಗೂ ಸಹಬಾಳ್ವೆಯ ಬದುಕನ್ನು ನಾವೆಲ್ಲರೂ ಸಾಗಿಸಬೇಕಾಗಿದೆ ಎಂದು ಕರೆ ನೀಡಿದರು. ಇತರರಿಗೆ ಅನುಕೂಲ ವಾಗುವ ಹಾಗೂ ಉಪಕಾರವಾಗುವ ಸತ್ಕರ್ಮಗಳನ್ನು ಮಾಡುವ ಮೂಲಕ ಪ್ರತಿಯೊಬ್ಬರೂ ಜೀವಿಸಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿಲಾಲ್ ಮಸೀದಿ ಅಧ್ಯಕ್ಷ ಸಲೀಂ ಮಾತನಾಡಿ, ಪ್ರವಾದಿ ಮುಹಮ್ಮದ್ ಪೈಗಂಬರ್ 1493 ನೇ ಜನ್ಮ ದಿನದ ಅಂಗವಾಗಿ ಶಾದಿ ಮಹಲ್‍ನಲ್ಲಿ ಮಕ್ಕಳಿಗೆ ಪ್ರವಾದಿಯವರ ಸಂದೇಶಗಳನ್ನು ಸಾರುವ ಕಾರ್ಯ ಕ್ರಮವನ್ನು ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ವಿವಿಧ ಮಸೀದಿಯ ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದರು. ಹಿಲಾಲ್ ಮಸೀದಿಯ ಕಮಿಟಿ ಪ್ರಮುಖರಾದ ಅಬ್ದುಲ್ ರೆಹಮಾನ್ ಸ್ವಾಗತಿಸಿದರು.

ಮಕ್ಕಳ ಸಾಂಸ್ಕ್ರತಿಕ ಕಾರ್ಯಕ್ರಮ ದಲ್ಲಿ ಪ್ರವಾದಿಯವರ ತತ್ವ ಸಿದ್ಧಾಂತಗಳನ್ನೊಳಗೊಂಡಂತೆ ಕನ್ನಡ ಸೇರಿದಂತೆ ವಿವಿಧ ಭಾಷೆಗಳನ್ನೊಳ ಗೊಂಡ ಹಾಡು ಹಾಗೂ ಭಾಷಣಗಳು ನಡೆದವು. ಸಬ್ ಜೂನಿಯರ್, ಜೂನಿಯರ್, ಸೀನಿಯರ್, ಸೂಪರ್ ಸೀನಿಯರ್ ವಿಭಾಗಗಳಲ್ಲಿ ದಾರುಲ್ ಉಲೂಂ ಮದ್ರಸದ 180 ಮಕ್ಕಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಫಲಾಹ್ ಮತ್ತು ನಜಾಹ್ ಎಂಬ ಎರಡು ತಂಡಗಳು ಸ್ಪರ್ಧಿಸಿದ್ದು, ಹೆಚ್ಚಿನ ಅಂಕಗಳನ್ನೊಂಡ ತಂಡವನ್ನು ಜಯಶೀಲರನ್ನಾಗಿ ಘೋಷಿಸಲಾಗು ವದು. ವಿಜೇತ ಮಕ್ಕಳಿಗೆ ಗುರುವಾರ ನಡೆಯಲಿರುವ ಸಭಾ ಕಾರ್ಯಕ್ರಮ ದಲ್ಲಿ ಬಹುಮಾನ ವಿತರಿಸುವರು.

ಕಿರಿಯರ ಹಾಗೂ ಹಿರಿಯರ ದಫ್ ಕಾರ್ಯಕ್ರಮ ಹಾಗೂ ಸಂಜೆ ಬುರ್ದಾ ವೇದಿಕೆಯನ್ನು ಏರ್ಪಡಿಲಾಯಿತು. ಈ ಸಂದರ್ಭ ಹಿಲಾಲ್ ಮಸೀದಿ ಉಪಾಧ್ಯಕ್ಷರಾದ ಮೂಸಾ ಸಾಹೇಬ್, ಕಾರ್ಯದರ್ಶಿ ಹಮೀದ್, ಹಾಫಿಲ್ ಅಶ್ರಫ್ ಅಝ್ಹರಿ, ಉನೈಸ್ ಫೈಝ, ಅಶ್ರಫ್ ಮಿಸ್ಬಾಹಿ, ನುಸ್ರತುಲ್ ಇಸ್ಲಾಮಿಯತ್‍ನ ಪ್ರಮುಖರಾದ ಆಬಿದ್, ಇಬ್ರಾಹೀಮ್, ಕಮಾಲ್, ರಫೀಕ್, ಸಾದಿಕ್, ಜಮಾಲ್ ಹಾಗೂ ಕಮಿಟಿಯ ಪ್ರಮುಖರು ಭಾಗವಹಿಸಿದ್ದರು.

ಇಂದಿನ ಕಾರ್ಯಕ್ರಮ: ಗುರುವಾರ ಬೆಳಿಗ್ಗೆ ಎಂಟು ಗಂಟೆಯಿಂದ 11 ಗಂಟೆ ತನಕ ಮಕ್ಕಳ ಸಾಂಸ್ಕ್ರತಿಕ ಕಾರ್ಯಕ್ರಮ ಜರುಗಲಿದ್ದು, ನಂತರ ಸಭಾ ಕಾರ್ಯಕ್ರಮ ನಡೆಯಲಿದೆ. ವಿಜೇತರಿಗೆ ಬಹುಮಾನ ವಿತರಣೆ ಹಾಗೂ ದಾರುಲ್ ಉಲೂಮ್ ಮದ್ರಸದ ಏಳನೇ ಹಾಗೂ ಹತ್ತನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದವರಿಗೆ ಬಹುಮಾನ ವಿತರಣೆ ನಡೆಯುವದು.

ಅರಂತೋಡು : ಬದ್ರಿಯಾ ಜುಮಾ ಮಸೀದಿ ಹಾಗೂ ಅನ್ವಾರುಲ್ ಹುದಾ ಯಂಗ್ ಮೆನ್ಸ್ ಎಸೋಸಿ ಯೇಶನ್ ಅರಂತೊಂಡು ಇದರ ಜಂಟಿ ಆಶ್ರಯದಲ್ಲಿ ಮಹಮ್ಮದ್ ಪೈಗಂಬರ್ ಅವರ ಜನ್ಮದಿನಾಚರಣೆ ಈದ್ ಮಿಲಾದ್ ಅನ್ನು ಅರಂತೋಡಿ ನಲ್ಲಿ ಅದ್ಧೂರಿಯಾಗಿ ಆಚರಿಸ ಲಾಯಿತು. ಮದರಸ ವಿದ್ಯಾರ್ಥಿಗಳ ಕಲೋತ್ಸವ ಕಾರ್ಯಕ್ರಮವನ್ನು ಖತೀಬ್ ಇಸಾಕ್ ಬಾಖವಿ ಉದ್ಘಾಟಿಸಿದರು.ದಫ್, ಬುರ್ಧಾ ಮಜಿಲಿಸ್ ವಿವಿಧ ಸ್ಫರ್ಧೆಗಳು ಆಕರ್ಷಣೆಯಾಗಿತ್ತು.ವಿಜೇತರಿಗೆ ಬಹುಮಾನವನ್ನು ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಎಸೋಸಿಯೇಶನ್ ಗೌರವಾಧ್ಯಕ್ಷ ಟಿ.ಎಂ ಶಹೀದ್ ವಿತರಿಸಿದರು. ಅಧ್ಯಕ್ಷತೆಯನ್ನು ಅನ್ವಾರುಲ್ ಹುದಾ ಯಂಗ್ ಮೆನ್ಸ್ ಎಸೋಸಿಯೇಶನ್‍ನ ಅಧ್ಯಕ್ಷ ಎಸ್.ಎಂ. ಅಬ್ದುಲ್ ಮಜೀದ್ ವಹಿಸಿ ದ್ದರು. ಅತಿಥಿಗಳಾಗಿ ಜಮಾಅತ್ ಅಧ್ಯಕ್ಷ ಅಬ್ದುಲ ಖಾದರ್ ಪಟೇಲ್, ಮಾಜಿ ಅದ್ಯಕ್ಷರುಗಳಾದ ಎ. ಅಹಮ್ಮದ್ ಕುಂಞ, ಹಾಜಿ ಟಿ.ಎಂ. ಬಾಬಾ ತೆಕ್ಕಿಲ್, ಹಾಜಿ ಎಸ್.ಇ. ಮಹಮ್ಮದ್ , ಹಾಜಿ ಕೆ.ಎಂ. ಮಹಮ್ಮದ್, ಕೆ.ಎಂ. ಅಬೂಬಕ್ಕರ್ ಪಾರೆಕ್ಕಲ್, ದುಬೈ ಸಮಿತಿ ಸದಸ್ಯ ಬದರುದ್ದೀನ್ ಪಟೇಲ್ ಹಾಗೂ ಕೆ.ಎಂ. ಅನ್ವಾರ್, ಸೌದಿ ಸಮಿತಿಯ ಹಬೀಬ್ ಗುಂಡಿ, ಹನೀಫ್ ಕುನ್ನಿಲ್ ಭಾಗವಹಿಸಿದರು. ವೇದಿಕೆಯಲ್ಲಿ ಜಮಾಅತ್ ಕಾರ್ಯದರ್ಶಿ ಅಶ್ರಫ್ ಗುಂಡಿ, ಷಂಶುದ್ದೀನ್ ಮುಸ್ಲಿಯಾರ್, ಕೆ.ಎಂ. ಮೂಸಾನ್, ಹಾಜಿ ಅಜಾರುದ್ದೀನ್ ಉಪಸ್ಥಿತರಿದ್ದರು. ದುಬೈ ಸಮಿತಿ ಹಾಗೂ ಕೆ.ಎಂ. ಅನ್ವಾರ್ ಬಹುಮಾನವನ್ನು ಪ್ರಾಯೋಜಿಸಿದ್ದರು. ದಫ್ ಉಸ್ತಾದ್ ನವಾಜ್ ದಾರಿಮಿ ಅವರನ್ನು ಜಮಾಅತ್ ವತಿಯಿಂದ ಸನ್ಮಾನಿಸ ಲಾಯಿತು. ಕಾರ್ಯದರ್ಶಿ ಫಸೀಲ್ ಸ್ವಾಗತಿಸಿದರು. ಸದರ್ ನವಾಜ್ ದಾರಿಮಿ ಕಾರ್ಯಕ್ರಮ ನಿರೂಪಿಸಿದರು.