ಮಡಿಕೇರಿ, ನ. 22: ಕಾವೇರಿ ಕ್ಷೇತ್ರ ಭಾಗಮಂಡಲದಲ್ಲಿ ಮೇಲ್ಸೇತುವೆ ನಿರ್ಮಿಸುವದಕ್ಕಾಗಿ ಹಲವಾರು ಮರಗಳನ್ನು ಕಡಿಯಲಾಗಿದೆ. ಆದರೆ ಈ ಮರಗಳು ಅರಣ್ಯ ಇಲಾಖಾ ಸಿಬ್ಬಂದಿಯ ಪಾಲಾಗುವ ಶಂಕೆ ವ್ಯಕ್ತಗೊಂಡಿದೆ. ಕಡಿಯಲಾಗಿರುವ ಮರಗಳನ್ನು ಸೌದೆ ಡಿಪೋಗೆ ಸಾಗಿಸುವ ಬದಲು ಭಾಗಮಂಡಲದಲ್ಲಿರುವ ಅರಣ್ಯ ಇಲಾಖಾ ಸಿಬ್ಬಂದಿಯ ವಸತಿಗೃಹಕ್ಕೆ ಸಾಗಿಸಿ ಶೇಖರಿಸಿಡಲಾಗಿದೆ. ಈ ಬಗ್ಗೆ ಸ್ಥಳೀಯ ಕೆಲವರು ‘ಶಕ್ತಿ’ ಮೂಲಕ ಆಕ್ಷೇಪ ವ್ಯಕ್ತಪಡಿಸಿದ್ದು, ಸಾರ್ವಜನಿಕರು ಒಣಗಿದ ಮರ ಕಡಿದು ಬಳಸಿದರೆ ಕಾನೂನು ಕ್ರಮ ಕೈಗೊಳ್ಳುವ ಅರಣ್ಯ ಇಲಾಖೆ ಈ ರೀತಿ ಮರಗಳನ್ನು ಸೌದೆ ಡಿಪೋಗೆ ಸಾಗಿಸದೆ ಇಲಾಖೆಯ ವಸತಿಗೃಹದಲ್ಲಿ ಶೇಖರಿಸಿಟ್ಟಿರುವ ಕ್ರಮ ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.