ಕುಶಾಲನಗರ ಕರಿಯಪ್ಪ ಬಡಾವಣೆ ನಿವಾಸಿ ಬೊಪ್ಪಂಡ ಪುಷ್ಪರಾಜು (ಮಣಿ-69) ಅವರು ತಾ. 22 ರಂದು ನಿಧನರಾದರು. ಮೃತರ ಅಂತ್ಯಕ್ರಿಯೆ ತಾ. 23 ರಂದು (ಇಂದು) ಕುಶಾಲನಗರ ಕೊಡವ ಸಮಾಜ ರುದ್ರಭೂಮಿಯಲ್ಲಿ ನಡೆಯಲಿದೆ. ಮೃತರು ಪತ್ನಿ, ಈರ್ವರು ಪುತ್ರಿಯರನ್ನು ಅಗಲಿದ್ದಾರೆ.
ಟಹೈಸೊಡ್ಲೂರು ನಿವಾಸಿ ಕೊಕ್ಕಲೆಮಾಡ ಗಪ್ಪು ಪೊನ್ನಪ್ಪ ಅವರ ಪತ್ನಿ ಕಾಮುಣಿ ಮುದ್ದಮ್ಮ -76 (ತಾಮನೆ ಕೇಚಮಾಡ) ಅವರು ತಾ. 21ರಂದು ನಿಧನರಾದರು. ಮೃತರು ಪತಿ ಸೇರಿದಂತೆ ಪುತ್ರ ಯುಕೊ ಸಂಘಟನೆಯ ಸಂಚಾಲಕ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಟಕೈಕೇರಿ ಗ್ರಾಮದ ವಿ.ಕೆ.ಚಂದ್ರು (68) ಇಂದು ನಿಧನರಾದರು. ಮೃತರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.