ಸೋಮವಾರಪೇಟೆ, ನ. 22: ಭಾರತೀಯ ಸೇನಾ ವೈದ್ಯಕೀಯ ವಿಭಾಗ (ಎಎಂಸಿ)ದ ಲೇ. ಲಡಾಕ್‍ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ತಾಲೂಕಿನ ಕೂಗೇಕೋಡಿ ಗ್ರಾಮದ ಕ್ಯಾಪ್ಟನ್ ಕೆ.ಜಿ.ಲೋಹಿತ್ ವೀರಪ್ಪ ಮೇಜರ್ ಹುದ್ದೆಗೆ ಬಡ್ತಿ ಹೊಂದಿದ್ದಾರೆ. ಕೂಗೇಕೋಡಿ ಗ್ರಾಮದ ವಕೀಲರಾದ ಕೆ.ವಿ.ಗಣೇಶ್ ಮತ್ತು ರೇಖಾ ದಂಪತಿಗಳ ಪುತ್ರರಾಗಿರುವ ಲೋಹಿತ್, 2004ರಲ್ಲಿ ಎಂಬಿಬಿಎಸ್ ಪೂರೈಸಿ, ಕ್ಯಾಪ್ಟನ್ ಹುದ್ದೆಗೆ ಆಯ್ಕೆಗೊಂಡಿದ್ದರು.