ಶನಿವಾರಸಂತೆ, ನ. 22: ಶನಿವಾರಸಂತೆ ವ್ಯಾಪ್ತಿಯಲ್ಲಿ ಡಿಡಿಯುಜಿಜೆವೈ ಯೋಜನೆಯಡಿ ವಿದ್ಯುತ್ ಕಾಮಗಾರಿಯನ್ನು ಹಮ್ಮಿಕೊಂಡಿರುವದರಿಂದ ತಾ. 23 ಮತ್ತು 25 ರಂದು ಶನಿವಾರಸಂತೆ ವ್ಯಾಪ್ತಿಗೆ ಸಂಬಂಧಿಸಿದ ಗ್ರಾಮಗಳಾದ ಶನಿವಾರಸಂತೆ, ಹೆಮ್ಮಾನೆ, ಗುಡುಗಳಲೆ, ಚಿಕ್ಕೊಳತ್ತೂರು, ಅಪ್ಪಶೆಟ್ಟಳ್ಳಿ, ಶೆಟಿಗನಹಳ್ಳಿ, ಕೆರಿಕೆರೆ, ಕಾಜೂರು, ದೊಡ್ಡಕೊಳತ್ತೂರು, ಕೂಜುಗೇರಿ ಮತ್ತು ಮಾದ್ರೆ ಗ್ರಾಮಗಳಿಗೆ ಬೆಳಿಗ್ಗೆ 9 ಗಂಟೆಯಿಂದ ಸಂಜೆ 5.30 ಗಂಟೆ ಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.