ಬೆಂಗಳೂರು, ನ.25: ನಿನ್ನೆ ರಾತ್ರಿ ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದ ಮಂಡ್ಯದ ಗಂಡು, ಖ್ಯಾತ ಕನ್ನಡÀ ಚಲನಚಿತ್ರ ನಟ, ಮಾಜಿ ಸಚಿವ ಅಂಬರೀಶ್ ಅವರ ಪಾರ್ಥಿವ ಶರೀರವನ್ನು ಕೊನೆಯ ಬಾರಿಗೆ ಕಾಣಬೇಕೆಂದು ಮಂಡ್ಯ ಜನತೆ ಕಣ್ಣೀರಿಟ್ಟಿದ್ದು ತವರಿಗೆ ಅಂಬಿ ಮೃತ ಶರೀರವನ್ನು ತರುವಂತೆ ಆಗ್ರಹಿಸಿದ್ದರು. ಇದಕ್ಕೆ ಸ್ಪಂದಿಸಿದÀ ರಾಜ್ಯ ಸರ್ಕಾರ ಸೇನಾ ಹೆಲಿಕಾಫ್ಟರ್ ಮೂಲಕ ಮಂಡ್ಯಕ್ಕೆ ಪಾರ್ಥಿವ ಶರೀರವನ್ನು ರವಾನಿಸಿದ್ದು, ತಾ. 26 ರಂದು (ಇಂದು) ಬೆಂಗಳೂರಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ‘ಏರ್ ಲಿಫ್ಟ್’ ಮೂಲಕ ಮಂಡ್ಯಕ್ಕೆ ಅಂಬಿ ಪಾರ್ಥಿವ ಶರೀರ ಕೊಂಡೊಯ್ಯಲು ರಕ್ಷಣಾ ಇಲಾಖೆ ಅನುಮತಿ ನೀಡಿತು. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸೇನಾ ಹೆಲಿಕಾಪ್ಟರ್ ಮೂಲಕ ಅಂಬಿ ಮೃತ ಶರೀರ ರವಾನೆಗೆ ಹೆಲಿಕಾಪ್ಟರ್ ನೀಡುವಂತೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಮಾಡಿದ ಹಿನ್ನೆಲೆ ಸ್ಪಂದಿಸಿದ ನಿರ್ಮಲಾ ಸೀತಾರಾಮನ್ ಅವರು ‘ಏರ್ ಲಿಫ್ಟ್’ಗೆ ಅನುಮತಿ ನೀಡಿದರು. ಈ ಹಿನ್ನೆಲೆಯಲ್ಲಿ ಮಂಡ್ಯಕ್ಕÉ ಅಂಬಿ ಪಾರ್ಥಿವ ಶರೀರ ರವಾನಿಸಿ ಮಂಡ್ಯದ ವಿಶ್ವೇಶ್ವರಯ್ಯ ಸ್ಟೇಡಿಯಂನಲ್ಲಿ ಭಾನುವಾರ ಸಂಜೆ 4 ಗಂಟೆಯಿಂದ ಇರಿಸಲಾಯಿತು. ಸೋಮವಾರ ಬೆ. 9 ಗಂಟೆಯವರೆಗೆ ಸಾರ್ವಜನಿಕರಿಗಾಗಿ

(ಮೊದಲ ಪುಟದಿಂದ) ಅಂತಿಮ ದರ್ಶನಕ್ಕೆ ಇಡಲಾಗುವದು ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ. ಬಳಿಕ ಬೆಂಗಳೂರಿಗೆ ಒಯ್ದು ಅಂತಿಮ ಸಂಸ್ಕಾರ ನೆರವೇರಿಸಲಾಗುವದು.

ಅಂಬರೀಶ್ ನಿಧನಕ್ಕೆ ಅವರ ನಿಕಟವರ್ತಿಗಳಾಗಿದ್ದ ಕೊಡಗಿನ ಕಾಫಿ ಬೆಳೆಗಾರ ವಿನೋದ್ ಶಿವಪ್ಪ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಮಿಟ್ಟು ಚಂಗಪ್ಪ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.

ಸಂತಾಪ

ಸೋಮವಾರಪೇಟೆ: ಚಿತ್ರನಟ ಅಂಬರೀಶ್ ಅವರ ಅಕಾಲಿಕ ಮರಣಕ್ಕೆ, ಇಲ್ಲಿನ ಅಂಬರೀಶ್ ಅಭಿಮಾನಿಗಳ ಸಂಘದ ಪದಾಧಿಕಾರಿಗಳು ಶ್ರದ್ಧಾಂಜಲಿ ಅರ್ಪಿಸಿದರು.

ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಪುಟ್ಟಪ್ಪ ವೃತ್ತದಲ್ಲಿ ಅಂಬರೀಶ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಈ ಸಂದರ್ಭ ಅಂಬರೀಶ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಿ.ಸಿ. ಶಶಿಕುಮಾರ್, ಮಾಜಿ ಪ್ರಧಾನಿ ದಿ.ಇಂದಿರಾಗಾಂಧಿ ಅಭಿಮಾನಿಗಳ ಸಂಘದ ಅಧ್ಯಕ್ಷ ಎಚ್.ಎ. ನಾಗರಾಜು, ಆಟೋ ಚಾಲಕ ಹಸನಬ್ಬ, ಸಂಘದ ಸದಸ್ಯರುಗಳಾದ ಆನಂದ, ರವಿ, ಸ್ವಾಮಿ, ಸುರೇಂದ್ರ, ಜಮೀಲ್ ಮತ್ತಿತರರು ಇದ್ದರು.

ಎನ್.ಟಿ.ಸಿ ವತಿಯಿಂದ ಶ್ರದ್ಧಾಂಜಲಿ

ಚೆಟ್ಟಳ್ಳಿ: ಖ್ಯಾತ ಚಿತ್ರ ನಟ ಅಂಬರೀಶ್ ಹಾಗೂ ಮಾಜಿ ಕೇಂದ್ರ ರೈಲ್ವೇ ಸಚಿವರಾದ ಜಾಫರ್ ಶರೀಫ್ ಅವರಿಗೆ ನಿಸರ್ಗಧಾಮ ಟೂರಿಸ್ಟ್ ಸೆಂಟರ್ ವತಿಯಿಂದ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಈ ಸಂದರ್ಭ ಎನ್.ಟಿ.ಸಿ ಮಾಲೀಕ ಅಬ್ದುಲ್ ಸಲಾಮ್ ರಾವತರ್, ಕಾಂಗ್ರೆಸ್ ಮುಖಂಡ ಮೈಸಿ, ಎನ್.ಟಿ.ಸಿ ವರ್ತಕರಾದ ಮುರುಳಿ ಅಂಚೆಮನೆ, ತಪಾಸ್, ಹಕೀಂ ಹಾಗೂ ಇನ್ನಿತರರು ಇದ್ದರು.