ಶ್ರೀಮಂಗಲ, ನ. 25: ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜದ ಮಹಾಸಭೆ ಅಧ್ಯಕ್ಷ ಕೋಟ್ರಮಾಡ ಅರುಣ್ ಅಪ್ಪಣ್ಣ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭ ಟಿ. ಶೆಟ್ಟಿಗೇರಿ ಕೊಡವ ಸಮಾಜದ ಮುಂದಾಳ ತ್ವದಲ್ಲಿ ಉತ್ತರ ಕೊಡಗಿನಲ್ಲಾದ ಪ್ರಕೃತಿ ವಿಕೋಪದಿಂದ ಸಂತ್ರಸ್ತರಾದವರಿಗೆ ನೀಡಲು ಸಾರ್ವಜನಿಕರಿಂದ ಸಂಗ್ರಹಿಸಿದ ರೂಪಾಯಿ ಎರಡು ಲಕ್ಷ ಇಪ್ಪತ್ತು ಸಾವಿರ ಹಣವನ್ನು ಇಪ್ಪತ್ತೈದು ಜನ ಸಂತ್ರಸ್ತರಿಗೆ ಸಮಾನಾಗಿ ವಿತರಿಸಲಾಯಿತು.

ಪೆಮ್ಮಡಿಯಂಡ ಪೆಮ್ಮಯ್ಯ, ಮಿನ್ನಂಡ ಗಣಪತಿ, ಚೆರುಮಂದಂಡ ಕುಟ್ಟಪ್ಪ, ತಂಬುಕುತ್ತಿರ ಪೂವಣ್ಣ, ಜಗ್ಗಾರಂಡ ಕಾವೇರಪ್ಪ, ಮುಕ್ಕಾಟಿರ ತಂಗಮ್ಮ, ಜಗ್ಗಾರಂಡ ನಯನ ದೇವಯ್ಯ, ಬಾಚಳ್ಳಿರ ಪವನ ರತಿ, ಬಾಚಳ್ಳಿರ ಪಾರ್ವತಿ ಗಣಪತಿ, ಕಾರೇರ ಸಾಬು ಉತ್ತಯ್ಯ, ಮುದ್ದಂಡ ಕವಿತ, ಬಾಚಳ್ಳಿರ ಸೋಮಯ್ಯ, ಕಾರೆರ ಜೋಯಪ್ಪ, ಶಾಂತೆಯಂಡ ಚಿತ್ರ, ಅಯ್ಯಕುಟ್ಟಿರ ಪೂವಯ್ಯ, ಚಟ್ಟೇರ ತಂಗಮ್ಮ, ನಾಪಂಡ ಸನ್ನಿ ಕಾಳಪ್ಪ, ಐಮುಡಿಯಂಡ ಶಾರದ ಸುಬ್ಬಯ್ಯ, ಚನ್ನಪಂಡ ಪೊನ್ನಪ್ಪ, ಚನ್ನಪಂಡ ಪೊನ್ನಕಟ್ಟಿ, ಬಾಚಳ್ಳಿರ ಮುತ್ತಮ್ಮ, ಚಂಡೀರ ಪೊನ್ನಪ್ಪ, ಚನ್ನಪಂಡ ರತಿ ಸತೀಶ್ ಪರಿಹಾರ ಮೊತ್ತವನ್ನು ಪಡೆದರು.

ಸಮಾಜದ ಗೌರವ ಅಧ್ಯಕ್ಷ ಮಾಯಣಮಾಡ ಪೂಣಚ್ಚ, ನಿರ್ದೇಶಕಿ ಚಂಗುಲಂಡ ಅಶ್ವಿನಿ ಸತೀಶ್, ಕಟ್ಟೇರ ಈಶ್ವರ, ಚೊಟ್ಟೆಯಾಂಡಮಾಡ ವಿಶ್ವನಾಥ್, ಚೊಟ್ಟೆಯಾಂಡಮಾಡ ವಿಶು, ಚೆಟ್ಟಂಗಡ ರವಿ ಸುಬ್ಬಯ್ಯ, ತಡಿಯಂಗಡ ಕರುಂಬಯ್ಯ, ಮಾಣೀರ ವಿಜಯ ನಂಜಪ್ಪ, ಮಚ್ಚಮಾಡ ಸೋಮಯ್ಯ, ಕೈಬಿಲೀರ ಹರೀಶ್ ಅಪ್ಪಯ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಮನ್ನೆರ ರಮೇಶ್ ನಿರೂಪಿಸಿದರು.