ಮಡಿಕೇರಿ, ನ. 26: ಕೊಡಗು ಜಿಲ್ಲೆಯ ಜನತೆಯ ಬದುಕಿನ ಮೇಲೆ ಗಂಭೀರವಾಗಿ ಪರಿಣಾಮ ಬೀರುವ ಮೂಲಕ ಭವಿಷ್ಯದಲ್ಲಿ ಇಲ್ಲಿನ ಭೌಗೋಳಿಕ ಸಂಸ್ಕೃತಿಯ ನಾಶಕ್ಕೆ ಕಾರಣವಾಗುತ್ತದೆ ಎನ್ನುವ ಸೂಕ್ಷ್ಮತೆಯನ್ನು ಅರ್ಥೈಸಿಕೊಂಡು ಮತ್ತೊಂದು ಚಳವಳಿಗೆ ಭಾಗಿಯಾಗುವಂತೆ ಕೊಡಗು ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟ ಸಮಿತಿ ಕರೆನೀಡಿದೆ. ಇಂದು ನಗರದ ಹೊಟೇಲ್ ಕ್ರಿಸ್ಟಲ್ ಕೋರ್ಟ್ ನಲ್ಲಿ ಆಯೋಜಿಸಿದ ಹೋರಾಟ ಸಮಿತಿ ಸಭೆಯಲ್ಲಿ ಸುದ್ದಿ ಗಾರರೊಂದಿಗೆ ಮಾತನಾಡಿದ ಪ್ರಮುಖರು ಮುಂದಿನ ಹೋರಾಟದ ಕುರಿತು ಮಾಹಿತಿ ನೀಡಿದರು. ಮಡಿಕೇರಿ ಕ್ಷೇತ್ರದ ಶಾಸಕರು ಹಾಗೂ ಹೋರಾಟ ಸಮಿತಿಯ ಅಧ್ಯಕ್ಷರಾಗಿ ರುವ ಎಂ.ಪಿ.ಅಪ್ಪಚ್ಚುರಂಜನ್ ಅಧ್ಯಕ್ಷ ತೆಯಲ್ಲಿ ನಡೆದ ಸಭೆಯ ಬಳಿಕ ಮುಂದಿನ ಹೋರಾಟ ಕುರಿತು ವಿವರಿಸಿದರು. ಸಭೆಯಲ್ಲಿ ಮಾಧ್ಯಮ ದೊಂದಿಗೆ ಮಾತನಾಡಿದ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಅವರು ಕಸ್ತೂರಿ ರಂಗನ್ ವರದಿ ಅನುಷ್ಠಾನ ಸಮಿತಿಯ ಕರಡು ಸೂಚನೆಗಳು ಅವೈಜ್ಞಾನಿಕ ಹಾಗೂ ಸಂವಿಧಾನದ ವಿರುದ್ಧವಾಗಿದೆ ಎಂದು ಅಭಿಪ್ರಾಯ ಪಟ್ಟರು. ಈವರದಿ ವಿರುದ್ಧ ಕೇರಳ ಸರಕಾರದ ಆಕ್ಷೇಪಣೆ ಯನ್ನು ಕೇಂದ್ರ ಸರ್ಕಾರ ಪರಿಗಣಿಸಿದ್ದರು ಕರ್ನಾಟಕ ಸರ್ಕಾರದ ವತಿಯಿಂದ ಸಲ್ಲಿಸಿದ ಮಾಹಿತಿಯನ್ನು ಪರಿಗಣಿಸಿದಂತೆ ಕಾಣುತ್ತದೆ ಎಂದು ಬೊಟ್ಟು ಮಾಡಿ ದರು. ಅಲ್ಲದೆ ಕೊಡಗಿನ ಜನತೆಯ ಪರವಾಗಿ ಈ ಹಿಂದೆ ಮೂರು ಬಾರಿ ಆಕ್ಷೇಪಣೆ ಸಲ್ಲಿಸಿದರೂ ಕೇಂದ್ರ ಪರಿಸರ ಸಚಿವಾಲಯ ಗಂಭೀರವಾಗಿ ಪರಿಗಣಿಸಿಲ್ಲವೆಂದು ಭೇಸರ ವ್ಯಕ್ತಪಡಿಸಿದರು. ಕಸ್ತೂರಿ ರಂಗನ್ ವರದಿಯನ್ನು ಜನವಸತಿ ಗ್ರಾಮಗಳಲ್ಲಿ ಹೊರತುಪಡಿಸಿ ಅರಣ್ಯ ಪ್ರದೇಶದಲ್ಲಿ ಈಗಾಗಲೇ ಸರ್ಕಾರದ ವಶದಲ್ಲಿರುವ ಷುಷ್ಪಗಿರಿ ಬ್ರಹ್ಮ ಗಿರಿ ತಲಕಾವೇರಿಯ ನಿರ್ದಿಷ್ಟ ಪ್ರದೇಶಗಳಲ್ಲಿ ಜಾರಿಗೊಳಿಸಲು ತಿದ್ದುಪಡಿಗೊಳಿಸ ಬೇಕೆಂದು ಒತ್ತಾಯಪಡಿಸಿದರು. ಈ ವೇಳೆ ಮಾತನಾಡಿದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು ಮತ್ತೊಂದು ಬಾರಿ ಕೊಡಗಿನ ಜನತೆ ಒಗ್ಗಟ್ಟಿನ ಮೂಲಕ ಹೋರಾಟ ನಡೆಸುವ ಅನಿವಾರ್ಯ ಪರಿಸ್ಥಿತಿ ಎಂದು ನೆನಪಿಸಿದರು.ಹೀಗಾಗಿ ಕಸ್ತೂರಿ ರಂಗನ್ ವಿರೋಧಿ ಹೋರಾಟ ಸಮಿತಿಯ

(ಮೊದಲ ಪುಟದಿಂದ) ಜತೆಗೆ ಕೊಡಗಿನ ಸಾರ್ವಜನಿಕ ರು ಕೇಂದ್ರದ ಪರಿಸರ ಸಚಿವಾಲಯಕ್ಕೆ ಸಾಕಷ್ಟು ಆಕ್ಷೇಪಣೆಗಳನ್ನು ಸಲ್ಲಿಸುವಂತೆ ಸಲಹೆ ನೀಡಿದರು.

ಡಿ.2ರೊಳಗೆ ಆಕ್ಷೇಪಣೆ

ಕೊಡಗು ಜಿಲ್ಲೆಯಲ್ಲಿ ಕಸ್ತೂರಿ ರಂಗನ್ ವರದಿಯಿಂದ ಜನವಸತಿ ಗ್ರಾಮಗಳನ್ನು ಹೊರತುಪಡಿಸುವಂತೆ ಆಗ್ರಹಿಸಿ, ಕೇಂದ್ರ ಸರಕಾರದ ಪರಿಸರ ಸಚಿವಾಲಯಕ್ಕೆ ಡಿ.2ರೊಳಗೆ ಆಕ್ಷೇಪಣೆ ಸಲ್ಲಿಸಬೇಕು. ಈ ದಿಸೆಯಲ್ಲಿ ಎಲ್ಲಾ ಗ್ರಾ.ಪಂ., ತಾ.ಪಂ., ಜಿ.ಪಂ. ಆಡಳಿತ ತುರ್ತು ಕ್ರಮ ವಹಿಸುವದರೊಂದಿಗೆ ಸಾರ್ವಜನಿಕರು ಕೂಡ ಆಕ್ಷೇಪಣೆ ಸಲ್ಲಿಸುವಂತಾಗಬೇಕಿದೆ ಎಂದು ಸಲಹೆ ನೀಡಿದರು.

ಹೋರಾಟ ಸಮಿತಿಯ ಪ್ರಮುಖ ಚೇರಂಡ ನಂದ ಸುಬ್ಬಯ್ಯ ಮಾತನಾಡಿ ಕೆಲವರು ಪರಿಸರವಾದಿಗಳ ಸೋಗಿನಲ್ಲಿ ಜನಾಂಗೀಯ ಬಾವನೆ ಕೆರಳಿಸುವ ಮೂಲಕ ಕಸ್ತೂರಿ ರಂಗನ್ ವರದಿ ವಿರುದ್ಧದ ಹೋರಾಟದ ದಿಕ್ಕು ತಪ್ಪಿಸುವದನ್ನು ಕೈಬಿಡುವಂತೆ ಒತ್ತಾಯ ಮಾಡಿದರು. ಕೊಡಗಿನಲ್ಲಿ ಕಸ್ತೂರಿ ರಂಗನ್ ವರದಿ ಜಾರಿಗೊಳಿಸುವ ಮೊದಲು ಪ್ರತಿ ಗ್ರಾಮದಲ್ಲಿ ಹಾಗೂ ಖಾಸಗಿ ಒಡೆತನದ ಭೂಮಿಯ ಸರ್ವೆ ನಡೆಸಬೇಕು ಎಂದು ಆಗ್ರಹಪಡಿಸಿದರು. ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುನಿಲ್ ಸುಬ್ರಮಣಿ ಸಲಹೆ ನೀಡಿದರಲ್ಲದೆ ಈ ಬಾರಿಯ ಹೋರಾಟವನ್ನು ಕೇಂದ್ರ ಸರ್ಕಾರದ ಗಮನಕ್ಕೆ ಮುಟ್ಟಿಸುವಲ್ಲಿ ಪರಿಣಾಮಕಾರಿ ಹೆಜ್ಜೆ ಇಡಬೇಕು ಎಂದು ಅಭಿಪ್ರಾಯಪಟ್ಟರು. ಬೊಟ್ಟಂಗಡ ರಾಜು ಹಾಗೂ ಹೋರಾಟ ಸಮಿತಿಯ ಸಂಚಾಲಕ ತೀತಿರ ಧರ್ಮಜ ಉತ್ತಪ್ಪ ಮಾತನಾಡಿ ಯಾವದೇ ಕಾರಣಕ್ಕೂ ಕೊಡಗಿನಲ್ಲಿ ಕಸ್ತೂರಿ ರಂಗನ್ ವರದಿಯನ್ನು ಅನುಷ್ಠಾನಕ್ಕೆ ಅವಕಾಶ ನೀಡಿದಂತೆ ಸರ್ವೋಚ್ಚ ನ್ಯಾಯಾಲಯದಲ್ಲಿ ಕಾನೂನು ಹೋರಾಟಕ್ಕೂ ಮುಂದಾಗಬೇಕೆಂದು ಸಲಹೆ ನೀಡಿದರು. ಇಂದಿನ ಸಭೆಯಲ್ಲಿ ಸಮಿತಿಯ ಭರತ್ ಕುಮಾರ್. ಅರುಣ್ ಭೀಮಯ್ಯ.ಮನುಶೆಣೈ ಮೊದಲಾದ ವರು ಪಾಲ್ಗೊಂಡಿದ್ದರು.