ಸೋಮವಾರಪೇಟೆ, ನ. 26: ಇಲ್ಲಿನ ಒಕ್ಕಲಿಗರ ಸಂಘದ ಬಿಟಿಸಿಜಿ ಪದವಿಪೂರ್ವ ಕಾಲೇಜಿನಲ್ಲಿ ನೂತನ ವಾಗಿ ಸ್ಥಾಪಿಸಲಾಗಿರುವ ಲಿಯೋ ಕ್ಲಬ್‍ನ್ನು ಜಿಲ್ಲಾಧ್ಯಕ್ಷೆ ಪಲ್ಲವಿ ಪೈ ಉದ್ಘಾಟಿಸಿದರು.

ಸ್ಥಳೀಯ ಒಕ್ಕಲಿಗರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಲಯನ್ಸ್ ರಾಜ್ಯಪಾಲರ ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ ನೂತನ ಲಿಯೋ ಕ್ಲಬ್‍ಗೆ ಚಾಲನೆ ನೀಡಲಾಯಿತು. ಅಧ್ಯಕ್ಷರಾಗಿ ಗಗನ್, ಕಾರ್ಯದರ್ಶಿ ಯಾಗಿ ಅಜಿತ್ ಹಾಗೂ ಖಜಾಂಚಿಯಾಗಿ ರಕ್ಷಿತ್ ಸೇರಿದಂತೆ 20 ಮಂದಿ ಸದಸ್ಯರುಗಳನ್ನು ಆಯ್ಕೆ ಮಾಡಲಾಯಿತು.

ಲಯನ್ಸ್ ಜಿಲ್ಲಾ ರಾಜ್ಯಪಾಲ ಚಂದ್ರಶೇಖರ್ ಭಂಡಾರಿ, ಲಯನ್ಸ್ ಕ್ಲಬ್ ಅಧ್ಯಕ್ಷ ಎಸ್.ಎನ್. ಯೋಗೇಶ್, ರೋಟರಿ ಉಪ ರಾಜ್ಯಪಾಲ ಗೀತಾಪ್ರಕಾಶ್, ಪ್ರಾಂತೀಯ ಅಧ್ಯಕ್ಷ ಬೋಸ್ ಪೆಮ್ಮಯ್ಯ, ವಲಯ ಅಧ್ಯಕ್ಷ ಎ.ಎಸ್. ಮಹೇಶ್, ಕಾರ್ಯದರ್ಶಿ ಮಂಜುನಾಥ್ ಚೌಟ, ಖಜಾಂಚಿ ಬಸಪ್ಪ, ಕಾಲೇಜು ಪ್ರಾಂಶುಪಾಲ ಶರಣ್ ಸೇರಿದಂತೆ ಇತರರು ಉಪಸ್ಥಿತರಿದ್ದರು.