ಮೂರ್ನಾಡು, ನ. 26 : ಸುಗ್ಗಿ ಹಬ್ಬವಾದ ಹುತ್ತರಿ ಹಬ್ಬದ ಕೋಲಾಟ ಪಾಂಡಾಣೆ ನಾಡ್ ಮಂದ್ ಮೈದಾನದಲ್ಲಿ ಸಡಗರ ಸಂಭ್ರಮದಿಂದ ನಡೆಯಿತು.

ಆರು ಗ್ರಾಮದ ಗ್ರಾಮಸ್ಥರು ಊರ್‍ತಕ್ಕ, ನಾಡತಕ್ಕ ಮುಖ್ಯಸ್ಥರೊಂದಿಗೆ ಕೊಡವ ಸಂಪ್ರಾದಾಯಿಕ ಉಡುಪಿನಲ್ಲಿ ಓಲಗದೊಂದಿಗೆ ಕಪಾಳ ವೇಷಧಾರಿಗಳೊಂದಿಗೆ ಅಪರಾಹ್ನ 2 ಗಂಟೆಗೆ ಮೂರ್ನಾಡಿನ ಪಾಂಡಾಣೆ ನಾಡ್‍ಮಂದ್‍ಗೆ ಆಗಮಿಸಿದರು. ಐಕೊಳ, ಬಾಡಗ, ಕಾಂತೂರು, ಕೋಡಂಬೂರು, ಮುತ್ತಾರುಮುಡಿ ಹಾಗೂ ಕಿಗ್ಗಾಲು ಗ್ರಾಮಸ್ಥರು ಒಟ್ಟು ಸೇರಿಕೊಂಡು ಸಂಪ್ರಾದಾಯದಂತೆ ಮೂರು ಸುತ್ತು ಕೋಲು ಹೊಡೆದು ಸಂಭ್ರಮಿಸಿದರು. ಕಾಪಾಳ ವೇಷಧಾರಿಗಳು ನೆರೆದ ಸಾರ್ವಜನಿಕರ ಗಮನ ಸೆಳೆದರು.