ಮಡಿಕೇರಿ, ನ. 26: ಇಂಡೋನೇಷಿಯಾದ ಜಕಾರ್ಥದಲ್ಲಿ ನಡೆದ ಏಷಿಯನ್ ಶಿಟಾರಿಯೋ ಕರಾಟೆ ಚಾಂಪಿಯನ್ ಶಿಪ್‍ನಲ್ಲಿ ಭಾರತಕ್ಕೆ 2 ಬೆಳ್ಳಿ ಹಾಗೂ 14 ಕಂಚಿನ ಪದಕಗಳು ಲಭಿಸಿವೆ. ರಾಷ್ಟ್ರೀಯ ಶಿಟಾರಿಯೋ ಕರಾಟೆ ಫೆಡರೇಶನ್ ಉಪಾಧ್ಯಕ್ಷ ಹಾಗೂ ಏಷಿಯನ್ ತೀರ್ಪುಗಾರರೂ ಆಗಿರುವ ಚೆಪ್ಪುಡಿರ ಅರುಣ್ ಮಾಚಯ್ಯ ನೇತೃತ್ವದಲ್ಲಿ ಭಾರತದಿಂದ ಒಟ್ಟು 53 ಮಂದಿ ಕರಾಟೆ ಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.