ಚೆಟ್ಟಳ್ಳಿ, ನ. 26: ರೈತ ಸಹಕಾರಿಗಳ ಸಹಕಾರದಿಂದಲೇ ಸಹಕಾರ ಸಂಘಗಳು ಅಭಿವೃದ್ಧಿ ಪಥದಲ್ಲಿ ಸಾಗಲು ಸಾಧ್ಯವಾಗಿದೆ ಎಂದು ಚೆಟ್ಟಳ್ಳಿ ಸಹಕಾರ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ನುಡಿದರು.

ಸಹಕಾರ ಸಂಘಕ್ಕೆ ಸೇರಬೇಕಾದ ಜಾಗದ ವಿವಾದ ನ್ಯಾಯಾಲದಲ್ಲಿದ್ದು, ನ್ಯಾಯಪರ ಹೋರಾಟಕ್ಕೆ ಜಯ ಸಿಗಲಿದೆ. ಚೆಟ್ಟಳ್ಳಿ ಸಹಕಾರ ಸಂಘದ ರೈತ ಸದಸ್ಯರು, ಆಡಳಿತ ಮಂಡಳಿ ಸದಸ್ಯರು ಹಾಗೂ ಸಿಬ್ಬಂದಿಗಳು ಸೇರಿ ನರೇಂದ್ರ ಮೋದಿ ಸಹಕಾರ ಭವನ ವನ್ನು ಕಟ್ಟಿದ ಕೀರ್ತಿ ಚೆಟ್ಟಳ್ಳಿ ಸಹಕಾರ ಸಂಘದೆಂದರು. ಸಂಘದ ಹಾಲಿ ನಿರ್ದೇಶಕ ಹೆಚ್.ಎಸ್. ತಿಮ್ಮಪ್ಪಯ್ಯ ಮಾತನಾಡಿ, ಹತ್ತು ವರ್ಷಗಳಿಂದ ಉಪಾಧ್ಯಕ್ಷರಾಗಿ ಹಾಗೂ ನಿರ್ದೇಶಕ ನಾಗಿ ಆಯ್ಕೆ ಮಾಡಿದ್ದಕ್ಕೆ ಅಭಿನಂದಿಸಿ ದರು. ಮಾಜಿ ನಿರ್ದೇಶಕ ಚೋಳಪಂಡ ಪೂವಯ್ಯ ಅವರಿಗೆ ಬಲ್ಲಾರಂಡ ಕಂಠಿ ಕಾರ್ಯಪ್ಪ ಸನ್ಮಾನಿಸಿದರು. ಸಹಕಾರ ಸಂಘದ ಅಭಿವೃದ್ಧಿಯಾಗಬೇಕೆಂದು ಚೋಳಪಂಡ ಪೂವಯ್ಯ ಆಶಿಸಿದರು.

ಚೆಟ್ಟಳ್ಳಿ ಗಾ.ಪಂ. ಸದಸ್ಯೆ ಮೇರಿ ಅಂಬುದಾಸ್ ಮಾತನಾಡಿ, ಸಹಕಾರ ಸಂಘದಲ್ಲಿ ಮತಚಲಾಯಿಸಿ ಗೆಲ್ಲಿಸಿದ ರೈತರಿಗೆ ಅಭಿನಂದಿಸುವ ಹಾಗೂ ಗೌರವಿಸುವ ಇಂತಹ ವಿಶೇಷ ಕಾರ್ಯಕ್ರಮವಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಉಪಾಧ್ಯಕ್ಷೆ ಹಾಲಿ ನಿರ್ದೇಶಕಿ ಪುತ್ತರಿರ ಎಂ. ಸೀತಮ್ಮ ಸಹಕಾರಿ ಸಂಘದ ಚುನಾವಣೆಯಲ್ಲಿ ಉತ್ತಮ ಆಡಳಿತ ನಡೆಸಲು ಅವಕಾಶ ನೀಡಿದ್ದಕ್ಕೆ ಶ್ಲಾಘಿಸಿದರು. ವೇದಿಕೆಯಲ್ಲಿ ಉಪಾಧ್ಯಕ್ಷ ಮರದಾಳು ಉಲ್ಲಾಸ, ನಿರ್ದೇಶಕರುಗಳಾದ ಕಣಜಾಲು ಪೂವಯ್ಯ, ಕೊಂಗೇಟಿರ ಅಚ್ಚಪ್ಪ, ಕಾಶಿ, ಶಾಂತಪ್ಪ, ವಾಣಿ ಕಾಳಪ್ಪ, ಪೇರಿಯನ ಪೂಣಚ್ಚ, ನೂಜಿಬೈಲು ನಾಣಯ್ಯ, ಗ್ರಾ. ಪಂ. ಸದಸ್ಯರಾದ ರವಿ, ಸೀತಮ್ಮ, ಮಾಲಾಶ್ರೀ, ಪೊರಿಮಂಡ ಧನು ದೇವಯ್ಯ, ಸಂಘದ ಆಂತರಿಕ ಲೆಕ್ಕ ಪರಿಶೋಧಕ ರಮೇಶ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪೂರ್ಣಿಮ ಹಾಜರಿದ್ದರು.