ಭಾಗಮಂಡಲ, ನ. 26: ಜಿಲ್ಲೆಯ ಸಹಕಾರಿ ಸಂಸ್ಥೆಗಳು ವಿಸ್ತಾರವಾಗಿ ಬೆಳೆದಿದ್ದು ರೈತರಿಗೆ ಗುಣಮಟ್ಟದ ಸೌಲಭ್ಯ ಒದಗಿಸುವದರೊಂದಿಗೆ ದೇಶದ ಸಹಕಾರಿ ಕ್ಷೇತ್ರಕ್ಕೆ ಮಾದರಿ ಯಾಗಿವೆ ಎಂದು ರಾಜ್ಯಸಹಕಾರ ಮಹಾಮಂಡಳಿ ನಿರ್ದೇಶಕ ಎ.ಕೆ. ಮನುಮುತ್ತಪ್ಪ ಹೇಳಿದರು.

ಕಾರುಗುಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣ ದಲ್ಲಿ 65ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ನಡೆದ ಯುವಜನ ಮಹಿಳಾ ಮತ್ತು ಅಬಲ ವರ್ಗಕ್ಕಾಗಿ ಸಹಕಾರ ಸಂಸ್ಥೆಗಳ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿ ದರು. ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರಗಳು ನಿಸ್ವಾರ್ಥ ಸೇವೆ ಸಲ್ಲಿಸುತ್ತಾ ಅದ್ಭುತ ಸಾಧನೆ ಮಾಡಿ ಆರ್ಥಿಕ ಅಭಿವೃದ್ದಿ ಕಾಣುತ್ತಿದೆ. ಸಂಘಗಳು ಪಾರದರ್ಶಕ ಆಡಳಿತ ನಡೆಸುವ ಮೂಲಕ ಸಂಸ್ಥೆಯ ಪ್ರಗತಿಗೆ ಶ್ರಮಿಸಬೇಕು ಎಂದರು.

ಕಾರುಗುಂದ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ನಾಪಂಡ ರ್ಯಾಲಿ ಮಾದಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಉಪಾಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಸಹಕಾರ ಯೂನಿಯನ್‍ನ ನಿರ್ದೇಶಕರಾದ ಕನ್ನಂಡ ಸಂಪತ್, ಮುಕ್ಕಾಟಿರ ಪ್ರೇಮಾಸೋಮಯ್ಯ ಕೊಡಪಾಲ ಗಣಪತಿ ನಂದಿನೆರವಂಡ ರವಿಬಸಪ್ಪ, ಕೋಡಿರ ಎಂ. ತಮ್ಮಯ್ಯ ಬೆಟ್ಟಗೇರಿ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ್ಷ ತಳೂರ್ ಕಿಶೋರ್ ಕುಮಾರ್, ಚೇರಂಬಾಣೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಾಚರಣಿಯಂಡ ಸುಮನ್, ಕಾರುಗುಂದ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಕೊಪ್ಪಡ ಸಿ. ಪೆಮ್ಮಯ್ಯ ಉಪಸ್ಥಿತರಿದ್ದರು. ದಿನದ ಮಹತ್ವದ ಕುರಿತು ಪ್ರಾಂಶುಪಾಲ ಪುಟ್ಟಸ್ವಾಮಿ ಮಾಹಿತಿ ನೀಡಿದರು. ಕಾರುಗುಂದ ಗ್ರಾಮದ ಮೊಟ್ಟೆಯಂಡ ಕೆ. ಮೇದಪ್ಪ ಬೇಂಗೂರು ಗ್ರಾಮದ ತೇಲಪಂಡ ಕೆ. ಮಂದಣ್ಣ ಕಡಿಯತ್ತೂರು ಗ್ರಾಮದ ನೆಯ್ಯಣೀರ ಬಿ.ಈರಪ್ಪ ಅರುವತ್ತೋಕ್ಲು ಗ್ರಾಮದ ಮುಕ್ಕಾಟಿರ ಕುಂಞಪ್ಪ,ಅವಂದೂರು ಗ್ರಾಮದ ಕಾಳೆರಮ್ಮನ ಪಾಪಯ್ಯ, ಕೊಟ್ಟೂರು ಗ್ರಾಮದ ಅಳಮಂಡ ಜೈಗಣಪತಿ, ಹಾಗೂ ಬಿ ಬಾಡಗ ಗ್ರಾಮದ ನಡುವಟ್ಟೀರ ಅನಂತ್ ಅವರನ್ನು ಸನ್ಮಾನಿಸಲಾಯಿತು.