ಕೂಡಿಗೆ, ನ. 27: ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದ ಕೂಡಿಗೆಯ ಕೃಷಿ ಕ್ಷೇತ್ರದ ವ್ಯಾಪ್ತಿಯಲ್ಲಿ ಹಾಗೂ ಕೃಷಿ ಕೇತ್ರಕ್ಕೆ ಸೇರಿದ 80 ಎಕರೆ ಜಾಗವನ್ನು ಬೆಂಗಳೂರು ವಿಮಾನಯಾನ ಸಂಸ್ಥೆಯ ಅಧಿಕಾರಿಗಳು ಪರಿಶೀಲಿಸಿದರು.

ಕಳೆದ 4 ವರ್ಷಗಳ ಹಿಂದೆ ಕೂಡಿಗೆಯಲ್ಲಿ ವಿಮಾನ ನಿಲ್ದಾಣ ಮಾಡುವ ಬಗ್ಗೆ ಸರಕಾರದ ಮಟ್ಟದಲ್ಲಿ ಅರ್ಜಿವ್ಯವಹಾರ ನಡೆದಿತ್ತು. ಈ ಮೇರೆಗೆ ಇಂದು ಬೆಂಗಳೂರಿನಿಂದ ಅಧಿಕಾರಿಗಳು ಹಾಗೂ ತಾಲೂಕು ಕಂದಾಯ ಅಧಿಕಾರಿಗಳು ಸ್ಧಳ ಪರಿಶೀಲಿಸಿ, ಕಂದಾಯ ಅಧಿಕಾರಿಗಳಿಂದ ಮಾಹಿತಿ ಪಡೆದರು. ಅಧಿಕಾರಿಗಳ ಮಾಹಿತಿಯ ಪ್ರಕಾರ ವಿಮಾನ ರನ್ ವೇಗೆ ಜಾಗದ ಕೊರತೆ ಇರುವದು ತಿಳಿದು ಬಂದಿದೆ. ಕೃಷಿ ಇಲಾಖೆಯ ಜಾಗವನ್ನು ಸೈನಿಕ ಶಾಲೆಗೆ ಹೆಚ್ಚುವರಿ ನೀಡಿರುವದರಿಂದ ಈ ಯೋಜನೆಯನ್ನು ಕೂಡಿಗೆಯಿಂದ ಕೈ ಬಿಡುವದು ಖಚಿತವಾಗಿದೆ ಎಂದು ತಿಳಿದುಬಂದಿದೆ.