ಶ್ರೀಮಂಗಲ, ನ. 27: ಸುಮಾರು 30 ವರ್ಷಗಳಿಂದ ಕಾರಣಾಂತರ ದಿಂದ ಮುಚ್ಚಿ ಹೋಗಿದ್ದ ಹುದಿಕೇರಿ ಗ್ರಾಮ ¥ಂಚಾಯಿತಿ ವ್ಯಾಪ್ತಿಯ ಹೈಸೊಡ್ಲೂರು ಗ್ರಾಮದ ಐತಿಹಾಸಿಕ ಪಯ್ಯಡ ಮಂದ್ ಸಂಭ್ರಮ-ಸಡಗರದೊಂದಿಗೆ ಪುನರಾ ರಂಭವಾಗಿದೆ.

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮತ್ತು ಹೈಸೊಡ್ಲೂರು ಗ್ರಾಮದ ಶ್ರೀ ಮಹಾದೇವ ದೇವಸ್ಥಾನ ಸಮಿತಿಯೊಂದಿಗೆ ಗ್ರಾಮದ ತಕ್ಕ ಮುಖ್ಯಸ್ಥರು ಸೇರಿ ಮಂದ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪೆಮ್ಮಂಡ ಪೊನ್ನಪ್ಪ ಅವರು ಮಂದ್‍ನ ಸುತ್ತ ಸಾಂಪ್ರದಾಯಿಕ ಪುತ್ತರಿ ಕೋಲಾಟ್ ಆಡುವ ಮೂಲಕ ಮಂದ್ ಪುನರಾರಂಭ ಮಾಡಿದರು.

ಈ ಸಂದರ್ಭ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಊರು ತಕ್ಕ ಬಾನಂಗಡ ಎ. ರಾಜಶೇಖರ್ ಅವರು ಕಾರಣಾಂತರಗಳಿಂದ ಸುಮಾರು 3 ದಶಕದಿಂದ ಮುಚ್ಚಿ ಹೋಗಿದ್ದ ಪಯ್ಯಡ ಮಂದ್ ಇದೀಗ ಕೊಡವ ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ಪುನರಾ ರಂಭಗೊಂಡಿರುವದು ತುಂಬಾ ಸಂತಸದ ವಿಶಯ. ಮುಂದೆಯೂ ಈ ಮಂದ್ ಅನ್ನು ಚೆನ್ನಾಗಿ ನಡೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮ ಗ್ರಾಮದ ಪ್ರತಿಯೊಬ್ಬರದ್ದು ಆಗಿದೆ. ಮುಂದಿನ ವರ್ಷದಿಂದ ಮಂದ್‍ನ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಮಹಿಳೆಯರು ಪಾಲ್ಗೊಳ್ಳುವಂತಾಗಬೇಕು. ಅದಕ್ಕಾಗಿ ಮುಂದಿನ ಪುತ್ತರಿ ಊರ್ ಮಂದ್ ಸಂದರ್ಭ ಮಹಿಳೆಯರ ಉಮ್ಮತಾಟ್ ಪ್ರದರ್ಶನಕ್ಕೆ ಚರ್ಚಿಸಿ ಅವಕಾಶ ಕಲ್ಪಿಸಬೇಕಾಗಿದೆ ಎಂದರು.

ಹೈಸೊಡ್ಲೂರು ಮಹಾದೇವ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಬಯವಂಡ ಜಿ. ಮೋಹನ್ ಅವರು ಮಾತನಾಡಿ, ಕೊಡವ ಸಾಂಸ್ಕøತಿಕ ಮತ್ತು ಧಾರ್ಮಿಕ ಕೆಂದ್ರವಾದ ಮಂದ್‍ಗಳು ತನ್ನ ಗತವೈಭವ ಕಳೆದುಕೊಳ್ಳಲು ಕೊಡವರ ಜನಸಂಖ್ಯೆ ಗಣನೀಯವಾಗಿ ಕ್ಷೀಣಿಸುತ್ತಿರುವದು ಕಾರಣವಾಗಿದೆ. ಕೊಡವರ ವಿಶಿಷ್ಟ ಸಂಸ್ಕøತಿ ಉಳಿಸಿಕೊಳ್ಳಲು ವಿಷೇಶ ಗಮನ ಹರಿಸಬೇಕಾಗಿದೆ. 100 ವರ್ಷಕ್ಕೆ ಹಿಂದೆ ಕೊಡವರ ಸ್ಥಿತಿಗತಿ ಹಾಗೂ ಈಗಿನ ಸ್ಥಿತಿಗತಿ ಬಗ್ಗೆ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಯನದ ದಾಖಲೆ ಮಾಡಿ, ಸರಕಾರದ ಮಟ್ಟದಿಂದ ಕೊಡವ ಸಮುದಾಯದ ರಕ್ಷಣೆಗೆ ಮುಂದಾಗಬೇಕು ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಅಕಾಡೆಮಿಯ ಅಧ್ಯಕ್ಷ ಪೆಮ್ಮಂಡ ಪೊನ್ನಪ್ಪ ಅವರು, ಮುಚ್ಚಿ ಹೋಗಿದ್ದ ಈ ಮಂದ್ ತೆರಿಯುವ ಸುಯೋಗ ದೊರೆತ್ತದ್ದು ಸಂತಸವಾಗಿದೆ. ಪ್ರಯತ್ನ ಪಡದೇ ಏನು ಸಾಧನೆ ಸಾಧ್ಯವಿಲ್ಲ. ಮಂದ್‍ಗಳ ಮಹತ್ವ ಮತ್ತು ಕೊಡವ ಸಂಸ್ಕøತಿ ಬಗ್ಗೆ ಕಿರಿಯರಲ್ಲಿ ಅರಿವು-ಅಭಿಮಾನ ಮೂಡಿಸುವ ಕೆಲಸ ಹಿರಿಯರಿಂದ ಹಸ್ತಾಂತರ ಆಗಬೇಕಾಗಿದೆ. ಇಂದು ತೆರೆದಿರುವ ಮಂದ್ ಮುಂದೆ ಚೆನ್ನಾಗಿ ನಡೆಯಬೇಕು. ಮಂದ್‍ಗಳಲ್ಲಿ ಸಾಂಸ್ಕøತಿಕ ಕಾರ್ಯಕ್ರಮ ನಡೆಸುತ್ತ ಅದರ ಜೀವಂತಿಕೆ ಕಾಪಾಡಿ ಕೊಳ್ಳಬೇಕು. ಹಾಗೆಯೇ ಮತ್ತೊಂದು ಮಂದ್, ತೂಚಮ್ಮಕೇರಿಯಲ್ಲಿ ಹಲವು ವರ್ಷದಿಂದ ಮುಚ್ಚಿ ಹೋಗಿರುವದನ್ನು ತೆರೆಯಲು ಗ್ರಾಮಸ್ಥರು ಆಸಕ್ತಿ ತೆಳೆದಿರುವದು ನೋಡಿದರೇ ಇಂದಿನ ಯುವ ಪೀಳಿಗೆಗೆ ಮತ್ತು ಜನರಿಗೆ ಮಂದ್‍ನ ಮಹತ್ವದ ಅರಿವು ಮೂಡುತ್ತಿದೆ ಎಂದರು. ಈ ಸಂದರ್ಭ ಪಯ್ಯಡ ಮಂದ್ ತಂಡ ಮತ್ತು ಹುದಿಕೇರಿ ಶ್ರೀ ಮಹಾದೇವ ಯುವಕ ಸಂಘ ತಂಡದಿಂದ ಪುತ್ತರಿ ಕೋಲಾಟ್, ಪರೆಯಕಳಿ ಪ್ರದರ್ಶನ ಸಡೆಯಿತು.

ಪಾರುವಂಗಡ ವನಜಾ ಸುರೇಶ್ ಪ್ರಾರ್ಥಿಸಿ, ಶ್ರೀ ಮಹಾದೇವ ದೇವಸ್ಥಾನ ಆಡಳಿತ ಮಂಡಳಿ ಕಾರ್ಯದರ್ಶಿ ಮಂಡಂಗಡ ಅಶೋಕ್ ಸ್ವಾಗತಿಸಿ, ಅಕಾಡೆಮಿ ಸದಸ್ಯರುಗಳಾದ ಚಂಗುಲಂಡ ಸೂರಜ್ ಸ್ವಾಗತಿಸಿ, ಅಂಗೀರ ಕುಸುಮ್ ನಿರೂಪಿಸಿ, ಬೊಳ್ಳಜಿರ ಅಯ್ಯಪ್ಪ ವಂದಿಸಿದರು. ಮಹಿಳೆಯರು, ಮಕ್ಕಳು, ಹಿರಿಯರು ಸಾಮೂಹಿಕವಾಗಿ ವಾಲಗತಾಟ್‍ಗೆ ಹೆಜ್ಜೆ ಹಾಕುವ ಮೂಲಕ ಪುನರುಜ್ಜೀವನ ಕಂಡ ಪಯ್ಯಡ ಮಂದ್ ಕಾರ್ಯಕ್ರಮದಲ್ಲಿ ಸಂಭ್ರಮಿಸಿದರು.